ಕಣ್ಣಿನ ಕೆಳಗಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಹೀಗೆ ಮಾಡಿ

| Updated By: Pavitra Bhat Jigalemane

Updated on: Feb 08, 2022 | 3:21 PM

ನೀವೆಲ್ಲಾದರೂ ಅರ್ಜೆಂಟ್​ ಆಗಿ ಹೋಗಬೇಕಾದರೆ ಅಂತಹ ಸಂದರ್ಭಗಳಲ್ಲಿ ಡಾರ್ಕ್​ ಸರ್ಕಲ್​ಗಳನ್ನು ಮುಚ್ಚಲು ಮೇಕಪ್​ ಮಾಡಿಕೊಳ್ಳಿ. ಉತ್ತಮ ಗುಣಮಟ್ಟದ ಕನ್ಸಿಲರ್​, ಪೌಂಡೇಶನ್​ ಕ್ರೀಮ್​ ಮತ್ತು ಮುಖದ ಚರ್ಮಕ್ಕೆ ಹೊಂದುವ ಟಾಲ್​ಕಮ್​ ಗಳನ್ನು ಬಳಸಿ.

ಕಣ್ಣಿನ ಕೆಳಗಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಹೀಗೆ ಮಾಡಿ
ಸಾಂಕೇತಿಕ ಚಿತ್ರ
Follow us on

ಮುಖದ ಅಂದಗೆಡಿಸುವ ಡಾರ್ಕ್​ ಸರ್ಕಲ್ಸ್ (Dark Circles)​ ಸಾಮಾನ್ಯವಾಗಿ ಎಲ್ಲರಿಗೂ ಕಿರಿಕಿರಿಯಾಗುತ್ತದೆ. ದಿನನಿತ್ಯದ ಒತ್ತಡ, ಓಡಾಡದ ಕಾರಣದಿಂದ ಡಾರ್ಕ್​ ಸರ್ಕಲ್ಸ್​ಗಳು ಉಂಟಾಗುತ್ತದೆ. ಇದು ನಿಜವಾದ ಮುಖದ ಸೌಂದರ್ಯವನ್ನು  ಮರೆಮಾಚುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್​ಗಳ ಬಳಕೆ, ಕಂಪ್ಯೂಟರ್​ಗಳ ಮುಂದೆ ಕುಳಿತಿರುವುದರಿಂದ ಕಣ್ಣುಗಳ ಮೇಲೆ ಒತ್ತಡ ಬೀಳುತ್ತದೆ. ಕಣ್ಣಿನ ಕೆಳಗಿನ ಚರ್ಮ ಮೃದುವಾಗಿರುವುದರಿಂದ  ಕಣ್ಣಿನ ಮೇಲೆ ಒತ್ತಡ ಬಿದ್ದಾಗ ಚರ್ಮ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಡಾರ್ಕ್​ ಸರ್ಕಲ್​ಗಳು ಉಂಟಾಗುತ್ತದೆ.  ಕೆಲವೊಮ್ಮೆ ದೇಹದಲ್ಲಿ ಅನಾರೋಗ್ಯ ಇದ್ದರೂ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಮೂಡುತ್ತವೆ.

ಡಾರ್ಕ್​ಸರ್ಕಲ್​ಗಳಿಗೆ ಕಾರಣಗಳು:
ಮಾನಸಿಕ ಒತ್ತಡಗಳಿಂದ ಕಣ್ಣಿನ ಕೆಳಗೆ ಕಪ್ಪು ಬಣ್ಣ ಮೂಡುತ್ತದೆ. ಇದರ ಜತೆಗೆ ಅತಿಯಾದ ಹೊರಗಿನ ಸುತ್ತಾಟ, ಸೂರ್ಯನ ಕಿರಗಳಿಗೆ ಚರ್ಮವನ್ನು ತೆರೆದುಕೊಳ್ಳುವುದು, ಆಯಾಸ, ನೀರಿನ ಕೊರತೆ, ನಿದ್ದೆ ಮಾಡದಿರುವುದು, ದೇಹದಲ್ಲಿ ಉಷ್ಣತೆ ಜಾಸ್ತಿಯಾಗಿರುವುದು, ಅತಿಯಾಗಿ ಮೊಬೈಲ್ ಅಥವಾ ಕಂಪ್ಯೂಟರ್​ ಸ್ಕ್ರೀನ್​ಗಳನ್ನು ನೋಡುವುದು ಮುಖ್ಯ ಕಾರಣವಾಗಿದೆ.

ಡಾರ್ಕ್​ ಸರ್ಕಲ್ಸ್​ಗಳನ್ನು ಹೋಗಲಾಡಿಸಲು ಹೀಗೆ ಮಾಡಿ:
ನಿದ್ದೆ:
ಕಣ್ಣು ಮತ್ತು ಇಡೀ ದೇಹದ ಆರೋಗ್ಯ ಉತ್ತಮವಾಗಲು ನಿದ್ದೆ ಅತಿ ಮುಖ್ಯ ಅಂಶವಾಗಿದೆ.  7-8 ಗಂಟೆಗಳ ನಿದ್ದೆ ಪ್ರತೀ ಆರೋಗ್ಯವಂತ ವ್ಯಕ್ತಿಗೆ ಅಗತ್ಯವಾಗಿದೆ. ಹೀಗಾಗಿ ಚೆನ್ನಾಗಿ ನಿದ್ದೆ ಮಾಡಿ ಇದರಿಂದ ಡಾರ್ಕ್​ ಸರ್ಕಲ್​ಗಳು ಕಡಿಮೆಯಾಗುತ್ತವೆ. ಜತೆಗೆ ಮಲಗುವಾಗ ಅಥವಾ ಕತ್ತಲೆಯಲ್ಲಿ ಮೊಬೈಲ್​ ಬಳಕೆ ಬೇಡ. ಇದು ಕಣ್ಣಿಗೆ ಹೆಚ್ಚು ಒತ್ತಡ ಉಂಟು ಮಾಡಿ ಕಪ್ಪು ಕಲೆಗಳನ್ನು ಜಾಸ್ತಿ ಮಾಡುತ್ತದೆ.

ತಣ್ಣನೆಯ ವಸ್ತುಗಳ ಬಳಕೆ:
ಕಣ್ಣಿನ ಮೇಲೆ  ತಣ್ಣನೆಯ ವಸ್ತುಗಳನ್ನು ಇರಿಸಿಕೊಳ್ಳಿ. ಉದಾಹರಣೆಗೆ  ಸೌತೆಕಾಯಿಯ ಸ್ಲೈಸ್​ಗಳನ್ನು ಮಾಡಿ ಕಣ್ಣಿನ ಮೇಲೆ ಇಟ್ಟುಕೊಳ್ಳುವುದು, ಐಸ್ಕ್ಯೂ​ಬ್​ಗಳಿಂದ ಮಸಾಜ್​ ಮಾಡುವುದು ಸೇರಿದಂತೆ ಕಣ್ಣನ್ನು ಆದಷ್ಟು ತಂಪಾಗಿಡಿ.

ಮೇಕಪ್​:
ನೀವೆಲ್ಲಾದರೂ ಅರ್ಜೆಂಟ್​ ಆಗಿ ಹೋಗಬೇಕಾದರೆ ಅಂತಹ ಸಂದರ್ಭಗಳಲ್ಲಿ ಡಾರ್ಕ್​ ಸರ್ಕಲ್​ಗಳನ್ನು ಮುಚ್ಚಲು ಮೇಕಪ್​ ಮಾಡಿಕೊಳ್ಳಿ. ಉತ್ತಮ ಗುಣಮಟ್ಟದ ಕನ್ಸಿಲರ್​, ಪೌಂಡೇಶನ್​ ಕ್ರೀಮ್​ ಮತ್ತು ಮುಖದ ಚರ್ಮಕ್ಕೆ ಹೊಂದುವ ಟಾಲ್​ಕಮ್​ ಗಳನ್ನು ಬಳಸಿ. ಇದು ನಿಮ್ಮ ಡಾರ್ಕ್​ ಸರ್ಕಲ್​ಗಳನ್ನು ಮರೆಮಾಡಿ ಮುಜುಗರ ಉಂಟಾಗುವುದನ್ನು ತಡೆಯುತ್ತದೆ.

ಟೀ ಬ್ಯಾಗ್​:
ಗ್ರೀನ್​ ಟೀ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ ಪದಾರ್ಥವಾಗಿದೆ. ಬ್ಲಾಕ್​ ಅಥವಾ ಗ್ರೀನ್​ ಟೀಯನ್ನು ಒಂದೈದು ನಿಮಿಷ ಬಿಸಿ ನೀರಿನಲ್ಲಿ ನೆನಸಿಟ್ಟು, ನಂತರ ಅದನ್ನು ಕಣ್ಣಿನ ಮೇಲೆ ಇರಿಸಿಕೊಳ್ಳಿ. 20 ನಿಮಿಷವಾದರೂ ಕಣ್ಣಿನ ಮೇಲೆ ಟೀ ಬ್ಯಾಗ್​ಗಳನ್ನು ಇಟ್ಟುಕೊಳ್ಳಿ. ಇದರ ನಿರಂತರ ಬಳಕೆಯಿಂದ ಕಣ್ಣಿನ ಕೆಳಗೆ ಕಪ್ಪಾಗಿರುವ ಚರ್ಮ ತಿಳಿಯಾಗತ್ತದೆ.

ಇದನ್ನೂ ಓದಿ:

ಆರೋಗ್ಯ ವೃದ್ಧಿಸುವ ನಿಂಬು-ಶುಂಠಿ ರಸಂ ಮಾಡಿ ಸೇವಿಸಿ; ಇಲ್ಲಿದೆ ರೆಸಿಪಿ