ಈ ವಸ್ತುಗಳನ್ನು ಬಳಸಿದರೆ ಅಡುಗೆ ಮನೆಯ ಸಿಂಕ್ ಸ್ವಚ್ಛಗೊಳಿಸುವುದು ಕಷ್ಟವೇನಲ್ಲ

ಗೃಹಿಣಿಯರು ತಮ್ಮ ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲಿಯೇ ಕಳೆಯುತ್ತಾರೆ. ಮನೆಯ ಸದಸ್ಯರಿಗೆ ರುಚಿ ರುಚಿಯ ಅಡುಗೆಯನ್ನು ಮಾಡಿ ಅವರನ್ನು ಖುಷಿ ಪಡಿಸುವುದು ಎಷ್ಟು ಮುಖ್ಯವೋ, ಅಡುಗೆ ಮನೆಯ ಸ್ವಚ್ಛತೆಯೂ ಕೂಡ ಅಷ್ಟೇ ಮುಖ್ಯವಾಗುತ್ತದೆ. ಅದರಲ್ಲಿಯು ಅಡುಗೆ ಮನೆಯ ಸಿಂಕ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಹೋದರೆ ಸಿಂಕ್ ನಲ್ಲಿ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಕೆಲವೊಮ್ಮೆ ಬ್ಲಾಕ್ ಆಗಬಹುದು, ಇಲ್ಲವಾದರೆ ಸಿಲ್ವರ್ ಕಲರ್ ಸಿಂಕ್ ಬಣ್ಣಗುಂದುತ್ತದೆ. ಹೀಗಾಗಿ ಕೆಲವು ವಸ್ತುಗಳನ್ನು ಬಳಸಿ ಸುಲಭವಾಗಿ ಸಿಂಕ್ ಸ್ವಚ್ಛಗೊಳಿಸಿ ಅಡುಗೆ ಮನೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಬಹುದು.

ಈ ವಸ್ತುಗಳನ್ನು ಬಳಸಿದರೆ ಅಡುಗೆ ಮನೆಯ ಸಿಂಕ್ ಸ್ವಚ್ಛಗೊಳಿಸುವುದು ಕಷ್ಟವೇನಲ್ಲ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 15, 2024 | 4:01 PM

ಇಂದಿನ ಮಾಡ್ರನ್ ಕಿಚನ್ ವ್ಯವಸ್ಥೆಯಿಂದಾಗಿ ಗೃಹಿಣಿಯರಿಗೆ ಸ್ವಲ್ಪ ಮಟ್ಟಿಗೆ ಆರಾಮದಾಯಕವಾಗಿದೆ. ಆದರೆ ಆಧುನಿಕ ಅಡುಗೆ ಮನೆಯಲ್ಲಿ ಸ್ವಚ್ಛತೆಯ ಬಗ್ಗೆ ಗಮನ ಕೊಡುವುದು ಮುಖ್ಯ. ಹೆಚ್ಚಿನವರ ಅಡುಗೆ ಮನೆಯಲ್ಲಿ ಸಿಂಕ್ ಇರುತ್ತದೆ. ಅಡುಗೆಯಾದ ಬಳಿಕ ಈ ಸಿಂಕ್ ನಲ್ಲಿಯೇ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತೇವೆ. ಪಾತ್ರೆತೊಳೆಯುವ ತರಾತುರಿಯಲ್ಲಿ ಬೇಡದ ಆಹಾರಗಳು ಸಿಂಕ್ ಒಳಗೆ ಹೋಗಿ ಬ್ಲಾಕ್ ಆಗುವುದೇ ಹೆಚ್ಚು. ಸರಿಯಾಗಿ ಸ್ವಚ್ಛಗೊಳಿಸದೇ ಹೋದರೆ ಸಿಂಕ್ ತುಂಬಾ ಕೊಳೆ ತುಂಬಿಕೊಳ್ಳುತ್ತದೆ. ಹೀಗಾಗಿ ಮನೆಯಲ್ಲಿ ಈ ಕೆಲವು ವಸ್ತುಗಳಿದ್ದರೆ ಸಿಂಕ್ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು.

* ಬಿಸಿ ನೀರನ್ನು ಬಳಸಿ : ಸಿಂಕ್ ಬ್ಲಾಕ್ ಆಗಿದ್ದರೆ ಬಿಸಿ ನೀರನ್ನು ಸಿಂಕ್ ಗೆ ಹಾಕುವುದರಿಂದ ಪೈಪ್ ಗೆ ಅಂಟಿಕೊಂಡಿರುವ ಅಂಶಗಳು ಹೋಗಿ, ಬ್ಲಾಕ್ ಅನ್ನು ತೆಗೆದುಹಾಕುತ್ತದೆ. ಆದರೆ ನಿಮ್ಮ ಸಿಂಕ್ ಸ್ಟೀಲಿನದಾಗಿದ್ದರೆ ಮಾತ್ರ ಬಿಸಿ ನೀರನ್ನು ಹಾಕಿ ಬ್ಲಾಕ್ ತೆಗೆಯಿರಿ.

* ಡ್ರೇನ್ ಸ್ನೇಕ್ ಇದ್ದರೆ ಬ್ಲಾಕ್ ತೆಗೆಯುವುದು ಸುಲಭ: ಸಿಂಕ್ ಬ್ಲಾಕ್ ಆಗಿದ್ದರೆ ಡ್ರೇನ್ ಸ್ನೇಕ್ ಕೇಬಲ್ ಅನ್ನು ಸಿಂಕ್ ನ ಪೈಪ್ ಒಳಗೆ ಹಾಕಿ ತಿರುಗಿಸುವುದರಿಂದ ಬ್ಲಾಕ್ ಆಗಿರುವ ವಸ್ತುಗಳು ಹೊರಗೆ ಹೋಗುತ್ತದೆ. ಆ ಬಳಿಕ ನೀರು ಹಾಕಿದರೆ ಸಿಂಕ್ ಹಾಗೂ ಪೈಪ್ ಸ್ವಚ್ಛವಾಗುತ್ತದೆ.

* ನಿಂಬೆಹಣ್ಣು ಬಳಸಿ ಸಿಂಕ್ ಸ್ವಚ್ಛಗೊಳಿಸಿ : ಎಲ್ಲರ ಅಡುಗೆ ಮನೆಯಲ್ಲಿ ಸದಾ ಲಭ್ಯವಿರುವ ನಿಂಬೆಹಣ್ಣನ್ನು ಬಳಸಿ ಸಿಂಕ್ ಸುಲಭವಾಗಿ ಸ್ವಚ್ಛಗೊಳಿಸಬಹುದು. ಕತ್ತರಿಸಿದ ನಿಂಬೆ ಹಣ್ಣಿಗೆ ಉಪ್ಪನ್ನು ಬೆರೆಸಿ ಉಜ್ಜಿದರೆ ಸಿಂಕ್ ಕೊಳೆ ಹೋಗಿ ಫಳ ಫಳನೇ ಹೊಳೆಯುತ್ತದೆ.

ಇದನ್ನೂ ಓದಿ: ಪರಿಮಳಯುಕ್ತ ಈ ಸೋಂಪು ಕಾಳಿನಲ್ಲಿದೆ ಹತ್ತಾರು ಆರೋಗ್ಯ ಪ್ರಯೋಜನಗಳು

* ವಿನೆಗರ್ ಮತ್ತು ಬೇಕಿಂಗ್ ಸೋಡಾ : ಒಂದು ವೇಳೆ ಸಿಂಕ್ ಬ್ಲಾಕ್ ಆದ ಸಿಂಕ್ ಅನ್ನು ಸ್ವಚ್ಛಗೊಳಿಸಲು ಬಿಳಿ ವಿನೆಗರ್ ಮತ್ತು ಸೋಡಾವನ್ನು ಬಳಸಬಹುದು. ಬೇಕಿಂಗ್ ಸೋಡಾ ಹಾಗೂ ಬಿಳಿ ವಿನೆಗರ್ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಬಿಡಬೇಕು.. ಆ ಬಳಿಕ ಸಿಂಕ್ ಗೆ ಬಿಸಿ ನೀರನ್ನು ಹಾಕಿ ತೊಳೆದರೆ ಸ್ವಚ್ಛವಾಗುತ್ತದೆ.

* ಬೇಕಿಂಗ್ ಸೋಡಾ : ನೀರಿಗೆ ಬೇಕಿಂಗ್ ಸೋಡಾ ಹಾಕಿ ಬೆರೆಸಿಕೊಂಡು ಸಿಂಕ್ ಗೆ ಹಾಕಿ ಸ್ವಲ್ಪ ಹೊತ್ತು ಬಿಟ್ಟು, ನೀರಿನಿಂದ ತೊಳೆದು ಹತ್ತಿ ಬಟ್ಟೆಯಿಂದ ಒರೆಸಿದರೆ ಸಿಂಕ್ ಹೊಳೆಯುತ್ತದೆ.

* ಆಲಿವ್ ಆಯಿಲ್ : ಸಿಂಕ್ ಕೊಳೆಯಿಂದ ಕೂಡಿದ್ದು ಬಣ್ಣಗೆಟ್ಟಿದ್ದರೆ, ಬಟ್ಟೆ ಮೇಲೆ ಸ್ವಲ್ಪ ಆಲಿವ್ ಆಯಿಲ್ ಅನ್ನು ಹಾಕಿ ಸಿಂಕ್ ಒರೆಸಿದರೆ, ಜಿಡ್ಡಿನ ಅಂಶಗಳು ಹೋಗುತ್ತವೆ. ಸ್ಟೀಲ್ ಸಿಂಕ್ ಫಳಫಳನೇ ಹೊಳೆಯುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು