Spectacle Marks: ಕನ್ನಡಕ ಹಾಕುವ ಅಭ್ಯಾಸ ಇದೆಯೇ? ಮುಖದಲ್ಲಿನ ಆ ಗುರುತು ಮಾಯವಾಗಿಸುವುದು ಹೇಗೆ ತಿಳಿಯಿರಿ

| Updated By: ಆಯೇಷಾ ಬಾನು

Updated on: Nov 04, 2021 | 8:35 AM

ನಿರಂತರವಾಗಿ ಕನ್ನಡಕವನ್ನು ಧರಿಸುವ ಜನರ ಮೂಗಿನ ಮೇಲೆ ಗುರುತು ಆಗುತ್ತದೆ. ಇದರಿಂದಾಗಿ ಅಲ್ಲಿನ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇರುವವರು ಚಿಂತಿಸುವ ಅಗತ್ಯ ಇಲ್ಲ.  ಮನೆಯಲ್ಲಿಯೇ ಮೂಗಿನ ಮೇಲಿನ ಕಪ್ಪು ಪ್ಯಾಚ್ ಅನ್ನು ತೆಗೆದುಹಾಕಬಹುದು.

Spectacle Marks: ಕನ್ನಡಕ ಹಾಕುವ ಅಭ್ಯಾಸ ಇದೆಯೇ? ಮುಖದಲ್ಲಿನ ಆ ಗುರುತು ಮಾಯವಾಗಿಸುವುದು ಹೇಗೆ ತಿಳಿಯಿರಿ
ಸಾಂಕೇತಿಕ ಚಿತ್ರ
Follow us on

ಬಿಡುವಿಲ್ಲದ ಜೀವನಶೈಲಿ ಅಥವಾ ಸದಾ ಕಾಲ ಕಂಪ್ಯೂಟರ್ ಮುಂದೆ ಕುಳಿತಿರುವುದರ ಪರಿಣಾಮ ಕಣ್ಣುಗಳ ಮೇಲೆ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಕಣ್ಣುಗಳು ಬಹಳ ಬೇಗ ದುರ್ಬಲಗೊಳ್ಳುತ್ತಿವೆ. ಆದರೆ ಕೆಲವರ ಕಣ್ಣುಗಳು ಮೊದಲಿನಿಂದಲೂ ದುರ್ಬಲವಾಗುತ್ತವೆ. ಇದರಿಂದಾಗಿ ಅವರು ದೂರದ ಅಥವಾ ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಕಷ್ಟಪಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ದೃಷ್ಟಿ ಕಡಿಮೆಯಾದಾಗ, ಪವರ್ ಗ್ಲಾಸ್​ಗಳನ್ನು ಧರಿಸಬೇಕು. ಆದರೆ ಕನ್ನಡಕವನ್ನು ನಿರಂತರವಾಗಿ ಧರಿಸುವುದರಿಂದ ಮೂಗಿನ ಬಳಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ.

ನಿರಂತರವಾಗಿ ಕನ್ನಡಕವನ್ನು ಧರಿಸುವ ಜನರ ಮೂಗಿನ ಮೇಲೆ ಗುರುತು ಆಗುತ್ತದೆ. ಇದರಿಂದಾಗಿ ಅಲ್ಲಿನ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಇರುವವರು ಚಿಂತಿಸುವ ಅಗತ್ಯ ಇಲ್ಲ.  ಮನೆಯಲ್ಲಿಯೇ ಮೂಗಿನ ಮೇಲಿನ ಕಪ್ಪು ಪ್ಯಾಚ್ ಅನ್ನು ತೆಗೆದುಹಾಕಬಹುದು. ಆ ಮೂಲಕ ಯಾವುದೇ ಲೋಷನ್ ಅಥವಾ ಕ್ರೀಮ್  ಬಳಸುವುದನ್ನು ತಪ್ಪಿಸಬಹುದು.

ಅಲೋವೆರಾ ಜೆಲ್ ಬಳಸಿ
ಗುರುತುಗಳಿರುವ ಸ್ಥಳದಲ್ಲಿ, ಅಲೋವೆರಾ ಜೆಲ್ ಅನ್ನು ಹಾಕಿ ಮಸಾಜ್ ಮಾಡಿ. ಸುಮಾರು 10 ನಿಮಿಷಗಳ ಕಾಲ ಮಸಾಜ್ ಮಾಡಿದ ನಂತರ, ಸ್ವಲ್ಪ ಸಮಯದವರೆಗೆ ಇದನ್ನು ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ಮುಖದ ಮೇಲಿನ ಕಲೆಯನ್ನು ದೂರ ಮಾಡುತ್ತದೆ.

ಸೌತೆಕಾಯಿ ರಸ ಬಳಸಿ
ಸೌತೆಕಾಯಿಯ ಬಳಕೆಯು ಅನೇಕ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಸೌತೆಕಾಯಿ ಮುಖ ಇತ್ಯಾದಿಗಳಿಗೆ ತುಂಬಾ ಪ್ರಯೋಜನಕಾರಿ. ಇದು ಮುಖದ ಕೊಳೆಯನ್ನೂ ತೆಗೆದು ಸ್ವಚ್ಛಗೊಳಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸೌತೆಕಾಯಿಯ ರಸವನ್ನು ಕನ್ನಡಕದಿಂದ ಉಂಟಾದ ಕಲೆ ಅಥವಾ ಗಾಯದ ಮೇಲೆ ಹಚ್ಚಿ. ಅಷ್ಟೇ ಅಲ್ಲ, ನೀವು 1 ಚಮಚ ಸೌತೆಕಾಯಿ ರಸದಲ್ಲಿ ತಲಾ ಒಂದು ಚಮಚ ಆಲೂಗಡ್ಡೆ ಮತ್ತು ಟೊಮೆಟೊ ರಸವನ್ನು ಬೆರೆಸಿ, ನಂತರ ಈ ಸಂಪೂರ್ಣ ಮಿಶ್ರಣವನ್ನು ಗಾಯದ ಮೇಲೆ ಹಚ್ಚಿ. ಸ್ವಲ್ಪ ಸಮಯ ಒಣಗಲು ಬಿಡಿ, ನಂತರ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ಎಲ್ಲಾ ಕಲೆಗಳು, ಗುರುತುಗಳು, ಟ್ಯಾನಿಂಗ್ ಸಮಸ್ಯೆ, ಸುಕ್ಕು ಕಡಿಮೆಯಾಗುತ್ತದೆ.

ಬಾದಾಮಿ ಪೇಸ್ಟ್‌
ಬಾದಾಮಿಯನ್ನು ಚರ್ಮದ ಕಾಂತಿ ಹೆಚ್ಚಿಸಲು ಬಳಸಲಾಗುತ್ತದೆ. ಏಕೆಂದರೆ ಇವುಗಳು ವಿಟಮಿನ್ ಇ ಅನ್ನು ಹೊಂದಿರುತ್ತವೆ. ವಿಟಮಿನ್ ಇ ಚರ್ಮವನ್ನು ಪೋಷಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು 2-3 ಬಾದಾಮಿಯನ್ನು ನೀರಿನಲ್ಲಿ ನೆನೆಸಿ, ನಂತರ ಮರುದಿನ ರುಬ್ಬಿ ಪೇಸ್ಟ್ ಮಾಡಿ ಮತ್ತು ರೋಸ್ ವಾಟರ್, ನಿಂಬೆ ರಸ, ಜೇನುತುಪ್ಪದ ಜತೆ ಬೆರೆಸಿ, ನಂತರ ಮೂಗು ಮತ್ತು ಸಂಪೂರ್ಣ ಮುಖಕ್ಕೆ ಹಚ್ಚಿ. ಸುಮಾರು ಅರ್ಧ ಗಂಟೆ ಬಿಟ್ಟು ನಂತರ ತೊಳೆಯಿರಿ.

ಇದನ್ನೂ ಓದಿ:
Deepavali 2021: ದೀಪಾವಳಿ ಹಬ್ಬದ ಸಮಯದಲ್ಲಿ ಸಿಡಿಸುವ ಪಟಾಕಿ ಹೊಗೆಯಿಂದ ಶ್ವಾಸಕೋಶ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿದೆ 10 ಮಾರ್ಗಗಳು

Coriander leaves: ಅಡುಗೆಯಲ್ಲಿ ರುಚಿ ಹೆಚ್ಚಿಸಲು ಮಾತ್ರವಲ್ಲ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೂ ಉತ್ತಮ