ಪ್ರೀತಿ (Love) ಎನ್ನುವುದು ಎರಡಕ್ಷರದ ಪದವಾದರೂ ಅದರ ಆಳ ಮಾತ್ರ ಅಗಾಧ.ಎಲ್ಲೋ ಹುಟ್ಟಿ, ಎಲ್ಲೂ ಬೆಳೆದು ಬದುಕ ಬೆಸೆದುಕೊಂಡು ಕನಸುಗಳನ್ನು ಹಂಚಿಕೊಂಡು ಒಟ್ಟಿಗಿರುವಂತೆ ಮಾಡುವ ಸಿಹಿಯಾದ ಸಂಬಂಧ. ಸಂಬಂಧ ಎಂದಾಕ್ಷಣ ಅಲ್ಲಿ ಮೊದಲು ಬರುವುದು ನಂಬಿಕೆ, ವಿಶ್ವಾಸ, . ಪ್ರತೀ ಬಂಧಕ್ಕೆ ಭದ್ರತೆ ನೀಡುವುದು ಇದೇ ನಂಬಿಕೆ(Trust) ಹೀಗಿದ್ದಾಗ ನಂಬಿಕೆ ಬೆಳೆಯಬೇಕೆಂದರೆ ಸದಾ ಪಾರದರ್ಶಕತೆ ಅಗತ್ಯವಾಗಿರುತ್ತದೆ. ಅನುಮಾನದ ಹುಳ ಹೊಕ್ಕರೆ ಅಲ್ಲಿಗೆ ಸಂಬಂಧದ ಬುಡ ಕುಸಿಯಲು ಆರಂಭವಾಗುತ್ತದೆ. ಆದರೂ ಕೆಲವೊಮ್ಮೆ ಸಂಗಾತಿಯೊಂದಿಗೆ ಕೆಲವು ವಿಚಾರಗಳನ್ನು ಮಾತನಾಡಲಾಗದೆ ಅಂತರ್ಗತವಾಗಿದ್ದು ಬಿಡುತ್ತದೆ. ಅಂತಹ ಸಂದರ್ಭದಲ್ಲಿ ಸಂಬಂಧಗಳಲ್ಲಿ ತಪ್ಪು ಕಲ್ಪನೆಗಳು (Misunderstanding) ಸುಲಭವಾಗಿ ಜಾಗಮಾಡಿಕೊಂಡು ಬಿಡುತ್ತವೆ.
ಸಂಬಂಧ ಹಾಗೂ ಸಂವಹನದ ಕುರಿತು ಹಿಂದೂಸ್ತಾನ್ ಟೈಮ್ಸ್ ಜತೆ ದಿ ವೈಟ್ ಸ್ಪೇಸ್ ಸಂಸ್ಥಾಪಕಿ ಜ್ಯೋತ್ನ್ಸಾ ಅಹುಜಾ ಅವರು ಮಾತನಾಡಿದ್ದಾರೆ, ಸಂಬಂಧದಲ್ಲಿ ಕೆಲವು ವಿಚಾರಗಳು ಹಂಚಿಕೊಳ್ಳದೆ ಸಂಗಾತಿಗಳಲ್ಲಿಬ್ಬರಲ್ಲೂ ಅಂತರ್ಗತವಾಗಿದ್ದು ಬಿಡುತ್ತದೆ. ಅಂತಹ ಸಂದರ್ಭಗಳಲ್ಲಿ ನಿಮ್ಮ ಸಂಗಾತಿಯ ಗುಣಗಳನ್ನು, ದೃಷ್ಟಿಕೋನಗಳನ್ನು ತಿಳಿಯಲು ಕಷ್ಟವಾಗುತ್ತದೆ. ಆದ್ದರಿಂದ ಎಷ್ಟೇ ಗುಟ್ಟಿನ ವಿಚಾರವಾಗಿದ್ದರೂ ನಿಮ್ಮ ಜೀವನವನ್ನು ಹಂಚಿಕೊಂಡ ಮೇಲೆ ನಿಮ್ಮ ಸಂಗತಿಗಳನ್ನು ತಿಳಿಯುವ ಹಕ್ಕು ಇರುತ್ತದೆ. ಹೀಗಾಗಿ ಮುಕ್ತವಾಗಿ ಮಾತನಾಡಿ ಎನ್ನುತ್ತಾರೆ.
ಸಂಬಂಧದಲ್ಲಿ ಸಂವಹನ ಅತೀ ಮುಖ್ಯವಾಗಿರುತ್ತದೆ. ಸಣ್ಣ ವಿಚಾರಗಳನ್ನೂ ಕೂಡ ಹಂಚಿಕೊಳ್ಳುವುದು ಅಗತ್ಯವಾಗಿರುತ್ತದೆ. ಕೆಲವೊಮ್ಮೆ ನಿಯಮಗಳು ಮತ್ತು ಷರತ್ತುಗಳನ್ನು ಹಾಕಿಕೊಳ್ಳಲಾಗುತ್ತದೆ. ಅಂತಹ ಸಂದರ್ಭದಲ್ಲಿ ಮಾತುಗಳು ಹುದುಗಿಹೋಗಿತ್ತವೆ. ಅದಕ್ಕೆ ಹೆಚ್ಚು ಅವಕಾಶ ಕೊಡಬೇಡಿ ಎನ್ನುತ್ತಾರೆ ಜೋತ್ಸ್ನಾ. ಸಂಬಂಧದಲ್ಲಿ ಯಾವಾಗಲೂ ಭರವಸೆಯನ್ನು ಉಳಿಸಿಕೊಳ್ಳಬೇಕು. ಒಮ್ಮೆ ಹೇಳಿದ ಮಾತುಗಳನ್ನು ಆದಷ್ಟು ಉಳಿಸಿಕೊಳ್ಳಲು ಪ್ರಯತ್ನಿಸಿ. ದಿನದಲ್ಲಿ ಸ್ವಲ್ಪ ಸಮಯವಾದರೂ ನಿಮ್ಮ ಸಂಗಾತಿಯೊಂದಿಗೆ ಕಳೆಯಿರಿ. ಇದರಿಂದ ಇಬ್ಬರ ನಡುವಿನ ಬಾಂಧ್ಯವ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಆದ್ದರಿಂದ ಸಂಬಂಧದಲ್ಲಿ ಅದಷ್ಟು ಪಾರ್ದರ್ಶಕವಾಗಿರಿ ಮತ್ತು ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಬದುಕು ಸುಂದರವಾಗುತ್ತದೆ.
ಇದನ್ನೂ ಓದಿ:
Tourist places : ನಿಮ್ಮ ಸಂಗಾತಿ ಜೊತೆಗೆ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ!