ಸಿಹಿ ಗೆಣಸಿನ ಹಲ್ವಾ ಮಾಡಲು ಇಷ್ಟು ಐಟಂ ಸಾಕು, ಹಲ್ವಾ ರೆಡಿ!

ನಮ್ಮ ಪೂರ್ವಜರು ಬಳಸುತ್ತಿದ್ದ ಆಹಾರಗಳಲ್ಲಿ ಗೆಣಸು ಕೂಡ ಒಂದು. ಆದರೆ ಇಂದಿನ ಮಕ್ಕಳಿಗೆ ಈ ಗೆಣಸು ಕೊಟ್ಟರೆ ಬೇಡ ಎನ್ನುವುದೇ ಹೆಚ್ಚು. ಈಗಿನ ಮಕ್ಕಳಿಗೆ ಗೆಣಸು ತಿಂದೇ ಗೊತ್ತಿರುವುದಿಲ್ಲ. ಹೀಗಾಗಿ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಈ ಗೆಣಸಿನಿಂದ ಗೆಣಸಿನ ಪಾಯಸ, ಗೆಣಸಿನ ಹಲ್ವಾ ಮಾಡಿ ನೀಡಿದರೆ ಮಕ್ಕಳು ಕೂಡ ಬೇಡ ಹೇಳುವುದೇ ಇಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಗೆಣಸಿನ ಹಲ್ವಾ ಮಾಡುವ ರೆಸಿಪಿಯ ವಿಡಿಯೋವೊಂದನ್ನು ಶೇರ್ ಮಾಡಲಾಗಿದೆ. ನೀವು ಸಿಹಿ ತಿಂಡಿ ಪ್ರಿಯರಾಗಿದ್ದರೆ ಮನೆಯಲ್ಲಿ ಸುಲಭವಾಗಿ ಗೆಣಸಿನ ಹಲ್ವಾ ಮಾಡಿದರೆ ಸವಿಯಿರಿ.

ಸಿಹಿ ಗೆಣಸಿನ ಹಲ್ವಾ ಮಾಡಲು ಇಷ್ಟು ಐಟಂ ಸಾಕು, ಹಲ್ವಾ ರೆಡಿ!
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 19, 2024 | 4:27 PM

ನಾವೀಗ ಆಧುನಿಕತೆ ಪ್ರಪಂಚಕ್ಕೆ ತೆರೆದುಕೊಂಡಿದ್ದೇವೆ. ಹೀಗಾಗಿ ನಮ್ಮ ಪೂರ್ವಜರು ಸೇವಿಸುತ್ತಿದ್ದ ಆಹಾರಗಳನ್ನು ಕಡೆಗಣಿಸುತ್ತಿದ್ದೇವೆ. ಅವರು ಸೇವಿಸುತ್ತಿದ್ದ ಆಹಾರಗಳಿಂದ ನೂರು ವರ್ಷಗಳ ಕಾಲ ಬದುಕುತ್ತಿದ್ದರು. ಆದರೆ ಇಂದಿನ ಮಕ್ಕಳಿಗೆ ಪಿಜ್ಜಾ, ಬರ್ಗರ್, ಜಂಕ್ ಫುಡ್ ಗಳೇ ಬೇಕು. ಆದರೆ ಹಿಂದಿನ ಕಾಲದ ಹಿರಿಯರ ಕಾಲದ ಸಿಹಿ ಗೆಣಸಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಈಗಿನ ಕಾಲದವರಿಗೆ ತಿಳಿದಿಲ್ಲ. ಈ ಸಿಹಿ ಗೆಣಸು ವಿಟಮಿನ್ ಎ ಮತ್ತು ವಿಟಮಿನ್ ಸಿ, ಖನಿಜಗಳು ಹಾಗೂ ಫೈಬರ್ ಗಳಿಂದ ಹೇರಳವಾಗಿದ್ದು ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುವ ಗುಣವನ್ನು ಹೊಂದಿದೆ. ಮಾರುಕಟ್ಟೆಯಲ್ಲಿರುವ ಸಿಗುವ ಸಿಹಿ ಗೆಣಸಿನಿಂದ ಸುಲಭವಾಗಿ ಹಲ್ವಾ ಮಾಡುವ ರೆಸಿಪಿಯ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.

ಫುಡಿಸುಝಿ ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಖಾತೆ ಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಸಿಹಿ ಗೆಣಸನ್ನು ಬೇಯಿಸುವ ಮೂಲಕ ಈ ವಿಡಿಯೋವು ಪ್ರಾರಂಭವಾಗುತ್ತದೆ. ಬೆಂದ ಸಿಹಿ ಗೆಣಸಿನ ಸಿಪ್ಪೆ ತೆಗೆದು ಚೆನ್ನಾಗಿ ತುರಿಯಲಾಗಿದೆ. ಗ್ಯಾಸ್ ಮೇಲೆ ಬಾಣಲೆಯಿಟ್ಟು ಎರಡು ಚಮಚದಷ್ಟು ತುಪ್ಪ ಹಾಕಿ, ಈಗಾಗಲೇ ತುರಿದಿಟ್ಟ ಗೆಣಸನ್ನು ಬಾಣಲೆಗೆ ಹಾಕಿ ಬೆರೆಸಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಈ ಮಿಶ್ರಣಕ್ಕೆ ಹಾಲು ಹಾಗೂ ಸಕ್ಕರೆ ಹಾಕಿ ಮಿಕ್ಸ್ ಮಾಡಲಾಗಿದೆ. ಗೆಣಸಿನ ಹಲ್ವಾದ ಘಮ ಹೆಚ್ಚಾಗಲು ಕೇಸರಿ ಮಿಕ್ಸ್ ಮಸಾಲಾ , ಏಲಕ್ಕಿ ಪುಡಿ ಹಾಕಲಾಗಿದ್ದು, ರುಚಿ ರುಚಿಯಾದ ಗೆಣಸಿನ ಹಲ್ವಾ ಸವಿಯಲು ಸಿದ್ಧವಾಗಿದೆ. ಕೊನೆಗೆ ಈ ಒಂದು ಬಟ್ಟಲಿಗೆ ಸಿದ್ಧವಾದ ಗೆಣಸಿನ ಹಲ್ವಾಹಾಕಿ ಅದರ ಮೇಲೆ ಗೋಡಂಬಿ ಬೀಜವನ್ನು ಉದುರಿಸಲಾಗಿದೆ.

ಇದನ್ನೂ ಓದಿ: ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ, ಅದರಲ್ಲಿದೆ ಈ ಆರೋಗ್ಯ ಪ್ರಯೋಜನಗಳು

ಈ ವಿಡಿಯೋವು ಇಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆಹಾರಪ್ರಿಯರಂತೂ ಮೆಚ್ಚುಗೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು, ತುಂಬಾ ರುಚಿಕರವಾಗಿದೆ ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು, ನಾನು ಮನೆಯಲ್ಲಿ ಸಿಹಿ ಗೆಣಸಿನ ಹಲ್ವಾವನ್ನು ಒಮ್ಮೆ ಪ್ರಯತ್ನಿಸಿದೆ, ತುಂಬಾನೇ ರುಚಿಕರವಾಗಿತ್ತು ಎಂದಿದ್ದಾರೆ. ಈ ಗೆಣಸಿನ ಹಲ್ವಾ ರೆಸಿಪಿಯ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Mon, 19 February 24

ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು
ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್
ಎದುರಾಳಿಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಶಪಥ ಮಾಡಿದ ರಜತ್
ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು, ಪೂಜಾ ವಿಧಾನ ತಿಳಿಯಿರಿ
ಮನೆಯಲ್ಲಿನ ಶಿವಲಿಂಗ ಎಷ್ಟು ಎತ್ತರ ಇರಬೇಕು, ಪೂಜಾ ವಿಧಾನ ತಿಳಿಯಿರಿ
Daily horoscope: ಈ ರಾಶಿಯವರ ಗೃಹ ನಿರ್ಮಾಣದ ಕನಸು ಇಂದು ಇಡೇರುತ್ತದೆ
Daily horoscope: ಈ ರಾಶಿಯವರ ಗೃಹ ನಿರ್ಮಾಣದ ಕನಸು ಇಂದು ಇಡೇರುತ್ತದೆ
ಆತುರದಲ್ಲಿ ಚಿಕನ್ ತಿಂದ ಧನರಾಜ್ ಆಚಾರ್; ಹೇಗಿದೆ ನೋಡಿ ಒದ್ದಾಟ
ಆತುರದಲ್ಲಿ ಚಿಕನ್ ತಿಂದ ಧನರಾಜ್ ಆಚಾರ್; ಹೇಗಿದೆ ನೋಡಿ ಒದ್ದಾಟ
ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಚೊಚ್ಚಲ ಏಕದಿನ ಶತಕ ಸಿಡಿಸಿದ ಹರ್ಲೀನ್ ಡಿಯೋಲ್
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು
ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು