AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ವರ್ಷದ ವಧು ಹುಡುಕಾಟದ ನಂತರ ಕಡೆಗೂ 3.7 ಅಡಿ ಯುವಕನಿಗೆ ಸಂಗಾತಿಯಾದ 4 ಅಡಿ ಎತ್ತರದ ಯುವತಿ

3.7 ಅಡಿ ಎತ್ತರವಿರುವುದರಿಂದ ಮದುವೆಯಾಗಲು ಯಾವ ಹುಡುಗಿಯೂ ಮುಂದೆ ಬರದೆ ಸುಮಾರು 15 ವರ್ಷಗಳಿಂದ ನೊಂದಿದ್ದ ಯುವಕ. ಆದರೆ ಇದೀಗಾ ಫೆಬ್ರವರಿ 14 ಪ್ರೇಮಿಗಳ ದಿನದಂದು 4 ಅಡಿ ಎತ್ತರದ ಯುವತಿಯೊಂದಿಗೆ ಅದ್ಧೂರಿಯಾಗಿ ಮದುವೆಯಾಗಿದ್ದಾನೆ. ಆತನ ಎತ್ತರವನ್ನು ಲೆಕ್ಕಿಸದೇ ಯುವತಿ ಮದುವೆಯಾಗಲು ಒಪ್ಪಿಕೊಂಡಿದ್ದಾಳೆ.

15 ವರ್ಷದ ವಧು ಹುಡುಕಾಟದ ನಂತರ ಕಡೆಗೂ 3.7 ಅಡಿ ಯುವಕನಿಗೆ ಸಂಗಾತಿಯಾದ 4 ಅಡಿ ಎತ್ತರದ ಯುವತಿ
3.7ft man marries 4ft woman
ಅಕ್ಷತಾ ವರ್ಕಾಡಿ
|

Updated on:Feb 15, 2024 | 2:33 PM

Share

ಪ್ರತೀ ಹುಡುಗಿಗೂ ತನ್ನ ಹುಡುಗ ಒಳ್ಳೆ ಹೈಟ್​​​​​ ಇರಬೇಕು ಎಂಬ ಕನಸಿರುತ್ತದೆ. ಯುವತಿಯರ ಈ ಕನಸಿನಿಂದಾಗಿ 15 ವರ್ಷಗಳಿಂದ ಮದುವೆಯಾಗಲು ಒಂದೂ ಹುಡುಗಿ ಸಿಗದೆ ಜೀವನವೇ ಸಾಕು ಎಂದು ಕುಳಿತಿದ್ದ 3.7 ಅಡಿ ಎತ್ತರದ ಯುವಕನ ಜೀವನದಲ್ಲಿ ಇದೀಗಾ ಮತ್ತೆ ಮದುವೆಯ ಕನಸು ಚಿಗುರೊಡೆದಿದೆ. ಹೌದು 15 ವರ್ಷಗಳಿಂದ ಮದುವೆಯಾಗಲು ಹುಡುಗಿ ಸಿಗದೇ ಕಂಗಲಾಗಿದ್ದ 3.7 ಅಡಿ ಎತ್ತರದ ಯುವಕನಿಗೆ 4 ಅಡಿ ಎತ್ತರದ ಯುವತಿಯೊಂದಿಗೆ ಅದ್ಧೂರಿಯಾಗಿ ಮದುವೆಯಾಗಿದೆ. ಈ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.

ಬುಲಂದ್‌ಶಹರ್‌ನಲ್ಲಿ ನೆಲೆಸಿರುವ ಮೊಹಮ್ಮದ್ ಅರ್ಷದ್‌ ಅವರ ಎತ್ತರ ಕೇವಲ 3.7 ಅಡಿ. ಹಾಗಾಗಿ ಆತನನ್ನು ಮದುವೆಯಾಗಲು ಯಾವ ಹುಡುಗಿಯೂ ಮುಂದೆ ಬರಲಿಲ್ಲ. ಆದರೆ, ವಯಸ್ಸು ಹೆಚ್ಚುತ್ತಲೇ ಹೋಗಿದ್ದರಿಂದ ಮದುವೆಯಾಗುವ ಆಸೆಯನ್ನೇ ಬಿಟ್ಟಿದ್ದ. ಕೊನೆಗೂ 15 ವರ್ಷಗಳ ಹುಡುಕಾಟದ ನಂತರ ಅರ್ಷದ್​​ನ ಎತ್ತರವನ್ನು ಲೆಕ್ಕಿಸದೇ ಆತನಿಗಿಂತ ಉದ್ದವಿರುವ ಯುವತಿ ಜೀವನ ಸಂಗಾತಿಯಾಗಿದ್ದಾಳೆ.

ಇದನ್ನೂ ಓದಿ: ಭಿಕ್ಷಾಟನೆಯಿಂದಲೇ 45 ದಿನದಲ್ಲಿ 2.5ಲಕ್ಷ ಗಳಿಕೆ; ಹುಟ್ಟೂರಿನಲ್ಲಿ ಮನೆ,ಜಮೀನು ಖರೀದಿ

ಸಯಾನಾ ನಗರದ 35 ವರ್ಷದ ಮೊಹಮ್ಮದ್ ಅರ್ಷದ್ ಪೀಠೋಪಕರಣ ವ್ಯಾಪಾರ ಮಾಡುತ್ತಿದ್ದು, ಮದುವೆಯಾಗಲು ಹುಡುಗಿ ಸಿಗದೇ ಇರುವ ಕಾರಣ ಆತನನ್ನು ಅಪಹಾಸ್ಯ ಮಾಡಿದವರೇ ಹೆಚ್ಚು. ಆದರೆ,ಆತ ಯಾವತ್ತೂ ತಾಳ್ಮೆಗೆಡಲಿಲ್ಲ. ಸರಿಯಾದ ಜೀವನ ಸಂಗಾತಿಯನ್ನು ಹುಡುಕುವ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ನಾಲ್ಕು ತಿಂಗಳ ಹಿಂದೆ ಸಂಬಂಧಿಕರೊಬ್ಬರು 4 ಅಡಿ ಎತ್ತರದ ಹುಡುಗಿ ಸೋನಾ ಬಗ್ಗೆ ಹೇಳಿದ್ದರು. ನಂತರ ಅರ್ಷದ್ ಕುಟುಂಬಸ್ಥರು ತೆರಳಿ ಸೋನಾ ಮನೆಯವರ ಬಳಿ ಮಾತುಕತೆ ನಡೆಸಿದ್ದಾರೆ. ಅವರು ಅಂತಿಮವಾಗಿ ಫೆಬ್ರವರಿ 14 ರ ಬುಧವಾರದಂದು ಪ್ರೇಮಿಗಳ ದಿನದಂದು ಅರ್ಷದ್ ಮತ್ತು ಸೋನಾ ಅವರ ವಿವಾಹವಾಗಿದೆ. ಅರ್ಷದ್ ಗೆಳೆಯರು ನಗರದೆಲ್ಲೆಡೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Thu, 15 February 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ