AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ‘ಸತ್ತ’ ಮಹಿಳೆ ಅಂತ್ಯಸಂಸ್ಕಾರದ ವೇಳೆ ಜೀವಂತ; ಬೆಚ್ಚಿಬಿದ್ದ ಕುಟುಂಬಸ್ಥರು

ಖಾಸಗಿ ವಾಹನದಲ್ಲಿ ಮೃತದೇಹವನ್ನು ತರುತ್ತಿದ್ದಂತೆ ಸುಮಾರು 18 ಗಂಟೆಗಳ ಪ್ರಯಾಣದ ನಂತರ ತವರೂರು ಬಿಹಾರದ ಔರಂಗಾಬಾದ್ ತಲುಪಿದಾಗ ವೈದ್ಯರು ಘೋಷಿಸಿದ್ದ ಮೃತ ಮಹಿಳೆ ಉಸಿರಾಡಲು ಪ್ರಾರಂಭಿಸಿದ್ದಾಳೆ. ಪ್ರಾರಂಭದಲ್ಲಿ ಸತ್ತಿರುವ ತಾಯಿ ಉಸಿರಾಡುತ್ತಿದುದ್ದನ್ನು ಕಂಡು ಮಕ್ಕಳಿಬ್ಬರು ಭಯಗೊಂಡಿದ್ದಾರೆ.

Viral News: ‘ಸತ್ತ’ ಮಹಿಳೆ  ಅಂತ್ಯಸಂಸ್ಕಾರದ ವೇಳೆ ಜೀವಂತ; ಬೆಚ್ಚಿಬಿದ್ದ ಕುಟುಂಬಸ್ಥರು
ಮಹಿಳೆ ಅಂತ್ಯಸಂಸ್ಕಾರದ ವೇಳೆ ಜೀವಂತ
ಅಕ್ಷತಾ ವರ್ಕಾಡಿ
|

Updated on: Feb 15, 2024 | 12:21 PM

Share

ಪಾಟ್ನಾ, ಫೆಬ್ರವರಿ 15: ಮಹಿಳೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಛತ್ತೀಸ್‌ಗಢದ ಕೊರ್ವಾ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಫೆಬ್ರವರಿ 11 ರಂದು ಚಿಕಿತ್ಸೆ ವೇಳೆ ಆಕೆ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ಘೋಷಿಸಿದ್ದರು. ನಂತರ ಅಂತ್ಯಸಂಸ್ಕಾರಕ್ಕಾಗಿ ಆಕೆಯ ಇಬ್ಬರು ಮಕ್ಕಳು ಊರಿಗೆ ಕರೆತರಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ. ಆದರೆ ಪವಾಡವೆಂಬಂತೆ ತಾಯ್ನಾಡು ಪ್ರವೇಶಿಸುತ್ತಿದ್ದಂತೆ ಮಹಿಳೆ ಉಸಿರಾಡುತ್ತಿದುದ್ದನ್ನು ಕಂಡು ಕುಟುಂಬಸ್ಥರು ಭಯಗೊಂಡಿದ್ದಾರೆ.

ಛತ್ತೀಸ್‌ಗಢದ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ವೈದ್ಯರು ಫೋಷಿಸುತ್ತಿದ್ದಂತೆ ಮೃತ ಮಹಿಳೆಯ ಮಕ್ಕಳಾದ ಮುರಾರಿ ಶಾವೋ ಮತ್ತು ಘನಶ್ಯಾಮ್ ಶಾವೋ ತಮ್ಮ ತವರೂರಿನಲ್ಲಿ ತಾಯಿಯ ಅಂತ್ಯಸಂಸ್ಕಾರ ಮಾಡಲು ಬಿಹಾರದ ಬೇಗುಸರಾಯ್‌ಗೆ ಮೃತದೇಹವನ್ನು ತೆಗೆದುಕೊಂಡು ಬಂದಿದ್ದಾರೆ. ಫೆಬ್ರವರಿ 12 ರಂದು ಖಾಸಗಿ ವಾಹನದಲ್ಲಿ ಮೃತದೇಹವನ್ನು ತರುತ್ತಿದ್ದಂತೆ ಸುಮಾರು 18 ಗಂಟೆಗಳ ಪ್ರಯಾಣದ ನಂತರ ತವರೂರು ಬಿಹಾರದ ಔರಂಗಾಬಾದ್ ತಲುಪಿದಾಗ ವೈದ್ಯರು ಘೋಷಿಸಿದ್ದ ಮೃತ ಮಹಿಳೆ ಉಸಿರಾಡಲು ಪ್ರಾರಂಭಿಸಿದ್ದಾಳೆ. ಪ್ರಾರಂಭದಲ್ಲಿ ಸತ್ತಿರುವ ತಾಯಿ ಉಸಿರಾಡುತ್ತಿದುದ್ದನ್ನು ಕಂಡು ಮಕ್ಕಳಿಬ್ಬರು ಭಯಗೊಂಡಿದ್ದಾರೆ.

ಇದನ್ನೂ ಓದಿ: ಭಿಕ್ಷಾಟನೆಯಿಂದಲೇ 45 ದಿನದಲ್ಲಿ 2.5ಲಕ್ಷ ಗಳಿಕೆ; ಹುಟ್ಟೂರಿನಲ್ಲಿ ಮನೆ,ಜಮೀನು ಖರೀದಿ

ಆಕೆ ಜೀವಂತವಾಗಿರುವುದನ್ನು ತಿಳಿದ ನಂತರ ಹತ್ತಿರದ ಬೇಗುಸರಾಯ್ ಸದರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಮಹಿಳೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಿದ್ದಾರೆ.ಇದಲ್ಲದೇ ಮಹಿಳೆ ಸತ್ತಿಲ್ಲ ಬದುಕಿದ್ದಾರೆ. ಉಸಿರಾಡುತ್ತಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಸುಮಾರು 18 ಗಂಟೆಗಳ ವಾಹನ ಪ್ರಯಾಣದ ವೇಳೆ ವಾಹನ ಬ್ರೇಕ್​​​ ಹಾಕಿದ ಪರಿಣಾಮ, ಸಿಪಿಆರ್ ರೀತಿಯಲ್ಲಿ ಮತ್ತೆ ಉಸಿರಾಡಲು ಪ್ರಾರಂಭವಾಗಿದೆ ವೈದ್ಯರು ಹೇಳಿದ್ದಾರೆ. ಮಹಿಳೆಯನ್ನು ಐಸಿಯುಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ