ದೇಹದ ಎಲ್ಲಾ ಭಾಗಳು ಬಿಳಿ ಯಾಗಿದ್ದು ಮೊಣಕಾಲು ಹಾಗೂ ಮೊಣಕೈ ಭಾಗ ಕಪ್ಪಾಗಿದ್ದರೆ ಎಲ್ಲರ ಮುಂದೆ ಹೋಗುವುದಕ್ಕೂ ಮುಜುಗರವಾಗುತ್ತದೆ. ಇಷ್ಟದ ಬಟ್ಟೆಯನ್ನು ತೊಡುವ ಎಂದರೆ ಕೈ ಹಾಗೂ ಕಾಲಿನ ಕಪ್ಪಾದ ಭಾಗವು ಎದ್ದು ಕಾಣುತ್ತದೆ. ಈ ಭಾಗದ ಚರ್ಮವು ಕಪ್ಪಾಗಿ ಒರಟಾಗಿರುವುದರಿಂದ ಕೈ ಹಾಗೂ ಕಾಲು ಅಂದಗೆಡುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಎಷ್ಟೇ ದುಬಾರಿ ಉತ್ಪನ್ನಗಳನ್ನು ಬಳಸಿದರೂ ಈ ಡೆಡ್ ಸ್ಕಿನ್ ಗಳು ಮಾತ್ರ ಹೋಗುವುದೇ ಇಲ್ಲ. ಹೀಗಾದಾಗ ಮನೆಯಲ್ಲಿರುವ ಈ ಕೆಲವು ಪದಾರ್ಥಗಳನ್ನು ಬಳಸಿ ನಿಮ್ಮ ಕೈ ಹಾಗೂ ಕಾಲಿನ ಚರ್ಮವನ್ನು ಬಿಳುಪಾಗಿಸಿಕೊಳ್ಳಬಹುದು.
- ಟೂತ್ ಪೇಸ್ಟ್ ಮತ್ತು ಬೇಕಿಂಗ್ ಸೋಡಾವನ್ನು ಮಿಕ್ಸ್ ಮಾಡಿ ನಿಮ್ಮ ಮೊಣಕೈ ಮತ್ತು ಮೊಣಕಾಲಿಗೆ ಹಚ್ಚಿ ಎರಡು ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿ, ಉಗುರು ಬೆಚ್ಚಿಗಿನ ನೀರಿನಿಂದ ತೊಳೆಯುತ್ತ ಬಂದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
- ನಿಂಬೆ ರಸವನ್ನು ತೆಗೆದುಕೊಂಡು ಕಪ್ಪಾದ ಪ್ರದೇಶಕ್ಕೆ ಹೆಚ್ಚಿ ಸ್ವಲ್ಪ ಸಮಯದ ನಂತರ ತೊಳೆಯುವುದರಿಂದ ಚರ್ಮವು ಬಿಳುಪಾಗಿಸುತ್ತದೆ.
- ಮುಳ್ಳು ಸೌತೆಯ ಹೋಳಿಗೆ ನಿಂಬೆರಸ, ಅರಿಶಿಣ ಬೆರೆಸಿ ಚೆನ್ನಾಗಿ ರುಬ್ಬಿಕೊಂಡು ಇದನ್ನು ಕಪ್ಪಾದ ಭಾಗಗಳಿಗೆ ಹಚ್ಚುವುದು ಪರಿಣಾಮಕಾರಿಯಾಗಿದೆ.
- ಕಡಲೆ ಹಿಟ್ಟಿನಲ್ಲಿ ಅರಿಶಿನ ಬೆರೆಸಿ ಹಚ್ಚಿದರೆ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು.
- ಆಲೂಗಡ್ಡೆಯನ್ನು ರುಬ್ಬಿ ಅದಕ್ಕೆ ಜೇನು ಮತ್ತು ಹಸಿ ಹಾಲು ಹಾಕಿ ಮೊಣ ಕೈ ಹಾಗೂ ಮೊಣಕಾಲಿನ ಕಪ್ಪಾದ ಭಾಗಕ್ಕೆ ಹಚ್ಚುತ್ತಿದ್ದರೆ ಆ ಭಾಗದ ಚರ್ಮವು ಬಿಳಿಯಾಗುತ್ತದೆ.
- ಹಾಲಿನ ಕೆನೆಯನ್ನು ನಿಯಮಿತವಾಗಿ ಕಪ್ಪಾದ ಕೈ ಹಾಗೂ ಕಾಲಿನ ಭಾಗಕ್ಕೆ ಹಚ್ಚುವುದು ಪರಿಣಾಮಕಾರಿಯಾಗಿದೆ.
- ಒಂದು ಚಮಚ ಅಡುಗೆ ಸೋಡಾಕ್ಕೆ ಹಾಲನ್ನು ಬೆರೆಸಿ ಮಿಶ್ರಣಮಾಡಿಕೊಂಡು, ಅದನ್ನು ಮೊಣಕೈ ಹಾಗೂ ಮೊಣಕಾಲಿಗೆ ಹಚ್ಚಿ ಒಣಗಿದ ಬಳಿಕ ಸ್ಕ್ರಬ್ ಮಾಡಿದರೆ ಈ ಕಪ್ಪಾದ ಚರ್ಮವನ್ನು ತೊಡೆದುಹಾಕಬಹುದು.
- ರಾತ್ರಿ ಮಲಗುವ ಮೊದಲು ಮೊಣಕಾಲು ಹಾಗೂ ಮೊಣಕೈಗೆ ಸಾಸಿವೆ ಎಣ್ಣೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿ ಬೆಳಗ್ಗೆ ತೊಳೆಯುವುದು ಪರಿಣಾಮಕಾರಿಯಾಗಿದೆ.
- ಈರುಳ್ಳಿ ಮತ್ತು ನಿಂಬೆರಸವನ್ನು ಈ ಕಪ್ಪಾದ ಚರ್ಮಕ್ಕೆ ಹಚ್ಚುವುದು ಉತ್ತಮ ಮನೆ ಮದ್ದಾಗಿದೆ.
- ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿಗೆ ರೋಸ್ ವಾಟರ್ ಬೆರೆಸಿ ಹಚ್ಚಿ ಒಣಗಿದ ಬಳಿಕ ತೊಳೆಯುವುದರಿಂದ ಕಪ್ಪಾದ ಚರ್ಮವು ಬಿಳಿಯಾಗುತ್ತದೆ.
- ಒಂದು ಚಮಚ ಕಡಲೆ ಬೇಳೆ ಹಿಟ್ಟು ಎರಡು ಚಮಚ ಹಾಲನ್ನು ಮಿಶ್ರಣ ಮಾಡಿ, ಇದನ್ನು ಮೊಣಕಾಲುಗಳು ಮತ್ತು ಮೊಣಕೈಗಳ ಮೇಲೆ ಹಚ್ಚಿ ಸ್ವಲ್ಪ ಸಮಯದ ಬಳಿಕ ತಣ್ಣೀರಿನಿಂದ ತೊಳೆಯುವುದರಿಂದ ಈ ಕಪ್ಪಾದ ಚರ್ಮದಿಂದ ಮುಕ್ತಿ ಪಡೆಯಬಹುದು.
- ಲೋಳೆಸರವನ್ನು ಕಪ್ಪಾದ ಭಾಗಗಳಿಗೆ ಅನ್ವಯಿಸಿ ಸ್ವಲ್ಪ ಸಮಯದ ನಂತರದಲ್ಲಿ ತೊಳೆಯುವುದರಿಂದ ಈ ಸಮಸ್ಯೆಯನ್ನು ದೂರವಾಗಿಸಿಕೊಳ್ಳಬಹುದು.
- ಒಂದು ಚಮಚ ವಿನೆಗರ್, ಒಂದು ಚಮಚ ಮೊಸರು ಹಾಗೂ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಮೊಣಕೈ ಹಾಗೂ ಮೊಣಕಾಲಿನ ಕಪ್ಪಾದ ಭಾಗಕ್ಕೆ ಹಚ್ಚಿ ಉಗುರು ಬೆಚ್ಚಗಿನ ನೀರಿನಿಂದ ತೊಳೆಯುತ್ತ ಬಂದರೆ ಈ ಡೆಡ್ ಸ್ಕಿನ್ ಗಳು ದೂರವಾಗುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ