Beauty Tips: ಗ್ಲೋವಿಂಗ್ ಫೇಸ್​ಗೆ ಈ ಫೇಸ್ ಪ್ಯಾಕ್​ಗಳನ್ನ ಬಳಸಿ

| Updated By: sandhya thejappa

Updated on: Aug 30, 2021 | 5:04 PM

ಮುಖದ ಕಾಂತಿ ಹೆಚ್ಚಿಸಲು ತಮಗೆ ಸರಿಹೊಂದುವ ಕ್ರೀಂಗಳನ್ನ ಬಳಸುತ್ತಾರೆ. ಜೊತೆಗೆ ಪಾರ್ಲರ್​ಗೆ ಅಂತೆಲ್ಲ ಹೋಗುತ್ತಾರೆ. ಆದರೆ ಎಲ್ಲರ ಚರ್ಮಕ್ಕೂ ಮಾರುಕಟ್ಟೆಯಲ್ಲಿ ಸಿಗುವ ಕ್ರೀಂಗಳು ಸರಿಹೊಂದುವುದಿಲ್ಲ.

Beauty Tips: ಗ್ಲೋವಿಂಗ್ ಫೇಸ್​ಗೆ ಈ ಫೇಸ್ ಪ್ಯಾಕ್​ಗಳನ್ನ ಬಳಸಿ
ಪೇಸ್ ಪ್ಯಾಕ್
Follow us on

ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಲ್ಲರಿಗೂ ಆಸೆ ಇರುತ್ತೆ. ಆದರೆ ಬ್ಯುಸಿ ಲೈಫ್​ನಲ್ಲಿ ಇದು ಸಾಧ್ಯವಾಗುತ್ತಿರುವುದಿಲ್ಲ. ಹಾಗಂತ ಎಲ್ಲರೂ ತಮ್ಮ ತಮ್ಮ ಮುಖದ ಬಗ್ಗೆ ನಿರ್ಲಕ್ಷ್ಯ ವಹಿಸಲ್ಲ. ಮುಖದ ಕಾಂತಿ ಹೆಚ್ಚಿಸಲು ತಮಗೆ ಸರಿಹೊಂದುವ ಕ್ರೀಂಗಳನ್ನ ಬಳಸುತ್ತಾರೆ. ಜೊತೆಗೆ ಪಾರ್ಲರ್​ಗೆ ಅಂತೆಲ್ಲ ಹೋಗುತ್ತಾರೆ. ಆದರೆ ಎಲ್ಲರ ಚರ್ಮಕ್ಕೂ ಮಾರುಕಟ್ಟೆಯಲ್ಲಿ ಸಿಗುವ ಕ್ರೀಂಗಳು ಸರಿಹೊಂದುವುದಿಲ್ಲ. ಇದು ಚರ್ಮದ ತ್ವಚೆಯನ್ನು ಹಾಳು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಮನೆಯಲ್ಲೇ ಸಿಗುವ ನೈಸರ್ಗಿಕ ವಸ್ತುಗಳಿಂದ ಮುಖದ ಕಾಂತಿಯನ್ನು ಹೆಚ್ಚಿಸಕೊಳ್ಳಬಹುದು.

* ಮೊಸರು ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್
ಈ ಫೇಸ್ ಪ್ಯಾಕ್ ಮುಖದಲ್ಲಿರುವ ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಫೇಸ್ ಪ್ಯಾಕ್​ಗೆ ಎರಡು ಚಮಚ ಮೊಸರು, ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ಮುಲ್ತಾನಿ ಮಿಟ್ಟಿ ಬೇಕಾಗುತ್ತದೆ. ಈ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿ. 15ರಿಂದ 20 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಹಚ್ಚಿಕೊಳ್ಳಬಹುದು. ಮೊಸರು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ಕಡಲೆ ಹಿಟ್ಟಿನಲ್ಲಿರುವ ಸತುವು ಚರ್ಮದ ಸೋಂಕಿನ ವಿರುದ್ಧ ಹೋರಾಡುತ್ತದೆ. ಇನ್ನು ಮುಲ್ತಾನಿ ಮಿಟ್ಟಿ ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ.

* ಲೋಳೆ ಸರ ಫೇಸ್ ಪ್ಯಾಕ್
ಲೋಳೆ ಸರ ಫೇಸ್ ಪ್ಯಾಕ್​ನ ಸಿದ್ಧಪಡಿಸಲು ಎರಡು ಚಮಚ ಲೋಳೆ ಸರ ಮತ್ತು 5 ರಿಂದ 6 ಹನಿ ನಿಂಬೆರಸ ಬೇಕಾಗುತ್ತದೆ. ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಮುಖಕ್ಕೆ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿಕೊಳ್ಳಿ. ಹಚ್ಚಿದ ಫೇಸ್ ಪ್ಯಾಕ್ ಒಣಗಿದ ನಂತರ ಮುಖ ತೊಳೆಯಿರಿ. ಇದನ್ನು ವಾರಕ್ಕೆ ಮೂರು ಬಾರಿ ಹಚ್ಚಿಕೊಳ್ಳಬಹುದು. ಲೋಳೆ ಸರ ಬ್ಯಾಕ್ಟೀರಿಯಾ ಜೊತೆಗೆ ಹೋರಾಡುವುದು ಮತ್ತು ಚರ್ಮವನ್ನು ಆರೋಗ್ಯವಾಗಿ ಇಡುತ್ತದೆ. ನಿಂಬೆರಸದಲ್ಲಿ ವಿಟಮಿನ್ ಸಿ ಇದ್ದು, ಇದು ಮುಖದಲ್ಲಿ ಮೂಡಿದ ಮೊಡವೆಗಳನ್ನು ಶಮನಗೊಳಿಸುತ್ತದೆ.

* ಕಾಫಿ ಮತ್ತು ಜೇನುತುಪ್ಪ ಫೇಸ್ ಪ್ಯಾಕ್
1 ಚಮಚ ಕಾಫಿ ಪುಡಿ ಮತ್ತು 1 ಚಮಚ ಜೇನುತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮುಖಕ್ಕೆ ಹಚ್ಚಿ. 10 ನಿಮಿಷಗಳ ಬಳಿಕ ಕೈಗಳನ್ನು ಒದ್ದೆ ಮಾಡಿ ವೃತ್ತಾಕಾರದ ಚಲನೆಯಲ್ಲಿ ಮುಖವನ್ನು ಮಸಾಜ್ ಮಾಡಬೇಕು. ಮಸಾಜ್ ಮಾಡಿದ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹಾಗೇ ಇದು ನೈಸರ್ಗಿಕ ಮಾಯಿಶ್ಚರೈಸರ್ ಕೂಡ ಆಗಿದೆ.

ಇದನ್ನೂ ಓದಿ

Health Tips: ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಲು ಹೀಗಿರಲಿ ನಿಮ್ಮ ಆಹಾರ ಕ್ರಮ

Beauty Tips: ಮುಖದ ಕಾಂತಿಯನ್ನು ಹೆಚ್ಚಿಸಲು ಒಣದ್ರಾಕ್ಷಿಯನ್ನು ಹೀಗೆ ಬಳಸಿ

(Homemade face pack, Beauty Tips, Face Pack, Natural Beauty, Natural Beauty Tips, Life Style)

Published On - 4:57 pm, Mon, 30 August 21