AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿಯ 15,000 ಕೋಟಿ ರೂ.ವೆಚ್ಚದ ಮನೆಯ ಒಳಾಂಗಣ ವಿನ್ಯಾಸಗಾರ್ತಿ ಯಾರು ಗೊತ್ತಾ? ಈಕೆ ಬಾಲಿವುಡ್​​​ನ ಸ್ಟಾರ್ ನಟನ ಪತ್ನಿ

ವಿಶ್ವದ ಅತಿ ದುಬಾರಿ ಮನೆಗಳಲ್ಲೊಂದಾದ ಮುಕೇಶ್ ಅಂಬಾನಿಯವರ ಮುಂಬೈನಲ್ಲಿರುವ 'ಅಂಟಿಲ್ಲಾ' ನಿವಾಸದ ಸಂಪೂರ್ಣ ಒಳಾಂಗಣವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಿರುವ ವಿನ್ಯಾಸಗಾರ್ತಿ ಬಾಲಿವುಡ್​​​ನ ಸ್ಟಾರ್ ನಟನ ಪತ್ನಿ. ಅಂಬಾನಿ ನಿವಾಸ ಹೊರತು ಪಡಿಸಿ ರಣಬೀರ್ ಕಪೂರ್, ಕರಣ್ ಜೋಹರ್ ಮತ್ತು ಆಲಿಯಾ ಭಟ್ ಸೇರಿದಂತೆ ಸಾಕಷ್ಟು ಬಾಲಿವುಡ್​​ ಸೆಲೆಬ್ರೆಟಿಗಳ ಮನೆಯನ್ನು ಕೂಡ ವಿನ್ಯಾಸಗೊಳಿಸಿದ್ದಾರೆ.

ಅಂಬಾನಿಯ 15,000 ಕೋಟಿ ರೂ.ವೆಚ್ಚದ ಮನೆಯ ಒಳಾಂಗಣ ವಿನ್ಯಾಸಗಾರ್ತಿ ಯಾರು ಗೊತ್ತಾ? ಈಕೆ ಬಾಲಿವುಡ್​​​ನ ಸ್ಟಾರ್ ನಟನ ಪತ್ನಿ
Mukesh Ambani's AntiliaImage Credit source: Pinterest
ಅಕ್ಷತಾ ವರ್ಕಾಡಿ
|

Updated on: Feb 15, 2024 | 4:15 PM

Share

ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿಯವರ ಮುಂಬೈನಲ್ಲಿರುವ ‘ಅಂಟಿಲ್ಲಾ’ ನಿವಾಸ ವಿಶ್ವದ ಅತಿ ದುಬಾರಿ ಮನೆಗಳಲ್ಲೊಂದು ಎಂಬ ಕೀರ್ತಿಗೆ ಭಾಜನವಾಗಿದೆ. ಈ ಮನೆ ನಿರ್ಮಾಣದ ವೆಚ್ಚ ಸುಮಾರು 15,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಭವ್ಯ ಬಂಗಲೆಯನ್ನು ಪ್ರಸಿದ್ಧ ವಾಸ್ತುಶಿಲ್ಪಿ ಸಂಸ್ಥೆ ಪರ್ಕಿನ್ಸ್ & ವಿಲ್ ನಿರ್ಮಿಸಿದ್ದಾರೆ. ಈ ಮನೆ ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿದ್ದು, 27 ಅಂತಸ್ತನ್ನು ಹೊಂದಿದೆ. ಸಕಲ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ಈ ಅರಮನೆ 4,00,000 ಚದರ ಅಡಿ ವಿಸ್ತರಿಸಿದೆ. ಥಿಯೇಟರ್, ಸ್ಪಾ, ಈಜುಕೊಳ, ಆರೋಗ್ಯ ಕೇಂದ್ರ, ಹೈಸ್ಪೀಡ್ ಲಿಫ್ಟ್, ಸ್ನೋ ರೂಮ್, 160ಕ್ಕೂ ಹೆಚ್ಚು ವಾಹನಗಳಿಗೆ ಗ್ಯಾರೇಜ್, ಮೂರು ಹೆಲಿಪ್ಯಾಡ್ ಗಳನ್ನು ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಈ ಕಟ್ಟಡವು ರಿಕ್ಟರ್ ಮಾಪಕದಲ್ಲಿ ಎಂಟು ತೀವ್ರತೆಯ ಭೂಕಂಪಗಳನ್ನು ತಡೆದುಕೊಳ್ಳಬಲ್ಲದು.

ಈ ಭವ್ಯ ಅರಮನೆಯ ಸಂಪೂರ್ಣ ಒಳಾಂಗಣವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಿರುವ ವಿನ್ಯಾಸಗಾರ್ತಿ ಬಾಲಿವುಡ್​​​ನ ಸ್ಟಾರ್ ನಟನ ಪತ್ನಿ. ಬಾಲಿವುಡ್ ಬಾದ್ ಷಾ, ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅಂಬಾನಿಯ 15,000 ರೂ. ಕೋಟಿ ವೆಚ್ಚದ ಮನೆಯ ಒಳಾಂಗಣ ವಿನ್ಯಾಸಗಾರ್ತಿ. ಗೌರಿ ಖಾನ್​​ ನಿರ್ಮಾಪಕರಾಗಿ ಮಾತ್ರವಲ್ಲದೇ ಇಂಟೀರಿಯರ್ ಡಿಸೈನರ್ ಆಗಿ ಕೂಡ ಖ್ಯಾತಿ ಗಳಿಸಿದ್ದಾರೆ. ಗೌರಿ ಖಾನ್​​ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಮತ್ತು ರೆಡ್ ಚಿಲ್ಲೀಸ್ ಇಂಟಿರಿಯರ್​​​ ಡಿಸೈನ್​​ನ ಸಹ ಸಂಸ್ಥಾಪಕರು.

ಇದನ್ನೂ ಓದಿ: ಭಿಕ್ಷಾಟನೆಯಿಂದಲೇ 45 ದಿನದಲ್ಲಿ 2.5ಲಕ್ಷ ಗಳಿಕೆ; ಹುಟ್ಟೂರಿನಲ್ಲಿ ಮನೆ,ಜಮೀನು ಖರೀದಿ ​​ ಗೌರಿ ಖಾನ್ ಅವರ ಇಂಟಿರೀಯರ್ ಡಿಸೈನ್ ಸಂಸ್ಥೆಯಿಂದ ಸಾಕಷ್ಟು ಸೆಲೆಬ್ರೆಟಿಗಳ ರಣಬೀರ್ ಕಪೂರ್, ಕರಣ್ ಜೋಹರ್ ಮತ್ತು ಆಲಿಯಾ ಭಟ್ ಅವರುಗಳ ಮನೆಯನ್ನು ವಿನ್ಯಾಸಗೊಳಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​