ಮನೆಯಲ್ಲಿ ಕಸ ಎಲ್ಲಿ ಎಸೆಯಬೇಕು, ಕಸದ ಬುಟ್ಟಿ ಎಲ್ಲಿಡಬೇಕು – ವಾಸ್ತು ನಿಯಮಗಳು ಹೀಗಿವೆ

| Updated By: ಸಾಧು ಶ್ರೀನಾಥ್​

Updated on: Nov 10, 2023 | 10:17 AM

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಕಸವನ್ನು ಇಡಲು ವಿಶೇಷ ನಿರ್ದೇಶನವಿದೆ. ಇದನ್ನು ನೆನಪಿಡಿ. ಕಣ್ಣಿಗೆ ಕಾಣುವಂತೆ ನೇರ ದೃಷ್ಟಿಯಲ್ಲಿ ಕಸವನ್ನು ಎಂದಿಗೂ ಇಡಬೇಡಿ. ವಿಶೇಷವಾಗಿ ಪೂಜಾ ಸ್ಥಳವು ಕಸ ವಿಲೇವಾರಿ ಪ್ರದೇಶದ ಹತ್ತಿರ ಇರಬಾರದು ಎಂಬುದನ್ನು ನೆನಪಿಡಿ.

ಮನೆಯಲ್ಲಿ ಕಸ ಎಲ್ಲಿ ಎಸೆಯಬೇಕು, ಕಸದ ಬುಟ್ಟಿ ಎಲ್ಲಿಡಬೇಕು - ವಾಸ್ತು ನಿಯಮಗಳು ಹೀಗಿವೆ
ಮನೆಯಲ್ಲಿ ಕಸ ಎಲ್ಲಿ ಎಸೆಯಬೇಕು, ಕಸದ ಬುಟ್ಟಿ ಎಲ್ಲಿಡಬೇಕು
Follow us on

ವಾಸ್ತು ಪ್ರಕಾರ ಮನೆ ನಿರ್ಮಾಣ ಸಾಮಾನ್ಯ ಸಂಗತಿ. ಅದರ ಜೊತೆಗೆ ಮನೆಯಲ್ಲಿ ಕಸ ಅಥವಾ ಹಳೆಯ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ತಪ್ಪು ದಿಕ್ಕಿನಲ್ಲಿ ಕಸವನ್ನು ಇಡುವುದರಿಂದ ಮನೆಯಲ್ಲಿ ಆರ್ಥಿಕ ತೊಂದರೆ ಉಂಟಾಗುತ್ತದೆ. ಪ್ರಗತಿಗೂ ಧಕ್ಕೆಯಾಗುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿರುವ ಹೆಚ್ಚಿನ ಕಸ ಅಥವಾ ತ್ಯಾಜ್ಯ ವಸ್ತುಗಲನ್ನು ಅನಿಷ್ಟ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಮನೆಯಲ್ಲಿ ಕಸವನ್ನು ಇಡದಂತೆ ಕೆಲವು ಮಾರ್ಗಸೂಚಿಗಳಿವೆ. ಕಸಕ್ಕೆ ಸಂಬಂಧಿಸಿದ ಕೆಲವು ಪರಿಣಾಮಕಾರಿ ವಾಸ್ತು ನಿಯಮಗಳನ್ನು ತಿಳಿಯೋಣ.ಈ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಕಷ್ಟಗಳು ದೂರವಾಗಿ ಸುಖ ಸಂತೋಷವನ್ನು ಪಡೆಯುತ್ತೇವೆ.

ವಾಸ್ತು ಶಾಸ್ತ್ರದ ಪ್ರಕಾರ ಕಸವನ್ನು ಇಡಲು ವಿಶೇಷ ನಿರ್ದೇಶನವಿದೆ. ಇದನ್ನು ನೆನಪಿಡಿ. ಕಣ್ಣಿಗೆ ಕಾಣುವಂತೆ ನೇರ ದೃಷ್ಟಿಯಲ್ಲಿ ಕಸವನ್ನು ಎಂದಿಗೂ ಇಡಬೇಡಿ. ವಿಶೇಷವಾಗಿ ಪೂಜಾ ಸ್ಥಳವು ಕಸ ವಿಲೇವಾರಿ ಪ್ರದೇಶದ ಹತ್ತಿರ ಇರಬಾರದು ಎಂಬುದನ್ನು ನೆನಪಿಡಿ.

ವಾಸ್ತು ಪ್ರಕಾರ ತಪ್ಪಾಗಿಯೂ ಕಸವನ್ನು ವಾಯವ್ಯ, ಪಶ್ಚಿಮ, ಉತ್ತರ, ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಋಣಾತ್ಮಕತೆ ಬರುವುದಲ್ಲದೆ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ.

ಅನೇಕ ಜನರು ತಮ್ಮ ಮನೆಯ ಮೇಲ್ಛಾವಣಿಯನ್ನು ಖಾಲಿ ಜಾಗವೆಂದು ಪರಿಗಣಿಸುತ್ತಾರೆ ಮತ್ತು ಮನೆಯ ಕಸವನ್ನು, ಅಥವಾ ವೇಸ್ಟ್​ ಸಾಮಾನುಗಳನ್ನು ಅಲ್ಲಿ ಇಡುತ್ತಾರೆ. ವಾಸ್ತು ಪ್ರಕಾರ ಮನೆಯ ಮೇಲ್ಛಾವಣಿ, ಬಾಲ್ಕನಿ ಹಾಗೂ ಕೋಣೆಯ ಮೇಲೆ ಕಸ ಎಸೆಯಬಾರದು. ಹೀಗೆ ಮಾಡುವುದರಿಂದ ಜೀವನದಲ್ಲಿ ಒತ್ತಡಗಳು ಹೆಚ್ಚುತ್ತವೆ.

ವಾಸ್ತು ಪ್ರಕಾರ ಮನೆಯ ಬಾಲ್ಕನಿಯಲ್ಲಿ ಕಸ ಎಸೆಯಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳುವ ಭೀತಿ ಇದೆ. ಹಾಗೆ ಮಾಡಿದರೆ ಹಣಕಾಸಿನ ಸಮಸ್ಯೆಗಳಿಂದ ಯಾವಾಗಲೂ ತೊಂದರೆ ಅನುಭವಿಸುತ್ತೀರಿ.

ವಾಸ್ತು ಪ್ರಕಾರ ಹಳೆ ಪೊರಕೆಯನ್ನು ಮನೆಯಲ್ಲಿ ಇಡಬಾರದು. ಅಲ್ಲದೇ ಹಳೆಯ ದೇವರ ಚಿತ್ರಗಳನ್ನು ಕಸದ ಕೋಣೆಯಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಅಶುಭ ಫಲಗಳು ಉಂಟಾಗುತ್ತವೆ. ಹಾಗೆಯೇ ನೀರಿನಲ್ಲಿ ಕಸವನ್ನು ಇಡಬೇಡಿ ಎಂದು ನೆನಪಿಡಿ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

(ಗಮನಿಸಿ: ಜನರ ಸಾಮಾನ್ಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಗ್ರಂಥಗಳ ಆಧಾರದ ಮೇಲೆ ಮೇಲೆ ತಿಳಿಸಿದ ಅಂಶಗಳನ್ನು ನೀಡಲಾಗಿದೆ)