ಸಾಂದರ್ಭಿಕ ಚಿತ್ರ
ಕೂತರೆ ಎದ್ದೇಳುವುದಕ್ಕೂ ಆಗುವುದಿಲ್ಲ, ವಿಪರೀತವಾದ ಗಂಟು ನೋವು ಈ ಮಾತನ್ನು ಬಹುತೇಕರ ಬಾಯಲ್ಲಿ ಕೇಳಿರುತ್ತೀರಿ. ವಯಸ್ಸು ನಲವತ್ತೈದು ಸಮೀಪಿಸುತ್ತಿದ್ದಂತೆ ಎರಡು ಕಾಲುಗಳ ಗಂಟಿನ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಹೆಚ್ಚಿನವರು ಉರಿಯೂತ ಹಾಗೂ ನೋವಿನಿಂದ ನರಳುತ್ತಾರೆ. ವಯಸ್ಸು ಏರುತ್ತಿದ್ದಂತೆ ಈ ಸಮಸ್ಯೆಯ ತೀವ್ರತೆಯೂ ಹೆಚ್ಚಾಗಿ, ನಡೆಯಲು ಆಗದಂತಹ ಪರಿಸ್ಥಿತಿಯು ಉಂಟಾಗುತ್ತದೆ. ದೀರ್ಘಕಾಲದವರೆಗೆ ಕಾಡುವ ಈ ನೋವಿನಿಂದ ಮುಕ್ತಿ ಪಡೆಯುವುದು ಕಷ್ಟವಾದರೂ ವಿಶ್ರಾಂತಿಯೆನ್ನುವುದು ಅಗತ್ಯವಾಗಿಬೇಕು.
ಸಂಧಿವಾತಕ್ಕೆ ಮನೆ ಮದ್ದುಗಳು ಇಲ್ಲಿದೆ
- ಮೆಂತೆಸೊಪ್ಪನ್ನು ಹಬೆಯಲ್ಲಿ ಬೇಯಿಸಿ ತಿನ್ನುತ್ತಿದ್ದರೆ ಸಂಧಿವಾತ ಸಂಬಂಧಿತ ಸಮಸ್ಯೆಗಳು ದೂರವಾಗುತ್ತದೆ.
- ಎರಡು ಚಮಚ ಅಮೃತಬಳ್ಳಿಯ ಚೂರ್ಣಕ್ಕೆ, ಅರ್ಧ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಕಷಾಯ ಮಾಡಿ ಪ್ರತಿದಿನ ಎರಡು ಬಾರಿ ಸೇವಿಸುವುದರಿಂದ ಸಂಧಿವಾತ ಹಾಗೂ ಕೀಲು ನೋವು ಶಮನವಾಗುತ್ತದೆ.
- ಸ್ವಲ್ಪ ಪ್ರಮಾಣದಲ್ಲಿ ಅಮೃತ ಬಳ್ಳಿಯನ್ನು ತೆಗೆದುಕೊಂಡು, 2 ಲೋಟ ನೀರಿನಲ್ಲಿ ಹಾಕಿ ಕುದಿಸಿ, ಅದಕ್ಕೆ ಅರ್ಧ ಚಮಚ ಗುಗ್ಗುಳವನ್ನು ಸೇರಿಸಿ ದಿನಕ್ಕೆರಡು ಬಾರಿ ಸೇವಿಸಿದರೆ ಸಂಧಿವಾತ ಸಮಸ್ಯೆಗೆ ಉತ್ತಮವಾದ ಮನೆ ಮದ್ದಾಗಿದೆ.
- ಅಮೃತ ಬಳ್ಳಿಯ ರಸವನ್ನು ತೆಗೆದು, ಅದಕ್ಕೆ ಅರ್ಧಚಮಚ ಹರಳೆಣ್ಣೆಯನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಸಂಧಿವಾತ, ಕಾಲು ನೋವಿನ ಸಮಸ್ಯೆಯು ಗುಣ ಮುಖವಾಗುತ್ತದೆ.
- ಮೂರು ಚಮಚದಷ್ಟು ಅಮೃತಬಳ್ಳಿ ರಸಕ್ಕೆ ಒಂದು ಚಮಚ ತುಪ್ಪ ಸೇರಿಸಿ ಸೇವಿಸಿದರೆ ಸಂಧಿವಾತದಿಂದ ಮುಕ್ತಿ ಹೊಂದಬಹುದು.
- ಪ್ರತಿದಿನವು ಸೇಬನ್ನು ತಿನ್ನುವ ಅಭ್ಯಾಸವನ್ನು ಬೆಳೆಸಿಕೊಂಡರೆ ಸಂಧಿವಾತದಿಂದ ದೂರ ಉಳಿಯಬಹುದು.
- ಮಾವಿನ ಹಣ್ಣನ್ನು ಸೇವಿಸುವುದರಿಂದ ಸಂಧಿವಾತ ಸಮಸ್ಯೆಯು ಶಮನವಾಗುತ್ತದೆ.
- ಬೆಳ್ಳುಳ್ಳಿ ಸೇವನೆಯಿಂದ ಸಂಧಿವಾತ ಸಂಬಂಧಿತ ಕಾಯಿಲೆಗಳು ಗುಣಮುಖವಾಗುತ್ತದೆ.
- ದಿನ ನಿತ್ಯದ ಆಹಾರದಲ್ಲಿ ನುಗ್ಗೆಕಾಯಿಯನ್ನು ಹೆಚ್ಚು ಬಳಸುವುದರಿಂದ ಸಂಧಿವಾತ ಸಮಸ್ಯೆಗೆ ರಾಮಬಾಣವಾಗಿದೆ.
- ಸಂಧಿವಾತದಿಂದ ಕಾಲಿನ ಗಂಟಿನ ಭಾಗವು ಊದಿಕೊಂಡಿದ್ದರೆ ಉಪ್ಪಿನ ಶಾಖ ಕೊಡುವುದರಿಂದ ಈ ಸಮಸ್ಯೆ ದೂರವಾಗುತ್ತದೆ.
- ಸ್ವಲ್ಪ ಪ್ರಮಾಣದಲ್ಲಿ ಮೊಸರನ್ನು ತೆಗೆದುಕೊಂಡು, ಅದಕ್ಕೆ ಒಂದು ಟೀ ಚಮಚದಷ್ಟು ಅರಿಶಿನಪುಡಿ ಬೆರೆಸಿ ಸೇವಿಸುವುದರಿಂದ ಸಂಧಿವಾತವು ಕಡಿಮೆಯಾಗುತ್ತದೆ.
ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ