Dry Cough: ಒಣ ಕೆಮ್ಮು ನಿವಾರಣೆಗೆ ಪ್ರತೀ ರಾತ್ರಿ ಈ ಸಿಂಪಲ್​​ ಟಿಪ್ಸ್​ ಫಾಲೋ ಮಾಡಿ

|

Updated on: Dec 22, 2023 | 5:08 PM

ಚಳಿಗಾಲದಲ್ಲಿ ಸಾಮಾನ್ಯ ಸಮಸ್ಯೆ ಎಂದರೆ ಕೆಮ್ಮು. ಕೆಮ್ಮು ಒಮ್ಮೆ ಪ್ರಾರಂಭವಾದರೆ ನಿಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ನಿದ್ದೆಗೂ ಅಡ್ಡಿಯುಂಟು ಮಾಡುತ್ತದೆ. ಇದರಿಂದಾಗಿ ಆ್ಯಂಟಿಬಯೋಟಿಕ್‌ಗಳನ್ನು ಅವಲಂಬಿಸುವ ಬದಲು ಈ ಸಿಂಪಲ್​​ ಮನೆಮದ್ದುಗಳನ್ನು ಟ್ರೈ ಮಾಡಿ.

Dry Cough: ಒಣ ಕೆಮ್ಮು ನಿವಾರಣೆಗೆ ಪ್ರತೀ ರಾತ್ರಿ ಈ ಸಿಂಪಲ್​​ ಟಿಪ್ಸ್​ ಫಾಲೋ ಮಾಡಿ
cough
Follow us on

ಚಳಿಗಾಲದಲ್ಲಿ ಅನೇಕ ರೋಗಗಳ ಹರಡುವುದರಿಂದ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಕಫ, ಶೀತ ಮತ್ತು ಕೆಮ್ಮು ಸೇರಿದಂತೆ ಉಸಿರಾಟದ ತೊಂದರೆ, ಅಸ್ತಮಾ ಸಮಸ್ಯೆಗಳು ಹೆಚ್ಚಾಗುತ್ತವೆ. ಜೊತೆಗೆ ಕೊರೊನಾ ಸಮಸ್ಯೆ ಮತ್ತೆ ಹುಟ್ಟುಕೊಂಡಿದ್ದು, ವಿಶೇಷವಾಗಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಸ್ವಲ್ಪ ಎಚ್ಚರದಿಂದಿರುವುದು ಅವಶ್ಯಕ. ಸ್ರವಿಸುವ ಮೂಗು, ಕೆಮ್ಮು, ಜ್ವರ, ಅಜೀರ್ಣ, ಎದೆಯುರಿ ಸಹ ಚಳಿಗಾಲದಲ್ಲಿ ಸಂಭವಿಸುತ್ತದೆ. ಆದರೆ ಚಳಿಗಾಲದಲ್ಲಿ ಸಾಮಾನ್ಯ ಸಮಸ್ಯೆ ಎಂದರೆ ಕೆಮ್ಮು. ಕೆಮ್ಮು ಒಮ್ಮೆ ಪ್ರಾರಂಭವಾದರೆ ನಿಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ನಿದ್ದೆಗೂ ಅಡ್ಡಿಯುಂಟು ಮಾಡುತ್ತದೆ. ಇದರಿಂದಾಗಿ ಆ್ಯಂಟಿಬಯೋಟಿಕ್‌ಗಳನ್ನು ಅವಲಂಬಿಸುವ ಬದಲು ಈ ಸಿಂಪಲ್​​ ಮನೆಮದ್ದುಗಳನ್ನು ಟ್ರೈ ಮಾಡಿ.

ಕೆಮ್ಮು ಮತ್ತು ನೋಯುತ್ತಿರುವ ಗಂಟಲಿಗೆ ಜೇನುತುಪ್ಪವು ಉತ್ತಮ ಮನೆಮದ್ದು. ಚಳಿಗಾಲದಲ್ಲಿ ದೇಹವನ್ನು ಆರೋಗ್ಯವಾಗಿಡಲು ಜೇನುತುಪ್ಪವನ್ನು ವರ್ಷಗಳಿಂದ ಬಳಸಲಾಗುತ್ತಿದೆ. ಆದ್ದರಿಂದ ನೀವೂ ಕೂಡ ಒಣ ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಜೇನುತುಪ್ಪದೊಂದಿಗೆ ತುಳಸಿ ಎಲೆಯನ್ನು ಸೇವಿಸಿ. ಇದರಿಂದ ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ದೇಹವೂ ಆರೋಗ್ಯವಾಗಿರುತ್ತದೆ. ಇದಲ್ಲದೇ ಜೇನುತುಪ್ಪದೊಂದಿಗೆ ಈರುಳ್ಳಿ ರಸವನ್ನು ಬೆರೆಸಿ ಸೇವಿಸುವುದು ಉತ್ತಮ. ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಸಮೃದ್ಧವಾಗಿದ್ದು, ಇದರೊಂದಿಗೆ ಜೇನುತುಪ್ಪವನ್ನು ಬೆರೆಸಿದಾಗ ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಯಿಂದ ಬೇಗನೆ ಮುಕ್ತಿ ಪಡೆಯಲು ಪಾಪ್ ಕಾರ್ನ್!

ಮನೆಯಲ್ಲಿ ಸಿರಪ್ ತಯಾರಿಸುವುದು ಹೇಗೆ?

ಒಂದು ಜಾರ್​​ನಲ್ಲಿ ಜೇನುತುಪ್ಪವನ್ನು ಹಾಕಿ. ಈಗ ಅದಕ್ಕೆ 2 ಚಮಚ ಈರುಳ್ಳಿಯ ರಸ ಸೇರಿಸಿ. ಚೆನ್ನಾಗಿ ಅಲ್ಲಾಡಿಸಿ ಮತ್ತು 5-6 ಗಂಟೆಗಳ ಕಾಲ ಮುಚ್ಚಿಡಿ ಅಥವಾ ರಾತ್ರಿಯಿಡೀ ಹೀಗೆ ಇಡಬಹುದು. ಈಗ ಈ ಮಿಶ್ರಣವನ್ನು ದಿನಕ್ಕೆ 2 ಚಮಚ ತೆಗೆದುಕೊಳ್ಳಿ. ಕೆಮ್ಮಿನ ಸಿರಪ್ ಬದಲಿಗೆ ಈ ಮನೆಮದ್ದನ್ನು ಅನುಸರಿಸಿ, ಕೆಮ್ಮು ಎರಡು ದಿನಗಳಲ್ಲಿ ಮಾಯವಾಗುತ್ತದೆ. ಚಿಕ್ಕವರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಈ ಸಿರಪ್ ಸೇವಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ  ಇಲ್ಲಿ ಕ್ಲಿಕ್​ ಮಾಡಿ: