ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಕೃತಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ನೀಡಿದೆ. ಆದರೆ ಹೆಚ್ಚಿನವರಿಗೆ ಇಂತಹ ಸಸ್ಯಗಳ ಬಗ್ಗೆ ಮಾಹಿತಿಯಿಲ್ಲ. ಹಳ್ಳಿಯ ಕಡೆಗಳಲ್ಲಿ ಎಲ್ಲೆಂದರಲ್ಲಿ ಹಬ್ಬಿಕೊಂಡಿರುವ ಕಳೆ ಜಾತಿಗೆ ಸೇರಿದ ಮುಟ್ಟಿದ ಮುನಿ ಸಸ್ಯದ ಪರಿಚಯವು ಎಲ್ಲರಿಗೂ ಇದ್ದೆ ಇರುತ್ತದೆ. ಈ ಗಿಡವು ಚಿಕ್ಕದಾಗಿದ್ದು ಇದು ಸಣ್ಣ ಸಣ್ಣ ಮುಳ್ಳುಗಳನ್ನು ಹೊಂದಿದ್ದು ತಿಳಿ ನೇರಳೆ ಬಣ್ಣದ ಸಣ್ಣ ಹೂವುಗಳನ್ನೂ ಹೊಂದಿರುತ್ತದೆ. ಆದರೆ ಈ ಹೂವುಗಳು ತುಂಬಾ ಆಕರ್ಷಕವಾಗಿರುತ್ತವೆ. ಈ ಗಿಡವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಕೆ ಮಾಡಲಾಗುವ ಕಾರಣ ಇದರ ಆರೋಗ್ಯ ಪ್ರಯೋಜನಗಳು ಅಧಿಕವಾಗಿದೆ.
ಮುಟ್ಟಿದರೆ ಮುನಿ ಸಸ್ಯದ ಮನೆಮದ್ದುಗಳು
- ಊತ ಉಂಟಾದಾಗ ಮುಟ್ಟಿದರೆ ಮುನಿ ಗಿಡವನ್ನು ಅರೆದು ಊತವಾದ ಜಾಗಕ್ಕೆ ಹಚ್ಚಿ, ಬಟ್ಟೆಯಿಂದ ಕಟ್ಟಿದರೆ ಬಾವು ಬೇಗನೆ ಕಡಿಮೆಯಾಗುತ್ತದೆ.
- ಕಿಡ್ನಿನಲ್ಲಿ ಕಲ್ಲು ಹೊಂದಿರುವವರು ಈ ಗಿಡದ ಬೇರಿನ ಕಷಾಯ ಮಾಡಿ ಕುಡಿಯುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.
- ಮಹಿಳೆಯರಲ್ಲಿ ಮುಟ್ಟಿನ ವೇಳೆಯಲ್ಲಿ ಅತ್ಯಧಿಕ ರಕ್ತಸ್ರಾವವಾಗುತ್ತಿದ್ದರೆ ಈ ಗಿಡವನ್ನು ಚೆನ್ನಾಗಿ ತೊಳೆದು ನೀರು ಸೇರಿಸಿ ಚೆನ್ನಾಗಿ ಕುದಿಸಬೇಕು. ಅದಕ್ಕೆ ಒಂದು ಚಿಟಿಕೆ ಸ್ಪಟಿಕ ಸೇರಿಸಿ, ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸುತ್ತ ಬಂದರೆ ಈ ಸಮಸ್ಯೆಯು ಗುಣಮುಖವಾಗುತ್ತದೆ.
- ಮಲಬದ್ಧತೆ ಸಮಸ್ಯೆಯಿರುವವರು ಮುಟ್ಟಿದರೆ ಮುನಿ ಗಿಡದ ಎಲೆ ಮತ್ತು ಬೇರನ್ನು ಚೆನ್ನಾಗಿ ಜಜ್ಜಿ ರಸ ತೆಗೆದು, ಈ ರಸವನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯುವುದು ಉತ್ತಮ.
- ಬಾಣಂತಿಯರು ಹೊಟ್ಟೆ ಕರಗಿಸಲು ಈ ಮುಟ್ಟಿದರೆ ಮುನಿ ಗಿಡದ ಎಲೆಯ ರಸವನ್ನು ತೆಗೆದು ಹೊಟ್ಟೆಯ ಭಾಗಕ್ಕೆ ಹಚ್ಚಿ ಒಂದೆರೆಡು ನಿಮಿಷ ಮಸಾಜ್ ಮಾಡುವುದು ಒಳ್ಳೆಯದು.
- ನಾಚಿಕೆ ಮುಳ್ಳು ಸಸ್ಯದ ರಸವನ್ನು ತೆಗೆದು ಮೊಡವೆಯಿರುವ ಜಾಗಕ್ಕೆ ಲೇಪಿಸುವುದರಿಂದ ಮೊಡವೆಗಳು ಮಾಯಾವಾಗಿ ಕಲೆಗಳು ಉಳಿಯುವುದಿಲ್ಲ.
- ಗಾಯವಾಗಿ ರಕ್ತ ಸುರಿಯುತ್ತಿದ್ದರೆ, ಈ ಗಿಡದ ಎಲೆಯನ್ನು ಜಜ್ಜಿ, ಗಾಯಕ್ಕೆ ಹಚ್ಚಿದರೆ ರಕ್ತ ಸುರಿಯುವುದು ನಿಂತು, ಗಾಯವು ಬೇಗನೆ ವಾಸಿಯಾಗುತ್ತದೆ.
- ಪುರುಷರಲ್ಲಿನ ಪ್ರೊಸ್ಟೇಟ್ ಗ್ರಂಥಿಯ ಸಮಸ್ಯೆಯಿದ್ದರೆ ಈ ಮುಟ್ಟಿದರೆ ಮುನಿಯ ಸೊಪ್ಪನ್ನು ಅರೆದು ಉಂಡೆ ಮಾಡಿ ನಲವತ್ತೈದು ದಿನಗಳ ಕಾಲ ಪ್ರತಿದಿನ ತೆಗೆದುಕೊಳ್ಳುವುದು ಉತ್ತಮ ಔಷಧಿ ಎನ್ನಬಹುದು.
- ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತಿದ್ದರೆ ಈ ಮುಟ್ಟಿದರೆ ಮುನಿ ಸಸ್ಯದ ಕಷಾಯ ಮಾಡಿ ಸೇವಿಸುವುದು ಪರಿಣಾಮಕಾರಿ ಮನೆ ಮದ್ದು.
- ಮೂಲವ್ಯಾಧಿಯಿರುವವರು ಮುಟ್ಟಿದರೆ ಮುನಿ ಗಿಡವನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು, ಒಂದು ಲೋಟ ನೀರಿಗೆ ಈ ಪುಡಿಯನ್ನು ಸೇರಿಸಿ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.
ಈ ಮನೆ ಮದ್ದನ್ನೊಮ್ಮೆ ತಯಾರಿಸುವ ಮುನ್ನ ತಜ್ಞರ ಸಲಹೆಗಳನ್ನು ಪಡೆಯುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ