Piles : ಮುಜುಗರ ತರಿಸುವ ಮೂಲವ್ಯಾಧಿಗೆ ಮನೆಯಲ್ಲೇ ಮದ್ದು

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 06, 2024 | 12:49 PM

ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರಲ್ಲಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಮೂಲವ್ಯಾಧಿಯೂ ಕೂಡ ಒಂದಾಗಿದೆ. ಸಾಮಾನ್ಯವಾಗಿ ತುಂಬಾ ಹೊತ್ತು ಕುಳಿತು ಕೆಲಸ ಮಾಡುವವರಲ್ಲಿ ಈ ಪೈಲ್ಸ್ ಸಮಸ್ಯೆಯೂ ಹೆಚ್ಚು ಕಂಡು ಬರುತ್ತದೆ. ಸರಿಯಾಗಿ ಚಿಕಿತ್ಸೆ ಹಾಗೂ ಪಥ್ಯವನ್ನು ಮಾಡಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದುವುದು ಕಷ್ಟವೇನಲ್ಲ. ಮನೆಯಲ್ಲಿಯೇ ಕೆಲವು ಮನೆ ಮದ್ದುಗಳನ್ನು ಮಾಡಿ ಸೇವಿಸಿದರೆ ಕಾಡುವ ಈ ಮೂಲವ್ಯಾಧಿ ಯಿಂದ ಪಾರಾಗಬಹುದು.

Piles : ಮುಜುಗರ ತರಿಸುವ ಮೂಲವ್ಯಾಧಿಗೆ ಮನೆಯಲ್ಲೇ ಮದ್ದು
Follow us on

ಆರೋಗ್ಯ ಸಮಸ್ಯೆಗಳು ಯಾರಿಗಿಲ್ಲ ಹೇಳಿ. ಕೆಲವು ಕಾಯಿಲೆಗಳು ಮುಜುಗರವನ್ನುಂಟು ಮಾಡುತ್ತದೆ. ಹೀಗಾಗಿ ಯಾರೊಂದಿಗೂ ಹಂಚಿಕೊಳ್ಳುವುದಕ್ಕೂ ಆಗುವುದಿಲ್ಲ, ಅಂತಹ ಸಮಸ್ಯೆಗಳಲ್ಲಿ ಮೂಲವ್ಯಾಧಿ ಕೂಡ ಒಂದಾಗಿದೆ. ಆದರೆ ಇದನ್ನು ಕಾಯಿಲೆಯ ನೋವು ಅನುಭವಿಸಿದವರೂ ಮಾತ್ರ ಬಲ್ಲರು. ದೈಹಿಕ ಚಟುವಟಿಕೆಗಳ ಕೊರತೆ, ಔಷಧಿಗಳ ಅಡ್ಡಪರಿಣಾಮಗಳು, ಜೀವನಶೈಲಿ ಹೀಗೆ ನಾನಾ ರೀತಿಯ ಕಾರಣಗಳಿಂದ ಬರಬಹುದು. ಈ ಸಮಸ್ಯೆಯೂ ಬಂದರೆ ಕುಳಿತುಕೊಳ್ಳಲು ಮತ್ತು ಮಲಗಲು ಕಷ್ಟವಾಗುತ್ತದೆ. ವಿಪರೀತವಾದರೆ ಶಸ್ತ್ರಚಿಕಿತ್ಸೆಯ ಮಾಡಬೇಕಾಗುತ್ತದೆ. ಹೀಗಾಗಿ ಪ್ರಾರಂಭದಲ್ಲೇ ಮನೆ ಔಷಧಿಯನ್ನು ಸೇವಿಸಿದರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

ಮೂಲವ್ಯಾಧಿ ಸಮಸ್ಯೆಗೆ ಸರಳ ಮನೆ ಮದ್ದುಗಳು

  • ಬೇವಿನ ಹೂವುಗಳಿಗೆ ಕಲ್ಲುಸಕ್ಕರೆ ಬೆರೆಸಿ, ಒಂದು ತಿಂಗಳ ಕಾಲ ಒಣಗಿಸಿ ಅದನ್ನು ದಿನನಿತ್ಯ ಒಂದು ಚಮಚದಷ್ಟು ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ ಮೂಲವ್ಯಾಧಿಯಿಂದ ನಿವಾರಣೆಯಾಗುತ್ತದೆ.
  • ಅಳಲೆಕಾಯಿ ಚೂರ್ಣವನ್ನು ಹಳೆಯ ಬೆಲ್ಲದೊಂದಿಗೆ ಪ್ರತಿದಿನವೂ ಊಟ ಮಾಡುವ ಮೊದಲು ಸೇವಿಸುವುದು ಪರಿಣಾಮಕಾರಿಯಾಗಿದೆ.
  • ಒಂದು ಟೀ ಚಮಚ ಹಸಿ ಶುಂಠಿ ರಸ, ಎರಡು ಚಮಚ ನಿಂಬೆಯ ರಸ, ಎರಡು ಚಮಚ ಪುದೀನಾರಸ, ಇದರ ನಾಲ್ಕರಷ್ಟು ಜೇನುತುಪ್ಪ ಬೆರೆಸಿ, ದಿನವೂ ಮೂರು ಬಾರಿ ಸೇವಿಸುವುದು ಫೈಲ್ಸ್ ಗುಣ ಮುಖವಾಗುತ್ತದೆ.
  • ಹುಣುಸೆ ಚಿಗುರು ಮತ್ತು ಕಾಳು ಮೆಣಸು ಪುಡಿಯೊಂದಿಗೆ ಮಾವಿನ ಕಾಯಿಯನ್ನು ಬೆರೆಸಿ ತಿನ್ನುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.
  • ಬಾಳೆಕಾಯಿಯ ತಿರುಳನ್ನು ಬೇಯಿಸಿ ಸೇವನೆ ಮಾಡುವುದರಿಂದ ಈ ರೋಗದಿಂದ ಪಾರಾಗಬಹುದು.
  • ಮೂಲವ್ಯಾಧಿಯಿಂದ ಬಲಳುತ್ತಿರುವವರಿಗೆ ಪರಂಗಿಹಣ್ಣಿನ ಸೇವನೆ ಉತ್ತಮ ಔಷಧಿ.
  • ಅರಿಶಿನ ಕೊಂಬನ್ನು ಚೆನ್ನಾಗಿ ಅರೆದು, ಮಜ್ಜಿಗೆಯಲ್ಲಿ ಬೆರೆಸಿ ಒಂದೆರಡು ವಾರಗಳ ಕಾಲ ನಿಯಮಿತವಾಗಿ ಸೇವಿಸುವುದು ಉತ್ತಮ.
  • ಈರುಳ್ಳಿ ಹೂವನ್ನು ತಿನ್ನುತ್ತಿದ್ದರೆ ಮೂಲವ್ಯಾಧಿಯಿಂದ ಪಾರಾಗಬಹುದು.
  • ಅಮೃತಬಳ್ಳಿಯ ರಸಕ್ಕೆ ತುಪ್ಪ, ಸಕ್ಕರೆಯನ್ನು ಬೆರೆಸಿ ಪ್ರತಿದಿನ ದಿನಕ್ಕೆರಡು ಸಲ ಸೇವಿಸಿದರೆ ಫೈಲ್ಸ್ ಸಮಸ್ಯೆಯು ಗುಣಮುಖ ಕಾಣುತ್ತದೆ.
  • ಹಿಪ್ಪಲಿಯ ಸುಟ್ಟು ಅದರ ಬೂದಿಯನ್ನು ಬೆಲ್ಲದೊಡನೆ ಸೇವಿಸಿದರೆ ಮೂಲವ್ಯಾಧಿಯ ನೋವು ಕಡಿಮೆಯಾಗುತ್ತದೆ.
  • ಈರುಳ್ಳಿಯನ್ನು ತುರಿದು ಮೊಸರಿನಲ್ಲಿ ಪ್ರತಿನಿತ್ಯ ಒಂದೆರಡು ಬಾರಿ ತಿನ್ನುವುದರಿಂದ ರಕ್ತ ಮೂಲವ್ಯಾಧಿ ಕ್ರಮೇಣ ಗುಣ ಮುಖ ಕಾಣುತ್ತದೆ.
  • ಹಸಿಮೂಲಂಗಿಯನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಮೂಲವ್ಯಾಧಿಯು ಶಮನವಾಗುತ್ತದೆ.
  • ಹಾಗಲಕಾಯಿಯ ಪಲ್ಯವನ್ನು ಮಾಡಿ ತಿನ್ನುವುದರಿಂದ ಮೂಲವ್ಯಾಧಿಯು ದೂರವಾಗುತ್ತದೆ.
  • ಕರಿಬೇವಿನ ಸೊಪ್ಪಿನ ಎಳೆಯ ಚಿಗುರನ್ನು ಜೇನುತುಪ್ಪದಲ್ಲಿ ಬೆರೆಸಿ ಸೇವನೆ ಮಾಡುವುದು ಉತ್ತಮ ಔಷಧವಾಗಿದೆ.

ಈ ಮನೆಮದ್ದನ್ನು ಉಪಯೋಗಿಸುವ ಮುನ್ನ ತಜ್ಞರ ಸಲಹೆಯನ್ನು ಪಡೆಯುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ