ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ, ಅದರಲ್ಲಿದೆ ಈ ಆರೋಗ್ಯ ಪ್ರಯೋಜನಗಳು
ನಮ್ಮ ಹಿರಿಯರು ತಮ್ಮ ದಿನ ನಿತ್ಯ ಬಳಸುವ ಪ್ರತಿಯೊಂದು ವಸ್ತುವಿನ ಉಪಯೋಗವನ್ನು ಬಲ್ಲವರಾಗಿದ್ದರು. ಹೀಗಾಗಿ ಅಕ್ಕಿ ತೊಳೆದ ನೀರನ್ನು ಚೆಲ್ಲುತ್ತಿರಲಿಲ್ಲ. ಈ ನೀರನ್ನು ಬಳಸುವ ಮೂಲಕ ಹಲವಾರು ಆರೋಗ್ಯ ವ್ಯಾಧಿಗಳನ್ನು ದೂರ ಮಾಡಿಕೊಳ್ಳುತ್ತಿದ್ದರು. ಆದರೆ ಎಷ್ಟೋ ಜನರಿಗೆ ಅಕ್ಕಿ ತೊಳೆದ ನೀರಿನ ಮಹತ್ವವೇ ತಿಳಿದಿಲ್ಲ.
ದಕ್ಷಿಣ ಭಾರತದಲ್ಲಿ ಬಹುತೇಕರ ದಿನ ನಿತ್ಯದ ಆಹಾರವೇ ಅನ್ನ. ದಿನದ ಮುರೊತ್ತು ಅಕ್ಕಿಯಿಂದ ಮಾಡಿದ ಅನ್ನವನ್ನು ಆಹಾರವಾಗಿ ಸೇವಿಸುತ್ತಾರೆ. ಹೀಗಾಗಿ ಅನ್ನ ಮಾಡುವಾಗ ಅಕ್ಕಿಯನ್ನು ಮೂರರಿಂದ ನಾಲ್ಕು ಬಾರಿ ತೊಳೆಯುವುದಿದೆ. ಆ ಬಳಿಕ ಅಕ್ಕಿ ನೀರನ್ನು ಚೆಲ್ಲುತ್ತಾರೆ. ಆದರೆ ಇದರಲ್ಲಿ ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂ, ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿದ್ದು , ಇದರಿಂದ ಆರೋಗ್ಯ ಲಾಭಗಳೇ ಅಧಿಕ. ಇದರ ಆರೋಗ್ಯ ಪ್ರಯೋಜನಗಳನ್ನು ಬಲ್ಲವರು ಈ ಅಕ್ಕಿ ನೀರನ್ನು ಖಂಡಿತವಾಗಿ ಚೆಲ್ಲುವುದೇ ಇಲ್ಲ.
* ಅಕ್ಕಿ ತೊಳೆದ ನೀರನ್ನು ಹತ್ತಿ ಅಥವಾ ಶುದ್ಧವಾದ ಬಟ್ಟೆ ಉಪಯೋಗಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿಯು ಹೆಚ್ಚಾಗುತ್ತದೆ.
* ಅಕ್ಕಿ ತೊಳೆದ ನೀರನ್ನು ಚರ್ಮದ ಫೇಶಿಯಲ್ ಆಗಿ ಬಳಸಬಹುದು.
* ಮುಖವು ಕೆಂಪಾಗುವುದು, ಚರ್ಮದ ಅಲರ್ಜಿ ಸೇರಿದಂತೆ ಇನ್ನಿತ್ತರ ಸಮಸ್ಯೆಯಿದ್ದರೆ ಅಕ್ಕಿ ನೀರಿನಿಂದ ಮುಖ ತೊಳೆಯುವುದು ಪರಿಣಾಮಕಾರಿ.
* ಕೂದಲಿನ ಆರೈಕೆಗೆ ಅಕ್ಕಿ ತೊಳೆದ ನೀರನ್ನು ನಿಮ್ಮ ಕೂದಲಿಗೆ ಹಚ್ಚಿದರೆ ಕೂದಲ ಹೊಳಪು ಹೆಚ್ಚುತ್ತದೆ.
* ಅಕ್ಕಿ ನೀರಿಗೆ ಲ್ಯಾವೆಂಡರ್ ಎಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ, ಕೂದಲಿಗೆ ಅಕ್ಕಿ ನೀರಿನಿಂದ ತೊಳೆದರೆ ಕೂದಲ ಆರೋಗ್ಯವನ್ನು ಕಾಪಾಡಬಹುದು.
* ಮಹಿಳೆಯರಿಗೆ ಬಿಳಿ ಮುಟ್ಟಿನ ಸಮಸ್ಯೆಯಿದ್ದರೆ ಈ ಅಕ್ಕಿ ತೊಳೆದ ನೀರನ್ನು ನಿಯಮಿತವಾಗಿ ಸೇವಿಸಿದರೆ ಈ ತೊಂದರೆಯು ನಿವಾರಣೆಯಾಗುತ್ತದೆ.
* ಅಕ್ಕಿ ತೊಳೆದ ನೀರು ಕುಡಿಯುವುದರಿಂದ ಉರಿಯೂತ, ಅತಿಸಾರ ಸಮಸ್ಯೆಗಳು ಕಡಿಮೆಯಾಗುತ್ತದೆ.
* ಬೇಸಿಗೆಗಾಲದಲ್ಲಿ ಕಾಡುವ ಬೆವರು ಗುಳ್ಳೆಯ ಸಮಸ್ಯೆಗೆ ಅಕ್ಕಿ ತೊಳೆದ ನೀರಿನಿಂದ ಸ್ನಾನ ಮಾಡುವುದು ಪರಿಣಾಮಕಾರಿಯಾಗಿದೆ.
* ಅಕ್ಕಿ ನೀರಿನಲ್ಲಿ ಉಪ್ಪು, ತುಪ್ಪ, ಕರಿಮೆಣಸು ಬೆರೆಸಿ ಸೇವಿಸದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಇದನ್ನೂ ಓದಿ: ಚರ್ಮದ ಸಮಸ್ಯೆಗೆ ಮನೆಯಲ್ಲಿ ಪರಿಹಾರ, ಈ ಮನೆ ಮದ್ದು ಟ್ರೈ ಮಾಡಿ
* ಬೇಸಿಗೆಗಾಲದಲ್ಲಿ ಅಕ್ಕಿ ನೀರನ್ನು ಕುಡಿದರೆ ದೇಹ ಹೈಡ್ರೇಟೆಡ್ ಆಗಿರುವುದಲ್ಲದೆ ಉತ್ತಮ ಮನೆ ಮದ್ದು.
* ಅಕ್ಕಿ ತೊಳೆದ ನೀರನ್ನು ಸೇವಿಸುವುದರಿಂದ ವಾಂತಿ ಅಥವಾ ಜ್ವರ ಹೀಗೆ ಯಾವುದೇ ಆರೋಗ್ಯ ಸಮಸ್ಯೆಯು ದೂರವಾಗುತ್ತದೆ.
* ಅಕ್ಕಿ ತೊಳೆದ ನೀರಿಗೆ ಕಿತ್ತಳೆ ಹಣ್ಣಿನ ಸಿಪ್ಪೆ, ನಿಂಬೆ ಹಣ್ಣಿನ ಸಿಪ್ಪೆಯನ್ನು ಮಿಶ್ರಣ ಮಾಡಿದರೆ ಹಚ್ಚಿಕೊಂಡರೆ ಚರ್ಮದ ಆರೋಗ್ಯವು ಸುಧಾರಿಸುತ್ತದೆ.
* ಬೇಸಿಗೆಗಾಲದಲ್ಲಿ ಬಿಸಿಲಿಗೆ ಮುಖವು ಕಪ್ಪಗಾಗಿದ್ದರೆ ಅಕ್ಕಿ ತೊಳೆದ ನೀರಿಗೆ ಅಲೋವೆರಾ ಜೆಲ್ ಹಾಗೂ ರೋಸ್ ವಾಟರ್ ಬೆರಸಿ ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಹೊಳಪು ಹೆಚ್ಚಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ