ನಾವು ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳು ನಮ್ಮ ಅರೋಗ್ಯಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು ಎಂದು ಎಂದಾದರೂ ಯೋಚಿಸಿದ್ದೀರಾ? ಭಾರತದ ಅಪೆಕ್ಸ್ ಫುಡ್ ರೆಗ್ಯುಲೇಟರ್, ಫುಡ್ ಸೇಫ್ಟಿ ಆ್ಯಂಡ್ ಸ್ಟ್ಯಾಂಡರ್ಡ್ಸ್ ಆಫ್ ಅಥಾರಿಟಿ ಇಂಡಿಯಾ (ಎಫ್‌ಎಸ್‌ಎಸ್‌ಎಐ) ವಿವಿಧ ಬ್ರಾಂಡ್‌ಗಳ ಪುಡಿ ಮಸಾಲೆಗಳ ಮಾದರಿಗಳನ್ನು ಸಂಗ್ರಹಿಸಲು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.
ಹಾಂಗ್ ಕಾಂಗ್ ಮತ್ತು ಸಿಂಗಾಪುರದ ಅಧಿಕಾರಿಗಳು ಭಾರತದ ಎರಡು ಮಸಾಲೆ ಪದಾರ್ಥಗಳ ತಯಾರಕರಾದ MDH ಮತ್ತು ಎವರೆಸ್ಟ್‌ನಿಂದ 4 ಮಸಾಲೆ ಮಿಶ್ರಣಗಳನ್ನು ಹಿಂತೆಗೆದುಕೊಡಿದೆ. ಅವುಗಳಲ್ಲಿ ಹೆಚ್ಚಿನ ಮಟ್ಟದ ಎಥಿಲೀನ್ ಆಕ್ಸೈಡ್ ಅನ್ನು ಕಂಡುಹಿಡಿದ ನಂತರ ಈ ಬೆಳವಣಿಗೆ ನಡೆದಿದೆ. ಇದನ್ನು ತಯಾರಕರು ತಮ್ಮ ಉತ್ಪನ್ನಗಳಿಗೆ ದೀರ್ಘಾವಧಿಯ ಜೀವಿತಾವಧಿಯನ್ನು ನೀಡಲು ಒಂದು ಫ್ಯೂಮಿಗಂಟ್ ಮತ್ತು ಕ್ರಿಮಿನಾಶಕವಾಗಿ ಬಳಸುತ್ತಾರೆ. ಆದರೆ, FSSAI ಯಾವುದೇ ಆಹಾರ ಉತ್ಪನ್ನದಲ್ಲಿ ಇದರ ಬಳಕೆಯನ್ನು ಅನುಮತಿಸುವುದಿಲ್ಲ. 25 ದಿನಗಳಲ್ಲಿ ಮಸಾಲೆಗಳ ಕುರಿತು ಕ್ರೋಢೀಕೃತ ವರದಿ ಹೊರಬೀಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Health Care Tips: ಹೆಚ್ಚು ಮಾಂಸಾಹಾರ ಸೇವಿಸುವವರಲ್ಲಿ ಈ ಕ್ಯಾನ್ಸರ್ ಅಪಾಯ ಹೆಚ್ಚು!
ಎಥಿಲೀನ್ ಆಕ್ಸೈಡ್ ಇರುವಿಕೆಯನ್ನು ಪರೀಕ್ಷಿಸಲು ಎಲ್ಲಾ ಬ್ರಾಂಡ್‌ಗಳಿಂದ ಮಸಾಲೆ ಮಿಶ್ರಣಗಳ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ರಫ್ತು ಮಾಡಲಾದ ಆಹಾರ ಪದಾರ್ಥಗಳು FSSAI ವ್ಯಾಪ್ತಿಗೆ ಬರುವುದಿಲ್ಲವಾದರೂ, ಭಾರತೀಯ ಜನರು ಹೆಚ್ಚಾಗಿ ಸೇವಿಸುವ ಉತ್ಪನ್ನಗಳು ಸುರಕ್ಷಿತವಾಗಿವೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಕೆಲಸವಾಗಿದೆ. ಆದ್ದರಿಂದ, ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳಲ್ಲಿಯೂ ಈ ಮಾಲಿನ್ಯಕಾರಕವಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಈ 2 ಮಸಾಲೆ ಪದಾರ್ಥಗಳ ತಯಾರಕರು ತಪ್ಪಿತಸ್ಥರೆಂದು ಕಂಡುಬಂದರೆ, ಆಹಾರ ಸುರಕ್ಷತಾ ಕಾಯ್ದೆಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ಎಥಿಲೀನ್ ಆಕ್ಸೈಡ್ ಎಂದರೇನು?:
“ಎಥಿಲೀನ್ ಆಕ್ಸೈಡ್ ಒಂದು ಕೀಟನಾಶಕವಾಗಿದ್ದು, ಕ್ಯಾನ್ಸರ್ ಕುರಿತ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಗ್ರೂಪ್ 1 ಕಾರ್ಸಿನೋಜೆನ್ ಎಂದು ವರ್ಗೀಕರಿಸಲಾಗಿದೆ. ಅಂದರೆ ಇದು ಕ್ಯಾನ್ಸರ್ಗೆ ಕಾರಣವಾಗಬಹುದು ಎಂಬುದಕ್ಕೆ ಮಾನವ ಅಧ್ಯಯನಗಳಿಂದ ಸಾಕಷ್ಟು ಪುರಾವೆಗಳಿವೆ ಎಂದು ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆ ಪೌಷ್ಟಿಕತಜ್ಞೆ ಕನಿಕಾ ನಾರಂಗ್ ಹೇಳುತ್ತಾರೆ.
ಇದನ್ನೂ ಓದಿ: Breast Cancer: ಭಾರತದಲ್ಲಿ ಇದ್ದಕ್ಕಿದ್ದಂತೆ ಸ್ತನ ಕ್ಯಾನ್ಸರ್ ಹೆಚ್ಚಾಗಿರುವುದೇಕೆ?
ಎಥಿಲೀನ್ ಆಕ್ಸೈಡ್ ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?:
ಈ ವಿಷಕಾರಿ ಪದಾರ್ಥವನ್ನು ಹೊಂದಿರುವ ಆಹಾರಗಳನ್ನು ಕಡಿಮೆ ಮಟ್ಟದಲ್ಲಿ ಸೇವಿಸುವಾಗ ತೀವ್ರ ಎಚ್ಚರಿಕೆಯನ್ನು ವಹಿಸಬೇಕು. ಏಕೆಂದರೆ ಎಥಿಲೀನ್ ಆಕ್ಸೈಡ್ ಡಿಎನ್‌ಎಗೆ ಹಾನಿ ಮಾಡುತ್ತದೆ. ಇದು ವಸ್ತುಗಳನ್ನು ಕ್ರಿಮಿನಾಶಕಗೊಳಿಸಲು ಸಹಾಯ ಮಾಡುತ್ತದೆ. ಹಾಗೇ, ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಲ್ಯುಕೇಮಿಯಾ, ಹೊಟ್ಟೆಯ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್‌ನಂತಹ ಕ್ಯಾನ್ಸರ್‌ಗಳ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ. ಇದು ಉಸಿರಾಟದ ಕಿರಿಕಿರಿ ಮತ್ತು ಶ್ವಾಸಕೋಶದ ಗಾಯ, ತಲೆನೋವು, ವಾಕರಿಕೆ, ವಾಂತಿ, ಅತಿಸಾರ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Tue, 23 April 24