Beauty Tips: ಮುಖದ ಕಾಂತಿಯನ್ನು ಹೆಚ್ಚಿಸಲು ಒಣದ್ರಾಕ್ಷಿಯನ್ನು ಹೀಗೆ ಬಳಸಿ

ದ್ರಾಕ್ಷಿಯನ್ನು ಒಣಗಿಸಿ ಬಳಸುವುದರಿಂದ ಇದು ಯಾವುದೇ ರಾಸಾಯನಿಕವನ್ನು ಹೊಂದಿರುವುದಿಲ್ಲ. ಹೀಗಾಗಿ ಇದು ಆರೋಗ್ಯಕ್ಕೆ ಯಾವುದೇ ತೊಂದರೆಯನ್ನು ನೀಡಲ್ಲ.

Beauty Tips: ಮುಖದ ಕಾಂತಿಯನ್ನು ಹೆಚ್ಚಿಸಲು ಒಣದ್ರಾಕ್ಷಿಯನ್ನು ಹೀಗೆ ಬಳಸಿ
ಒಣದ್ರಾಕ್ಷಿ
Follow us
TV9 Web
| Updated By: sandhya thejappa

Updated on: Aug 15, 2021 | 4:52 PM

ಒಣದ್ರಾಕ್ಷಿಯ (Raisin) ಪ್ರಯೋಜಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ತೂಕ ಇಳಿಸುವವರಿಗೆ ಈ ಒಣದ್ರಾಕ್ಷಿ ತುಂಬಾ ಸಹಾಯಕವಾಗಿದೆ. ಅಲ್ಲದೇ ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾದ ಒಣ ಹಣ್ಣುಗಳಲ್ಲಿ ಒಂದಾಗಿದ್ದು, ಮುಖದಲ್ಲಿ ಮೂಡುವ ಸುಕ್ಕು, ಮೊಡವೆಯಂತಹ ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ದ್ರಾಕ್ಷಿಯನ್ನು ಒಣಗಿಸಿ ಬಳಸುವುದರಿಂದ ಇದು ಯಾವುದೇ ರಾಸಾಯನಿಕವನ್ನು ಹೊಂದಿರುವುದಿಲ್ಲ. ಹೀಗಾಗಿ ಇದು ಆರೋಗ್ಯಕ್ಕೆ ಯಾವುದೇ ತೊಂದರೆಯನ್ನು ನೀಡಲ್ಲ. ಮುಖದ ಕಾಂತಿಯನ್ನು ಹೆಚ್ಚಿಸುವ ಒಣದ್ರಾಕ್ಷಿಯನ್ನು ಹೀಗೂ ಬಳಸಬಹುದು.

1. ಎಣ್ಣೆಯುಕ್ತ ಚರ್ಮಕ್ಕೆ ಒಣದ್ರಾಕ್ಷಿ ಫೇಸ್ ಪ್ಯಾಕ್

ಇದಕ್ಕೆ ಬೇಕಾಗುವ ವಸ್ತುಗಳು ಒಣದ್ರಾಕ್ಷಿ ಚಹಾ ಮರದ ಎಣ್ಣೆ ನಿಂಬೆ ರಸ ಲೋಳೆಸರ ಮುಲ್ತಾನಿ ಮಿಟ್ಟಿ

ಬಳಸುವುದು ಹೇಗೆ? ಮೇಲೆ ತಿಳಿಸಿದ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ದಪ್ಪ ಪೇಸ್ಟ್ ತಯಾರಿಸಿ. ಈ ಪೇಸ್ಟ್ ತುಂಬಾ ದಪ್ಪವೆನಿಸದರೆ ಅದಕ್ಕೆ ರೋಸ್ ವಾಟರ್ ಹಾಕಬಹುದು. ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಸುಮಾರು 25 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.

2. ಸಾಮಾನ್ಯ ಮತ್ತು ಚರ್ಮಕ್ಕೆ ಒಣದ್ರಾಕ್ಷಿ ಫೇಸ್ ಪ್ಯಾಕ್

ಇದಕ್ಕೆ ಬೇಕಾಗುವ ವಸ್ತುಗಳು ಒಣದ್ರಾಕ್ಷಿ ಮೊಸರು ಸೌತೆಕಾಯಿ ಹಾಲು ಕಡಲೆ ಹಿಟ್ಟು ಗುಲಾಬಿ ಎಲೆಗಳು

ಬಳಸುವುದು ಹೇಗೆ? ಮೊದಲಿಗೆ, ಈ ಎಲ್ಲಾ ವಸ್ತುಗಳನ್ನು ಮಿಶ್ರಣ ಮಾಡಿ. ನಂತರ ಒಂದು ಮಿಕ್ಸರ್ನಲ್ಲಿ ಹಾಕಿ ಪುಡಿಮಾಡಿ. ಸಿದ್ಧವಾದ ಪೇಸ್ಟ್ನ ಮುಖಕ್ಕೆ ಹಚ್ಚಿ. ಕನಿಷ್ಠ 20 ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ಮುಖವನ್ನು ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕೆ ಈ ಫೇಸ್ ಪ್ಯಾಕ್ನ ವಾರಕ್ಕೊಮ್ಮೆ ಬಳಸಿ.

ಒಣದ್ರಾಕ್ಷಿಯ ಪ್ರಯೋಜನಗಳು ಒಣದ್ರಾಕ್ಷಿಯಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು, ವಿಟಮಿನ್ಗಳು ಮತ್ತು ಖನಿಜಾಂಶಗಳು ಹೇರಳವಾಗಿದ್ದು, ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದಲ್ಲದೇ, ಚರ್ಮವನ್ನು ಪುನಶ್ಚೇತನಗೊಳಿಸುವ ಕೆಲಸ ಮಾಡುತ್ತದೆ. ಒಣದ್ರಾಕ್ಷಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಕಪ್ಪು ಕಲೆಗಳು ಕಡಿಮೆಯಾಗಲು ಸಹಾಯ ಮಾಡುತ್ತದೆ.

ಇದನ್ನೂ ಓದಿ

Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

Health Tips: ಈ 5 ಗಿಡಮೂಲಿಕೆಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

(Raisins should be used to enhance facial luster)