Healthy Breakfast: ಆರೋಗ್ಯಕರ ಜೀವನಕ್ಕಾಗಿ ಐದು ಭಾರತೀಯ ಪೌಷ್ಟಿಕ ಉಪಹಾರಗಳು
ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ತಿಂಡಿ ತಿನಿಸುಗಳ ಬದಲಿಗೆ ಮನೆಯಲ್ಲೇ ತಯಾರಿಸಿದ ಆಹಾರವನ್ನು ತಿನ್ನಲು ನಮ್ಮ ಭಾರತೀಯ ಸಂಸ್ಕೃತಿಯು ಯಾವಾಗಲೂ ಪ್ರೋತ್ಸಾಹಿಸುತ್ತಿದೆ. ಈ ಆಹಾರಗಳು ಆರೋಗ್ಯಕರ ಜೀವನಕ್ಕೆ ಪ್ರಮುಖವಾಗಿವೆ.
ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ತಿಂಡಿ ತಿನಿಸುಗಳ ಬದಲಿಗೆ ಮನೆಯಲ್ಲೇ ತಯಾರಿಸಿದ ಆಹಾರವನ್ನು ತಿನ್ನಲು ನಮ್ಮ ಭಾರತೀಯ ಸಂಸ್ಕೃತಿಯು ಯಾವಾಗಲೂ ಪ್ರೋತ್ಸಾಹಿಸುತ್ತಿದೆ. ಆರೋಗ್ಯಕರ ಜೀವನದ ರಹಸ್ಯವು ನಿಮ್ಮ ಅಡುಗೆಮನೆಯಲ್ಲಿದೆ ಎಂಬುದನ್ನು ಮರೆಯದಿರಿ. ಭಾರತೀಯ ಆಹಾರ ಪದ್ದತಿಯು ಆರೋಗ್ಯಕರ ಜೀವನಕ್ಕೆ ಪ್ರಮುಖವಾಗಿವೆ. ನೀವು ಆರೋಗ್ಯಕರ ಉಪಹಾರವನ್ನು ತಿನ್ನಲು ಬಯಸುತ್ತಿದ್ದರೆ ಕೆಲವೊಂದು ಉತ್ತಮ ಉಪಹಾರಗಳ ಬಗ್ಗೆ ತಿಳಿಸುತ್ತೇವೆ. ಅವುಗಳು ಈ ಕೆಳಗಿನಂತಿವೆ.
ಇಡ್ಲಿ: ರಾಗಿ ಅಥವಾ ರವೆಯಿಂದ ಮಾಡಿದ ಇಡ್ಲಿ ಬೆಳಗಿನ ಉಪಾಹಾರವಾಗಿ ಸೇವಿಸಬಹುದು. ಇದು ತ್ವರಿತವಾಗಿ ಮತ್ತು ಸರಳವಾಗಿ ಜೀರ್ಣವಾಗುತ್ತವೆ. ರಾಗಿಯು ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ.
ತರಕಾರಿ ಸ್ಯಾಂಡ್‌ವಿಚ್: ಗೋಧಿ ಬ್ರೆಡ್ಗಳ ನಡುವೆ ತರಕಾರಿಗಳು ಮತ್ತು ಪನೀರ್ ತುಂಬಿದ ಆರೋಗ್ಯಕರ ಸ್ಯಾಂಡ್‌ವಿಚ್ ಸೇವಿಸುವುದರೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಬಹುದು. ಗೋಧಿ, ತರಕಾರಿಗಳ ಪ್ರೋಟೀನ್ ನಿಮ್ಮ ದೇಹಕ್ಕೆ ನೀಡಲಿದೆ.
ಓಟ್ ಮೀಲ್: ಇದು ಆರೋಗ್ಯಕರ ಉಪಹಾರ ಆಯ್ಕೆಯಾಗಿದೆ. ಓಟ್ಸ್ ಕಬ್ಬಿಣ, ಬಿ ವಿಟಮಿನ್, ಮ್ಯಾಂಗನೀಸ್, ಮೆಗ್ನೀಸಿಯಮ್, ಸತು ಮತ್ತು ಸೆಲೆನಿಯಮ್ ಅನ್ನು ಹೊಂದಿರುತ್ತದೆ.
ಪೋಹಾ (ಅವಲಕ್ಕಿ): ಭಾರತದ ಪ್ರಸಿದ್ಧ ಉಪಹಾರಗಳಲ್ಲಿ ಅವಲಕ್ಕಿ ಒಂದಾಗಿದೆ. ಪೋಹಾವನ್ನು ಹೆಚ್ಚು ಪೌಷ್ಟಿಕ ಅಥವಾ ಆರೋಗ್ಯಕರವಾಗಿಸಲು ಕೆಲವು ತರಕಾರಿಗಳನ್ನು ಸೇರಿಸಬಹುದು. ಕಾರ್ಬೋಹೈಡ್ರೇಟ್‌ಗಳು, ಕಬ್ಬಿಣ, ಫೈಬರ್ ಅನ್ನು ಹೊಂದಿರುವ ಅವಲಕ್ಕಿ, ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯವಾದ ಜೀವಸತ್ವಗಳ ಉತ್ತಮ ಮೂಲವಾಗಿದೆ.
ಮೂಂಗ್ ದಾಲ್ ಚೀಲ (ಹೆಸರು ಕಾಳಿನ ದೋಸೆ): ಭಾರತೀಯ ಖಾದ್ಯಗಳಲ್ಲಿ ಮೂಂಗ್ ದಾಲ್ ದೋಸೆ ಕೂಡ ಒಂದು. ಹೆಸರು ಕಾಲುಗಳು ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಉತ್ತಮ ಪ್ರೋಟೀನ್ ಅಂಶವನ್ನು ಹೊಂದಿದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ