Grape Halwa: ದ್ರಾಕ್ಷಿ ಸೀಸನ್ ಆರಂಭ: ಬಂತು ನೋಡಿ ದ್ರಾಕ್ಷಿ ಹಲ್ವಾ, ಮಾಡುವ ಸುಲಭ ವಿಧಾನ ಇಲ್ಲಿದೆ

ದ್ರಾಕ್ಷಿ ಸೀಸನ್ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯ ತುಂಬೆಲ್ಲಾ ದ್ರಾಕ್ಷಿ ಹಣ್ಣುಗಳದ್ದೇ ಕಾರುಬಾರು ಜೋರಾಗಿಯೇ ಇರುತ್ತದೆ. ಹೀಗಾಗಿ ಹಸಿರು, ಕೆಂಪು, ಕಪ್ಪು, ಹಾಗೂ ಗುಲಾಬಿ ಹೀಗೆ ನಾನಾ ಬಣ್ಣ ಬಣ್ಣದ ದ್ರಾಕ್ಷಿಗಳು ದ್ರಾಕ್ಷಿ ಪ್ರಿಯರ ಗಮನ ಸೆಳೆಯುತ್ತದೆ. ಎಲ್ಲರೂ ಇಷ್ಟಪಟ್ಟು ಸೇವಿಸುವ ಈ ದ್ರಾಕ್ಷಿಯಲ್ಲಿ ಆರೋಗ್ಯ ಪ್ರಯೋಜನಗಳು ಅಧಿಕವಾಗಿದೆ. ವೈನ್‌ ತಯಾರಿಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ನೀವೇನಾದರೂ ಸ್ವೀಟ್ ಪ್ರಿಯರಾಗಿದ್ದರೆ ಹಸಿರು ಬಣ್ಣದ ದ್ರಾಕ್ಷಿಯಿಂದ ಹಲ್ವಾ ತಯಾರಿಸಿ ಸವಿಯಬಹುದು. ಸೋಶಿಯಲ್ ಮೀಡಿಯಾದಲ್ಲಿ ತಾಜಾ ದ್ರಾಕ್ಷಿಯನ್ನು ಬಳಸಿ ಹಲ್ವಾ ಮಾಡುವ ರೆಸಿಪಿಯ ವಿಡಿಯೋಯೊಂದು ವೈರಲ್ ಆಗಿವೆ.

Grape Halwa: ದ್ರಾಕ್ಷಿ ಸೀಸನ್ ಆರಂಭ: ಬಂತು ನೋಡಿ ದ್ರಾಕ್ಷಿ ಹಲ್ವಾ, ಮಾಡುವ ಸುಲಭ ವಿಧಾನ ಇಲ್ಲಿದೆ
Edited By:

Updated on: Feb 15, 2024 | 5:48 PM

ದ್ರಾಕ್ಷಿ ಎಂದರೆ ಎಲ್ಲರಿಗೂ ಇಷ್ಟವೇ. ಗೊಂಚಲು ಗೊಂಚಲಾಗಿರುವ ಈ ದ್ರಾಕ್ಷಿಯನ್ನು ಎಲ್ಲರ ಸಹಜವಾಗಿ ಎಲ್ಲರನ್ನು ಆಕರ್ಷಿಸುತ್ತದೆ. ಸ್ವಲ್ಪ ಹುಳಿ ಸ್ವಲ್ಪ ಸಿಹಿಯಾಗಿರುವ ಈ ದ್ರಾಕ್ಷಿಯಲ್ಲಿ ನೀರಿನಾಂಶವು ಅಧಿಕವಾಗಿರುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಫಾಸ್ಫರಸ್ ಫೋಲೇಟ್, ಸೆಲೆನಿಯಂ ಸೇರಿದಂತೆ ಇನ್ನಿತ್ತರ ಪೋಷಕಾಂಶಗಳು ಹೇರಳವಾಗಿದ್ದು ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಬೇಸಿಗೆ ಕಾಲದಲ್ಲಿ ದ್ರಾಕ್ಷಿ ಸೀಸನ್ ಆರಂಭವಾಗುತ್ತಿದ್ದಂತೆ ಎಲ್ಲರೂ ಕೂಡ ಈ ಹಣ್ಣನ್ನು ಖರೀದಿಸುತ್ತಾರೆ. ಒಂದು ವೇಳೆ ಮನೆಗೆ ಹಸಿರು ಬಣ್ಣದ ದ್ರಾಕ್ಷಿಯನ್ನು ತಂದಿದ್ದರೆ, ಹಾಳಾಗುತ್ತದೆ ಎಂದು ಚಿಂತಿತರಾಗುವುದು ಬೇಡ. ಮನೆಯಲ್ಲಿರುವ ಕೆಲವೇ ಕೆಲವು ವಸ್ತುಗಳನ್ನು ಬಳಸಿ ಈ ದ್ರಾಕ್ಷಿ ಹಲ್ವಾ ರೆಸಿಪಿಯನ್ನೊಮ್ಮೆ ಮಾಡಿ ಸವಿಯಬಹುದು. ಸೋಶಿಯಲ್ ಮೀಡಿಯಾದಲ್ಲಿ ಹಸಿರು ಬಣ್ಣದ ದ್ರಾಕ್ಷಿ ಹಲ್ವಾ ಮಾಡುವ ವಿಧಾನದ ವಿಡಿಯೋವೊಂದು ವೈರಲ್ ಆಗಿವೆ.

ಸೋಶಿಯಲ್ ಮೀಡಿಯಾದಲ್ಲಿ ವಿವಿಧ ರೆಸಿಪಿಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ದ್ರಾಕ್ಷಿ ಹಲ್ವಾ ಮಾಡುವ ವಿಡಿಯೋವನ್ನು ಫುಡ್ ಅಡ್ಡಿಕ್ಟ್ಸ್ ಬೈ ಯುವರ್ ಶ್ರಾವಣಿ ಎನ್ನುವ ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋದ ಪ್ರಾರಂಭದಲ್ಲಿ ತಾಜಾ ದ್ರಾಕ್ಷಿಯನ್ನು ತೊಳೆದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿ, ಜರಡಿಯಲ್ಲಿ ಸೋಸಲಾಗಿದೆ. ಸೋಸಿದ ದ್ರಾಕ್ಷಿರಸಕ್ಕೆ ಕಾನ್ಫಲರ್ ಹಾಗೂ ಫುಡ್ ಕಲರ್ ಸೇರಿಸಿ ಚೆನ್ನಾಗಿ ಬೆರೆಸಲಾಗಿದೆ. ಇತ್ತ ಬಟ್ಟಲಿಗೆ ತುಪ್ಪ ಸವರಿ ಡ್ರೈ ಫ್ರೂಟ್ಸ್ ಗಳನ್ನು ಹಾಕಲಾಗಿದೆ. ಮತ್ತೊಂದೆಡೆ ಪ್ಯಾನ್ ಮೇಲೆ ಸಕ್ಕರೆ ಪಾಕವನ್ನು ಸಿದ್ಧಗೊಳಿಸಲಾಗಿದೆ.

ಇದನ್ನೂ ಓದಿ: ಈ ವಸ್ತುಗಳನ್ನು ಬಳಸಿದರೆ ಅಡುಗೆ ಮನೆಯ ಸಿಂಕ್ ಸ್ವಚ್ಛಗೊಳಿಸುವುದು ಕಷ್ಟವೇನಲ್ಲ

ವಿಡಿಯೋ ಇಲ್ಲಿದೆ ನೋಡಿ:

ಪಾಕವು ಸಿದ್ಧವಾಗುತ್ತಿದ್ದಂತೆ ಈಗಾಗಲೇ ಮಾಡಿಟ್ಟ ದ್ರಾಕ್ಷಿರಸವನ್ನು ಸೇರಿಸಲಾಗಿದೆ. ಈ ಮಿಶ್ರಣವು ತಳ ಬಿಡುತ್ತಿದ್ದಂತೆ ಗೋಡಂಬಿ ಹಾಗೂ ಒಂದೆರಡು ಚಮಚ ತುಪ್ಪ ಹಾಕಲಾಗಿದೆ. ಕೊನೆಗೆ ತುಪ್ಪ ಸವರಿಟ್ಟ ಬಟ್ಟಲಿಗೆ ಈ ಮಿಶ್ರಣವನ್ನು ಸುರಿದು ತಣ್ಣಗಾದ ಬಳಿಕ ಬೇಕಾದ ಆಕಾರದಲ್ಲಿ ಕತ್ತರಿಸಲಾಗಿದೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಹಲ್ವಾ ಪ್ರಿಯರು ವಿಡಿಯೋವನ್ನು ನೋಡಿ ಹೀಗೂ ಹಲ್ವಾ ಮಾಡಬಹುದಾ ಎಂದು ಅಚ್ಚರಿ ಪಟ್ಟಿದ್ದಾರೆ. ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಹಲ್ವಾ ಮಾಡುವ ವಿಧಾನವನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Thu, 15 February 24