AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಕ್ಕರೆ ಮಾತ್ರವಲ್ಲ ಉಪ್ಪು ಕೂಡಾ ಮಧುಮೇಹ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ: ಅಧ್ಯಯನ

ಅತಿಯಾದ ಸಿಹಿ ಸೇವನೆಯಿಂದ ಮಧುಮೇಹ ಕಾಯಿಲೆ ಬರುದ ಸಾಧ್ಯತೆ ಹೆಚ್ಚು ಎಂದು ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ ಸಕ್ಕರೆ ಮಾತ್ರಲ್ಲದೆ, ಅತಿಯಾದ ಉಪ್ಪು  ಸೇವನೆಯೂ  ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಮೇರಿಕಾದ  ಟುಲೇನ್ ವಿಶ್ವವಿದ್ಯಾನಿಲಯದ ಹೊಸ ಸಂಶೋಧನೆಯೊಂದು  ಕಂಡುಹಿಡಿದಿದೆ.

ಸಕ್ಕರೆ ಮಾತ್ರವಲ್ಲ ಉಪ್ಪು ಕೂಡಾ ಮಧುಮೇಹ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ: ಅಧ್ಯಯನ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Nov 04, 2023 | 4:02 PM

Share

ಮಧುಮೇಹವು ಒಂದು ದೀರ್ಘಕಾಲಿನ ಕಾಯಿಲೆಯಾಗಿದ್ದು,  ಇತ್ತೀಚಿನ ದಿನಗಳಲ್ಲಿ ಕೆಟ್ಟ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣ, ಲಕ್ಷಾಂತರ ಜನರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಸರಿಯಾದ ಆಹಾರಕ್ರಮದ ಪಾಲನೆಯಿಂದ ಈ ಕಾಯಿಲೆಯನ್ನು ನಿಯಂತ್ರದಲ್ಲಿಟ್ಟುಕೊಳ್ಳಬಹುದು. ಅಲ್ಲದೆ ಹೆಚ್ಚು ಸಿಹಿ  ತಿನ್ನಬಾರದು ಇದರಿಂದ ಟೈಪ್ 2 ಮಧುಮೇಹದ ಅಪಾಯವು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹೌದು ಸಿಹಿ ಪದಾರ್ಥಗಳ ಅತಿಯಾದ ಸೇವನೆಯಿಂದ  ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಹೆಚ್ಚಾಗುತ್ತದೆ. ಇಷ್ಟು ಮಾತ್ರವಲ್ಲದೆ ಅತಿಯಾದ ಉಪ್ಪು ಸೇವನೆಯೂ ಕೂಡ ಮಧುಮೇಹ ಕಾಯಿಲೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.  ಅಮೇರಿಕಾದ ಟುಲೇನ್ ವಿಶ್ವವಿದ್ಯಾನಿಲಯದ ಈ ಹೊಸ ಸಂಶೋಧನೆಯು ಟೇಬಲ್ ಸಾಲ್ಟ್ನ ಅತಿಯಾಗಿ ಬಳಕೆ ಅಥವಾ ಆಹಾರದ ರುಚಿಯನ್ನು ಹೆಚ್ಚಿಸಲು ಟೇಬಲ್ ಸಾಲ್ಟ್ನ್ನು ಆಹಾರಕ್ಕೆ ಪದೇ ಪದೇ ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ ಎಂದು ಹೇಳಿದೆ. ಹಾಗಾದರೆ ಉಪ್ಪು ಮತ್ತು ಮಧುಮೇಹದ ನಡುವಿನ ಸಂಬಂಧ ಏನು ಎಂಬುದನ್ನು ತಿಳಿಯೋಣ.

ಉಪ್ಪು ಮತ್ತು ಮಧುಮೇಹದ ಬಗೆಗಿನ ಹೊಸ ಸಂಶೋಧನೆ  ಏನು ಹೇಳುತ್ತದೆ:

ಮೇಯೋ ಕಿನಿಕ್ ಪ್ರೊಸೀಡಿಂಗ್ಸ್ ನಿಯತಕಾಯಲಿಕೆಯಲ್ಲಿ ಪ್ರಕಟವಾದ ಈ ಅಧ್ಯಯನವು 40,000 ಕ್ಕಿಂತ ಹೆಚ್ಚು ವಯಸ್ಕರರ ದೈನಂದಿನ ಆಹಾರ ಪದ್ಧತಿಯ ಬಗ್ಗೆ ಅಧ್ಯಯನ ಮಾಡಿದ್ದು, ಜೊತೆಗೆ ಅಧ್ಯಯನಕ್ಕೆ ಒಳಪಟ್ಟವರ  ಉಪ್ಪು ತಿನ್ನುವ ಪ್ರಮಾಣದ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ಸರಾಸರಿ 12 ವರ್ಷಗಳ ಅಧ್ಯಯನ ಅನುಸರಣೆಯಲ್ಲಿ ಟೈಪ್ 2 ಮಧುಮೇಹದ ಪ್ರಕರಣಗಳು ಸುಮಾರು 13,000 ಜನರಲ್ಲಿ ಕಂಡುಬಂದಿವೆ. ಕಡಿಮೆ ಉಪ್ಪು ತಿನ್ನುವವರಿಗೆ ಹೋಲಿಸಿದರೆ, ನಿಯಮಿತವಾಗಿ ಹೆಚ್ಚು ಉಪ್ಪು (ಟೇಬಲ್ ಸಾಲ್ಟ್) ಬಳಕೆ ಮಾಡುವವರು  ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯು 39% ಶೇಕಡದಷ್ಟು ಹೆಚ್ಚಿದೆ ಎಂಬುದನ್ನು ಕಂಡುಹಿಡಿದಿದೆ.  ಟುಲೇನ್  ಯುನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಆಂಡ್ ಟ್ರಾಪಿಕಲ್ ಮೆಡಿಸನ್ ಫ್ರೊಫೆಸರ್ ಮತ್ತು ಈ ಅಧ್ಯಯನದ ಪ್ರಮುಖ ಲೇಖಕ ಡಾ. ಕ್ವಿಯು ಹೇಳುವಂತೆ, ಅತಿಯಾದ ಉಪ್ಪು ಸೇವವೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ರಕ್ತದೊತ್ತಡ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ ಇದು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದ್ದಾರೆ.

ಉಪ್ಪು ಮಧುಮೇಹದ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ?

ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಧಿಕವಾಗುವುದು ಹೇಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಂಶೋಧಕರ ಪ್ರಕಾರ, ಆಹಾರಕ್ಕೆ ಉಪ್ಪನ್ನು ಸೇರಿಸುವುದರಿಂದ ಜನರು ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವನೆ ಮಾಡುತ್ತಾರೆ, ಇದು ಬೊಜ್ಜು ಮತ್ತು ದೇಹದಲ್ಲಿ  ಉರಿಯೂತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಇದರಿಂದ  ಮಧುಮೇಹದ ಅಪಾಯವನ್ನು ಹೆಚ್ಛಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಧುಮೇಹ ಬರುವ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಂಡುಬರುತ್ತದೆ

ಉಪ್ಪು ಸೇವನೆಯನ್ನು ಕಡಿಮೆ ಮಾಡುವುದು ಹೇಗೆ?

ಆಹಾರದ ರುಚಿಯನ್ನು ಹೆಚ್ಚಿಸಲು ಅನೇಕರು  ಹೆಚ್ಚುವರಿ ಉಪ್ಪನ್ನು ಆಹಾರದ ಮೇಲೆ ಚಿಮುಕಿಸುತ್ತಾರೆ. ಅಂದರೆ ಟೇಬಲ್ ಸಾಲ್ಟ್ ಬಳಕೆ ಮಾಡುತ್ತಾರೆ. ಇದರ ಬದಲು ನೀವು ಸೇವಿಸುವ ಆಹಾರಕ್ಕೆ ಹೆಚ್ಚುವರಿಯಾಗಿ ನಿಂಬೆ ರಸವನ್ನು ಸೇರಿಸಬಹುದು. ನಿಮ್ಮ ಆಹಾರ ಪದ್ಧತಿಯಲ್ಲಿನ ಈ ಸಣ್ಣ ಬದಲಾವಣೆಯು ಮಧುಮೇಹದ ಅಪಾಯದಿಂದ ನಿಮ್ಮನ್ನು ರಕ್ಷಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: