Beauty Tips in Kannada : ಬೇಸಿಗೆಯಲ್ಲಿ ತುಟಿ ಒಣಗಿದೆಯೇ? ಈ ಮನೆ ಮದ್ದು ಬಳಸಿ
ಬೇಸಿಗೆಯಲ್ಲಿ ಬಿಸಿಲಿನ ಝಳ ಒಂದೆಡೆಯಾದರೆ ಕಾಡುವ ಆರೋಗ್ಯ ಸಮಸ್ಯೆಗಳು ಇನ್ನೊಂದೆಡೆ. ಆರೋಗ್ಯವನ್ನು ಕಾಯ್ದುಕೊಳ್ಳುವುದು ಕಷ್ಟ ಎನ್ನುವ ಕಾರಣಕ್ಕೆ ಬೇಸಿಗೆಗಾಲ ಬೇಡವೇ ಬೇಡ ಎಂದೇಳುವವರೇ ಹೆಚ್ಚು. ಕೆಲವರಿಗೆ ಚಳಿಗಾಲ ಮಾತ್ರವಲ್ಲದೇ ಬೇಸಿಗೆಯಲ್ಲಿ ತುಟಿ ಬಿರುಕು ಬಿಡುತ್ತದೆ, ತುಟಿಗಳು ಒಣಗುತ್ತವೆ. ಆದರೆ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಅಂದವಾದ ತುಟಿಯನ್ನು ರಕ್ಷಿಸಿಕೊಳ್ಳಬಹುದು.
ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವುದೇ ತುಟಿಗಳು. ಆದರೆ ಕೆಲವರ ತುಟಿಗಳು ಋತುಮಾನಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಈ ಬೇಸಿಗೆಯಲ್ಲಿ ಅತಿಯಾದ ಶಾಖ ಮತ್ತು ಸೂರ್ಯನ ಕಿರಣಗಳಿಂದ ತುಟಿಗಳು ಒಣಗುವುದು ಸಹಜ. ಒಂದು ವೇಳೆ ಸುಡು ಬಿಸಿಲಿನಲ್ಲಿ ನಿಮ್ಮ ತುಟಿಗಳು ಅಂದ ಕಳೆದುಕೊಂಡಿದ್ದರೆ ಈ ಮನೆ ಮದ್ದಿನಿಂದ ಪರಿಹಾರ ಕಂಡುಕೊಳ್ಳಿ.
ಒಣ ತುಟಿಗೆ ಸರಳ ಮನೆಮದ್ದುಗಳು:
- ಬೇಸಿಗೆಯ ಸಮಯದಲ್ಲಿ ಹೆಚ್ಚು ನೀರು ಕುಡಿಯುವ ಮೂಲಕ ಒಣತುಟಿ ಸಮಸ್ಯೆಯಿಂದ ಮುಕ್ತರಾಗಬಹುದು.
- ಒಣಗಿದ ತುಟಿಗಳಿಗೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
- ತುಟಿಗಳಿಗೆ ಹರಳೆಣ್ಣೆ ಅಥವಾ ಆಲಿವ್ ಎಣ್ಣೆ ಹಚ್ಚುವುದು ಕೂಡ ಪರಿಣಾಮಕಾರಿಯಾಗಿದೆ.
- ಜೇನುತುಪ್ಪ ಹಾಗೂ ವ್ಯಾಸಲಿನನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ತುಟಿಗಳಿಗೆ ರಾತ್ರಿ ಮಲಗುವ ವೇಳೆ ಹಚ್ಚುಕೊಳ್ಳುವುದು ತುಟಿ ಒಣಗುವ ಹಾಗೂ ಬಿರುಕು ಬಿಡುವ ಸಮಸ್ಯೆಯು ದೂರವಾಗುತ್ತದೆ.
- ಗುಲಾಬಿ ಹೂವಿನ ಎಲೆಗಳನ್ನು ವ್ಯಾಸಲಿನ್ನೊಂದಿಗೆ ಮಿಶ್ರಣ ಮಾಡಿ ಹಚ್ಚಿಕೊಂಡರೆ ಶೀಘ್ರ ಪರಿಹಾರ ದೊರೆಯುತ್ತದೆ.
- ಮುಳ್ಳು ಸೌತೆಕಾಯಿ ಹೋಳುಗಳನ್ನು ಎರಡ್ಮೂರು ನಿಮಿಷಗಳ ಕಾಲ ತುಟಿಗಳ ಮೇಲೆ ನಿಧಾನವಾಗಿ ಮಸಾಜ್ ಮಾಡುವುದರಿಂದ ಒಣತುಟಿಯು ಇಲ್ಲದಂತಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ