ನಾವೀಗ ಆಧುನಿಕತೆ ಪ್ರಪಂಚಕ್ಕೆ ತೆರೆದುಕೊಂಡಿದ್ದೇವೆ. ಹೀಗಾಗಿ ನಮ್ಮ ಪೂರ್ವಜರು ಸೇವಿಸುತ್ತಿದ್ದ ಆಹಾರಗಳನ್ನು ಕಡೆಗಣಿಸುತ್ತಿದ್ದೇವೆ. ಅವರು ಸೇವಿಸುತ್ತಿದ್ದ ಆಹಾರಗಳಿಂದ ನೂರು ವರ್ಷಗಳ ಕಾಲ ಬದುಕುತ್ತಿದ್ದರು. ಆದರೆ ಇಂದಿನ ಮಕ್ಕಳಿಗೆ ಪಿಜ್ಜಾ, ಬರ್ಗರ್, ಜಂಕ್ ಫುಡ್ ಗಳೇ ಬೇಕು. ಆದರೆ ಹಿಂದಿನ ಕಾಲದ ಹಿರಿಯರ ಕಾಲದ ಸಿಹಿ ಗೆಣಸಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಈಗಿನ ಕಾಲದವರಿಗೆ ತಿಳಿದಿಲ್ಲ. ಈ ಸಿಹಿ ಗೆಣಸು ವಿಟಮಿನ್ ಎ ಮತ್ತು ವಿಟಮಿನ್ ಸಿ, ಖನಿಜಗಳು ಹಾಗೂ ಫೈಬರ್ ಗಳಿಂದ ಹೇರಳವಾಗಿದ್ದು ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಗುಣವನ್ನು ಹೊಂದಿದೆ. ಮಾರುಕಟ್ಟೆಯಲ್ಲಿರುವ ಸಿಗುವ ಸಿಹಿ ಗೆಣಸಿನಿಂದ ಸುಲಭವಾಗಿ ಹಲ್ವಾ ಮಾಡುವ ರೆಸಿಪಿಯ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
ಫುಡಿಸುಝಿ ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಖಾತೆ ಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಸಿಹಿ ಗೆಣಸನ್ನು ಬೇಯಿಸುವ ಮೂಲಕ ಈ ವಿಡಿಯೋವು ಪ್ರಾರಂಭವಾಗುತ್ತದೆ. ಬೆಂದ ಸಿಹಿ ಗೆಣಸಿನ ಸಿಪ್ಪೆ ತೆಗೆದು ಚೆನ್ನಾಗಿ ತುರಿಯಲಾಗಿದೆ. ಗ್ಯಾಸ್ ಮೇಲೆ ಬಾಣಲೆಯಿಟ್ಟು ಎರಡು ಚಮಚದಷ್ಟು ತುಪ್ಪ ಹಾಕಿ, ಈಗಾಗಲೇ ತುರಿದಿಟ್ಟ ಗೆಣಸನ್ನು ಬಾಣಲೆಗೆ ಹಾಕಿ ಬೆರೆಸಲಾಗಿದೆ.
ಈ ಮಿಶ್ರಣಕ್ಕೆ ಹಾಲು ಹಾಗೂ ಸಕ್ಕರೆ ಹಾಕಿ ಮಿಕ್ಸ್ ಮಾಡಲಾಗಿದೆ. ಗೆಣಸಿನ ಹಲ್ವಾದ ಘಮ ಹೆಚ್ಚಾಗಲು ಕೇಸರಿ ಮಿಕ್ಸ್ ಮಸಾಲಾ , ಏಲಕ್ಕಿ ಪುಡಿ ಹಾಕಲಾಗಿದ್ದು, ರುಚಿ ರುಚಿಯಾದ ಗೆಣಸಿನ ಹಲ್ವಾ ಸವಿಯಲು ಸಿದ್ಧವಾಗಿದೆ. ಕೊನೆಗೆ ಈ ಒಂದು ಬಟ್ಟಲಿಗೆ ಸಿದ್ಧವಾದ ಗೆಣಸಿನ ಹಲ್ವಾಹಾಕಿ ಅದರ ಮೇಲೆ ಗೋಡಂಬಿ ಬೀಜವನ್ನು ಉದುರಿಸಲಾಗಿದೆ.
ಇದನ್ನೂ ಓದಿ: ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ, ಅದರಲ್ಲಿದೆ ಈ ಆರೋಗ್ಯ ಪ್ರಯೋಜನಗಳು
ಈ ವಿಡಿಯೋವು ಇಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆಹಾರಪ್ರಿಯರಂತೂ ಮೆಚ್ಚುಗೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು, ತುಂಬಾ ರುಚಿಕರವಾಗಿದೆ ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು, ನಾನು ಮನೆಯಲ್ಲಿ ಸಿಹಿ ಗೆಣಸಿನ ಹಲ್ವಾವನ್ನು ಒಮ್ಮೆ ಪ್ರಯತ್ನಿಸಿದೆ, ತುಂಬಾನೇ ರುಚಿಕರವಾಗಿತ್ತು ಎಂದಿದ್ದಾರೆ. ಈ ಗೆಣಸಿನ ಹಲ್ವಾ ರೆಸಿಪಿಯ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Mon, 19 February 24