ರಾತ್ರಿ ಮಲಗುವ ಮುನ್ನ ಕಾಲು ತೊಳೆಯಲು ಮರೆಯಬೇಡಿ; ಕಾರಣ ಇಲ್ಲಿದೆ

Foot Care: ನಮ್ಮ ಪಾದಗಳು ಇಡೀ ದಿನ ನಮ್ಮ ಭಾರವನ್ನು ಹೊತ್ತುಕೊಂಡಿರುತ್ತವೆ. ಅವುಗಳಿಗೆ ಸರಿಯಾದ ಆರೈಕೆ, ಕಾಳಜಿ ಅಗತ್ಯ. ರಾತ್ರಿ ಮಲಗುವಾಗ ನಿಮ್ಮ ಬೇರೆ ಅಭ್ಯಾಸಗಳ ಜೊತೆಗೆ ಪಾದಗಳನ್ನು ತೊಳೆಯಲು ಮರೆಯಬೇಡಿ. ರಾತ್ರಿ ಕಾಲುಗಳನ್ನು ತೊಳೆದು ಮಲಗುವುದರಿಂದ ಏನೆಲ್ಲ ಉಪಯೋಗಗಳಿವೆ ಎಂಬುದರ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ರಾತ್ರಿ ಮಲಗುವ ಮುನ್ನ ಕಾಲು ತೊಳೆಯಲು ಮರೆಯಬೇಡಿ; ಕಾರಣ ಇಲ್ಲಿದೆ
ಪಾದImage Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 15, 2024 | 4:35 PM

ನೀವು ಹೇಗೆ ಹೊರಗೆ ಹೋಗಿಬಂದ ನಂತರ ಬಟ್ಟೆ ಬದಲಾಯಿಸಿ ಮನೆಯಲ್ಲಿ ಹಾಕುವ ಬಟ್ಟೆ ಧರಿಸುತ್ತೀರೋ, ನಿಮ್ಮ ಮೇಕಪ್ ತೆಗೆಯುತ್ತೀರೋ, ಮುಖ ತೊಳೆದು ನೈಟ್ ಕ್ರೀಂ ಹಚ್ಚುತ್ತೀರೋ ಹಾಗೇ ರಾತ್ರಿ ಕಾಲುಗಳನ್ನು ಸ್ವಚ್ಛವಾಗಿ ತೊಳೆಯುವುದನ್ನು ಮರೆಯಬೇಡಿ. ರಾತ್ರಿ ಮಲಗುವಾಗ ಕಾಲು (Feet Care) ತೊಳೆಯದಿದ್ದರೆ ಅದು ನಿಮ್ಮ ಹಾಸಿಗೆಯನ್ನು ಸೂಕ್ಷ್ಮಜೀವಿಗಳ ಸಂತಾನೋತ್ಪತ್ತಿಯ ಸ್ಥಳವಾಗಿ ಪರಿವರ್ತಿಸುವ ಸಾಧ್ಯತೆ ಇರುತ್ತದೆ. ಕೆಲವರು ಸಾಕ್ಸ್ ಧರಿಸುವುದರಿಂದ ನಮ್ಮ ಪಾದಗಳನ್ನು ಸೂಕ್ಷ್ಮಜೀವಿಗಳಿಂದ ರಕ್ಷಿಸಬಹುದು ಎಂದು ನಂಬುತ್ತಾರೆ. ಆದರೆ ಇದು ನಿಜವೇ? ಎಂಬ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ.

ನವದೆಹಲಿಯ ಪಂಚಶೀಲ್ ಪಾರ್ಕ್‌ನ ಮ್ಯಾಕ್ಸ್ ಮಲ್ಟಿ ಸ್ಪೆಷಾಲಿಟಿ ಸೆಂಟರ್‌ನ ಪೊಡಿಯಾಟ್ರಿಯ ಪ್ರಧಾನ ಸಲಹೆಗಾರ ಡಾ. ಗೋವಿಂದ್ ಸಿಂಗ್ ಬಿಷ್ಟ್, “ಜನರು ದಿನಕ್ಕೆ 2 ಬಾರಿಯಾದರೂ ನಮ್ಮ ಪಾದಗಳನ್ನು ತೊಳೆಯಬೇಕು. ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮೊದಲು ನಮ್ಮ ಪಾದಗಳನ್ನು ತೊಳೆಯಲು ಮಿಸ್ ಮಾಡಬಾರದು. ಜನರು ತಮ್ಮ ದೇಹದ ಇತರ ಭಾಗಗಳಾದ ಮುಖ ಮತ್ತು ಕೈಗಳನ್ನು ತಮ್ಮಂತೆ ನೋಡಿಕೊಳ್ಳುತ್ತಾರೆ. ಆದರೆ ಪಾದಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ಇದು ಸರಿಯಲ್ಲ. ಪಾದಗಳಿಗೂ ಸರಿಯಾದ ಕಾಳಜಿ ತೋರಿಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಳಿಗಾಲದಲ್ಲಿ ಕೀಲು ನೋವು ಅಥವಾ ಮೊಣಕಾಲು ನೋವಿನಿಂದ ಬಳಲುತ್ತಿದ್ದೀರಾ? ಈ ಹಣ್ಣು ಸೇವಿಸಿ

ಮಲಗುವ ಮುನ್ನ ಪ್ರತಿಯೊಬ್ಬರೂ ತಮ್ಮ ಪಾದಗಳನ್ನು ತೊಳೆಯುವುದು ಬಹಳ ಮುಖ್ಯ. ಏಕೆಂದರೆ ಅನೇಕ ಜನರಿಗೆ ಮನೆಯೊಳಗೆ ಸುಲಭವಾಗಿ ಪಾದವನ್ನು ಪ್ರವೇಶಿಸುವ ಸೂಕ್ಷ್ಮ ಧೂಳಿನ ಕಣಗಳಿರುತ್ತವೆ ಎಂದು ತಿಳಿದಿರುವುದಿಲ್ಲ. ಪಾದಗಳಿಗೆ ನೆಲದ ಮೇಲಿನ ಧೂಳು ಮತ್ತು ಸೂಕ್ಷ್ಮಜೀವಿಗಳು ಅಂಟಿಕೊಳ್ಳುತ್ತವೆ. ಹೀಗಾಗಿ, ಆಗಾಗ ಪಾದಗಳನ್ನು ತೊಳೆಯುವುದು ಒಳ್ಳೆಯದು. ಏಕೆಂದರೆ ನೀವು ಈ ಪಾದಗಳಿಂದ ಹಾಸಿಗೆಗೆ ಹತ್ತಿದಾಗ ಆ ಸೂಕ್ಷ್ಮಾಣುಗಳು ನಿಮ್ಮ ಮೂಗು, ಬಾಯಿ ಮತ್ತು ಚರ್ಮದ ಮೇಲೆ ಆವರಿಸಿಕೊಳ್ಳುತ್ತವೆ ಎಂದು ಗುರುಗ್ರಾಮ್‌ನ ಸಿಕೆ ಬಿರ್ಲಾ ಆಸ್ಪತ್ರೆಯ ಚರ್ಮರೋಗ ವಿಭಾಗದ ಸಲಹೆಗಾರ ಡಾ. ಸೀಮಾ ಒಬೆರಾಯ್ ಲಾಲ್ ಹೇಳುತ್ತಾರೆ.

ನಿಮ್ಮ ಪಾದಗಳಿಗೆ ಒಡ್ಡಿಕೊಳ್ಳುವ ಎಲ್ಲಾ ಧೂಳು, ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ತೊಡೆಯಲು ನಿಮ್ಮ ಪಾದಗಳನ್ನು ತೊಳೆಯವುದು ಅಗತ್ಯ. ನೈರ್ಮಲ್ಯದ ದೃಷ್ಟಿಕೋನದಿಂದ, ಪಾದಗಳನ್ನು ತೊಳೆಯುವುದರಿಂದ ಕೊಳಕು, ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳನ್ನು ಹಾಸಿಗೆಗೆ ತರುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶೂಗಳ ಒಳಗೆ ಹಗಲಿನಲ್ಲಿ ಪಾದಗಳು ಬೆವರು ಮತ್ತು ವಿವಿಧ ಮೇಲ್ಮೈಗಳೊಂದಿಗೆ ಸಂಪರ್ಕಕ್ಕೆ ಬರುತ್ತವೆ. ಇದು ಬ್ಯಾಕ್ಟೀರಿಯಾವನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: ಪಾದಗಳ ನೋವು ಕಡಿಮೆ ಮಾಡುವ ಸರಳ ಮನೆಮದ್ದುಗಳಿವು

ಅದರಲ್ಲೂ ಸಾಕ್ಸ್ ಧರಿಸಿದವರ ಕಾಲು ಬೆವೆತು, ಧೂಳು ಅಂಟಿಕೊಳ್ಳುವುದು ಸಹಜ. ಅಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಬಹುದು. ಮುಚ್ಚಿದ ಬೂಟುಗಳಲ್ಲಿ ಪಾದಗಳು ದಿನವಿಡೀ ಬೆವರು, ತೇವಾಂಶವನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ, ನಿಮ್ಮ ಪಾದಗಳನ್ನು ದಿನಕ್ಕೆ 2 ಬಾರಿ ತೊಳೆಯಿರಿ. ನಿಮ್ಮ ಪಾದಗಳನ್ನು ಸರಿಯಾಗಿ ಒಣಗಿಸಿ. ವಿಶೇಷವಾಗಿ ನಿಮ್ಮ ಕಾಲ್ಬೆರಳುಗಳ ನಡುವಿನ ಅಂತರವನ್ನು ಡ್ರೈ ಆಗಿಟ್ಟುಕೊಳ್ಳಿ. ನಿಮ್ಮ ಕಾಲ್ಬೆರಳ ಉಗುರುಗಳನ್ನು ಯಾವಾಗಲೂ ಟ್ರಿಮ್ ಮಾಡಿರಿ. ಉದ್ದವಾದ ಉಗುರುಗಳು ಸೋಂಕಿನ ಮೂಲವೂ ಆಗಿರಬಹುದು. ನಿಮ್ಮ ಪಾದಗಳನ್ನು ವಾರಕ್ಕೆ 2 ಬಾರಿ ಎಫ್ಫೋಲಿಯೇಟ್ ಮಾಡುವುದು ಒಳ್ಳೆಯದು. ನಿಮ್ಮ ಪಾದಗಳನ್ನು ನಿಧಾನವಾಗಿ ಸ್ಕ್ರಬ್ ಮಾಡಿ. ನಿಮ್ಮ ಕಾಳಿಗೆ ಧೂಳು, ಮಣ್ಣು, ಕೆಸರು ಮೆತ್ತಿಕೊಂಡರೆ ನಿಮ್ಮ ಪಾದಗಳನ್ನು ತಕ್ಷಣವೇ ತೊಳೆಯಿರಿ. ಚೆನ್ನಾಗಿ ತೊಳೆದ ಸಾಕ್ಸ್​ ಅನ್ನೇ ಹಾಕಿಕೊಳ್ಳಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು