Horoscope 17 Dec: ದಿನಭವಿಷ್ಯ, ಬೆನ್ನಿನ‌ ನೋವಿನಿಂದ ಸಂಕಟಪಡುವಿರಿ, ನಿಮ್ಮ ಪ್ರತಿಭೆ ಪ್ರದರ್ಶನಕ್ಕೆ ಹಿಂಜರಿಯುವಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 17, 2023 | 12:02 AM

ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಲವರು ದಿನದಿಂದ ರಾಶಿಭವಿಷ್ಯವನ್ನು ಓದುತ್ತಾರೆ. ಒಂದಷ್ಟು ಮಂದಿ ಯಾವುದೇ ಕಾರ್ಯವನ್ನು ಪ್ರಾರಂಭಿಸಬೇಕಾದರೆ ಇಂದಿನ ದಿನ ಹೇಗಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗವನ್ನೂ ನೋಡುತ್ತಾರೆ. ಹಾಗಿದ್ದರೆ, ಇಂದಿನ ಶುಭಾಶುಭಕಾಲ ಹೇಗಿದೆ? 12 ರಾಶಿಗಳ ರಾಶಿಫಲ ಹೇಗಿದೆ ಎಂಬುದು ಇಲ್ಲಿದೆ.

Horoscope 17 Dec: ದಿನಭವಿಷ್ಯ, ಬೆನ್ನಿನ‌ ನೋವಿನಿಂದ ಸಂಕಟಪಡುವಿರಿ, ನಿಮ್ಮ ಪ್ರತಿಭೆ ಪ್ರದರ್ಶನಕ್ಕೆ ಹಿಂಜರಿಯುವಿರಿ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (2023 ಡಿಸೆಂಬರ್​​​​ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಪಂಚಮೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವ್ಯಾಘಾತ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 51 ನಿಮಿಷಕ್ಕೆ,
ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಸಂಜೆ 04:41 ರಿಂದ 06:06ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:29 ರಿಂದ 01:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:17 ರಿಂದ 04:41ರ ವರೆಗೆ.

ಮೇಷ ರಾಶಿ: ನಿಮ್ಮವರ ನಡೆಯು ನಿಮಗೆ ವಿಚಿತ್ರ ಎನಿಸಬಹುದು. ಹತ್ತಿರದಿಂದ ತಿಳಿಯದೇ ಯಾರ ಮೇಲೂ ಆರೋಪವನ್ನು ಮಾಡುವುದು ಬೇಡ. ಮನೆಯ ಬೇಕಾದ ವಸ್ತುಗಳನ್ನು ಖರೀದಿ ಮಾಡುವಿರಿ. ವಾಹನ ಖರೀದಿಗೆ ಮನೆಯಲ್ಲಿ ಮನಸ್ಸು ಮಾಡುವುದಿಲ್ಲ. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡುವುದು. ಗೊಂದಲದಲ್ಲಿ ನೀವು ಇರಬೇಕಾದೀತು. ನಿಮ್ಮೆದುದು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗುವುದು. ನಿಮ್ಮ‌ ಇಂದಿನ‌ ನೋವನ್ನು‌ ನೀವೇ ಇಟ್ಟುಕೊಳ್ಳುವಿರಿ. ನಿಮ್ಮವರನ್ನು ನೀವು ಬಿಟ್ಟಕೊಡಲು ಇಷ್ಟಪಡುವುದಿಲ್ಲ. ವಿದ್ಯಾಭ್ಯಾಸಕ್ಕೆ ಬೇಕಾದ ವಾತಾವರಣವನ್ನು ನೀವು ನಿರ್ಮಿಸಿಕೊಳ್ಳುವಿರಿ.‌ ಪೂರಕವಾದ ವಾತಾವರಣವು ಹೆಚ್ಚು ಖುಷಿಕೊಡುವುದು. ಇನ್ನೊಬ್ಬರನ್ನು ಹಾಸ್ಯ ಮಾಡುತ್ತ ಸಮಯವನ್ನು ಕಳೆಯುವಿರಿ.

ವೃಷಭ ರಾಶಿ: ಯಾವುದೇ ತಾಪತ್ರಯಗಳು ಇಲ್ಲದಿದ್ದರೂ ಅಸಮಾಧಾನ, ಕಿರಿಕಿರಿಗಳು ಕಾಣಿಸುವುದು. ನಿಮ್ಮವರನ್ನು ದೂರ ಮಾಡಿಕೊಂಡು ಸ್ವತಂತ್ರವಾಗಿ ಬದುಕುವಿರಿ. ನಿಮ್ಮವರನ್ನು ಕಂಡು ನೀವು ಅಸೂಯೆಪಡಬಹುದು. ದೂರ ಪ್ರಯಾಣದಿಂದ ಆರೋಗ್ಯವು ಹದಗೆಟ್ಟು ವಿಶ್ರಾಂತಿಯನ್ನು ಪಡಯಬೇಕಾದೀತು. ಕಾರ್ಯದ ಆರಂಭದಲ್ಲಿ ಒತ್ತಡವು ಹೆಚ್ಚು ಇರುವುದು. ನಿಮ್ಮ ಇಂದಿನ ಖರ್ಚಿಗೆ ಕಡಿವಾಣ ಹಾಕುವುದು ಅಸಾಧ್ಯವಾಗಬಹುದು. ದುರ್ಬಲರ ಮೇಲೆ ನೀವು ಸಿಟ್ಟಾಗುವಿರಿ. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ. ಯಾವುದೇ ಕಾರ್ಯಕ್ಕೂ ನೀವು ಮುನ್ನುಗ್ಗುವುದು ಇಷ್ಟವಾಗದು. ವ್ಯವಹಾರದಲ್ಲಿ ನೀವು ಸರಿಯಾಗಿ ಇರದೇ ಇರುವುದು ನಿಮಗೆ ಕಷ್ಟವಾಗಬಹುದು. ಎಂತಹ ಸಂದರ್ಭವನ್ನೂ ಎದುರಿಸುವ ಮನಃಸ್ಥಿತಿ ನಿಮ್ಮದಾಗುವುದು.

ಮಿಥುನ ರಾಶಿ: ನಿಮ್ಮನ್ನು ನೀವು ಪ್ರಯೋಗಕ್ಕೆ ಬಳಸಿಕೊಳ್ಳುವಿರಿ.‌ ಏನಾದರೊಂದು ಕಾರ್ಯವನ್ನು ನೀವು ಮಾಡುತ್ತಲೇ ಇರುವುದು ನಿಮಗೆ ಇಷ್ಟವಾಗುವುದು. ಕಛೇರಿಯಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ನಿಮ್ಮ ತಪ್ಪುಗಳು ನಿಮಗೆ ಗೊತ್ತಾಗದೇ ಇನ್ನೊಬ್ಬರು ತಿಳಿಸಬೇಕಾಗುವುದು. ಅನಿವಾರ್ಯವಾಗಿ ಸಣ್ಣ ಸಾಲವನ್ನು ಮಾಡುವ ಸ್ಥಿತಿಯು ಬರಬಹುದು. ಮಂಗಲ ಕಾರ್ಯಕ್ಕೆ ಬಹಳ ಸಿದ್ಧತೆಯನ್ನು ಮಾಡುವಿರಿ. ಪ್ರಯಾಣದ ಆಯಾಸವು ನಿಮ್ಮನ್ನು ವಿಶ್ರಾಂತಿಗೆ ಕಳುಹಿಸಬಹುದು. ಪ್ರಾಣಿಗಳ ಮೇಲೆ‌ ಪ್ರೀತಿಯು ಅತಿಯಾದೀತು. ನಿಮ್ಮದೊಂದೇ ಸಮಸ್ಯೆ ಎನ್ನುವಂತೆ ಬಹಳ ಚಿಂತೆಯಿಂದ ಇರುವಿರಿ. ಇಂದು ನಿಮಗೆ ಕುಟುಂಬದ ಜೊತೆ ಇರುವುದು ಖುಷಿ ಕೊಡದು. ಆರ್ಥಿಕತೆಯ ವಿಚಾರದಲ್ಲಿ ನೀವು ನಿಷ್ಠುರವಾದಿಗಳಾಗುವಿರಿ. ನಿಮ್ಮ ಬೇಸರವನ್ನು ಸಂಗಾತಿಯು ಕಳೆಯಬಹುದು.

ಕರ್ಕ ರಾಶಿ: ಉಸಿರು ಕಟ್ಟುವ ಒತ್ತಡವಿದ್ದರೂ ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಇರುವಿರಿ. ವಿದ್ಯಾರ್ಥಿಗಳ ಕನಸು ಸಾಕಾರವಾಗಿ ಸಂತೋಷಪಡುವರು. ಉದ್ಯೋಗದಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇದ್ದು, ಮನೆಯಿಂದ ದೂರವಿರಬೇಕಾದೀತು. ಇಷ್ಟಾರ್ಥವು ನಿನಗೆ ಸಿದ್ಧಿಯಾಗುವ ಬಗ್ಗೆ ನಿಮಗೆ ಅನುಮಾನವಿರಲಿದೆ. ಇನ್ನೊಬ್ಬರ ಬಗ್ಗೆ ಸದಾ ಅಸಮಾಧಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧನಾ ಮಾಡಬೇಕಾದೀತು. ಅತಿಯಾದ ಆತ್ಮವಿಶ್ವಾಸವು ನಿಮ್ಮ ಕಾರ್ಯವನ್ನು ಹಾಳುಮಾಡಬಹುದು. ವ್ಯವಸ್ಥೆ ವ್ಯವಹಾರದಿಂದ ಚುರುಕುತನದ ಅವಶ್ಯಕತೆ ಇರುವುದು. ನಿಮ್ಮ‌ ಮಾತು ನೇರವಾಗಿಯೂ ಸ್ಪಷ್ಟವಾಗಿಯೂ ಇರಲಿ.‌ ಮನೆಯನ್ನು ಮಾರಾಟ ಮಾಡಿ ದೂರ ಹೋಗುವ ಆಲೋಚನೆಗಳು ಬರಬಹುದು. ನೀವು ನಿಮ್ಮನ್ನೇ ಪ್ರಶಂಸಿಸಿಕೊಳ್ಳುವುದು ಸರಿ ಕಾಣಿಸದು. ವಿದೇಶೀಯರ ಸಂಪರ್ಕವು ಉಂಟಾಗಲಿದೆ.

ಸಿಂಹ ರಾಶಿ: ನಿಮ್ಮ ಮಾತುಗಳು ನೀವು ಗಳಿಸಿದ ವಿದ್ಯೆಯನ್ನು ತಿಳಿಸುವುದು. ಕೆಲವು ಘಟನೆಗಳು ನಿಮ್ಮನ್ನು ಕಾಡಬಹುದು. ಇಂದು ನಿಮಗೆ ದಾನದಲ್ಲಿ ಮನಸ್ಸಾಗುವುದು. ಉದ್ವೇಗದಲ್ಲಿ ಏನನ್ನಾದರೂ ಹೇಳುವಿರಿ. ಖುಷಿಗೆ ಅನೇಕ ಅವಕಾಶಗಳಿದ್ದರೂ ನೀವು ಅದೆಲ್ಲವನ್ನೂ ಬಿಟ್ಟು ನಕಾರಾತ್ಮಕವಾಗಿ ಯೋಚಿಸುವಿರಿ. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ಅಪನಂಬಿಕೆಯಿದ್ದರೂ ಅವರನ್ನು ಜೊತೆಗೆ ಇಟ್ಟುಕೊಳ್ಳಬೇಕಾದ ಸ್ಥಿತಿ ಬರುವುದು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು. ಆಭರಣದ ಮಾರಾಟವು ನಿಮಗೆ ಲಾಭವನ್ನು ಕೊಡಬಹುದು. ಚರಾಸ್ತಿಯು ನಿಮಗೆ ಗೊತ್ತಾಗದಂತೆ ನಿಮ್ಮ ಕೈತಪ್ಪಿ ಹೋಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯು ಕಷ್ಟವೆನಿಸುವಂತೆ ಆಗುವುದು.

ಕನ್ಯಾ ರಾಶಿ: ಕುಟುಂಬವು ನಿಮ್ಮ ಬೆಂಬಲಕ್ಕೆ ಇದ್ದರೂ ನಿಮಗೆ ಯಾವ ಧೈರ್ಯವೂ ಸಾಲದು.‌ ಸಹೋದರ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಬೆನ್ನಿನ‌ ನೋವಿನಿಂದ ಸಂಕಟಪಡುವಿರಿ. ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ಯಾವುದೋ ಆಲೋಚನೆಯಲ್ಲಿ ನೀವು ಮುಳುಗಿ ಕಾರ್ಯವನ್ನು ಅಸ್ತವ್ಯಸ್ತ ಮಾಡಿಕೊಳ್ಳುವಿರಿ. ಅನಪೇಕ್ಷಿಯ ಮಾತನ್ನು ಆಡುವುದು ಬೇಡ. ಸುಮ್ಮನಿರಲು ಕಷ್ಟವಾದರೆ ಏನಾದರೂ ಕೆಲಸವನ್ನು ಮಾಡಿ. ಸರ್ಕಾರದ ಕಾರ್ಯವು ಬಹಳ ದಿನಗಳಿಂದ ಹಾಗೆಯೇ ಉಳಿದಿದ್ದು ನಿಮಗೆ ಇದರಿಂದ ಬೇಸರವಾಗುವುದು. ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಹಿಂಜರಿಯುವಿರಿ. ಧಾರ್ಮಿಕ ಕಾರ್ಯವನ್ನು ಕರ್ತವ್ಯದಿಂದ ಮಾಡುವಿರಿ, ಶ್ರದ್ಧೆ‌ ಮತ್ತು ಭಕ್ತಿಯಿಂದಲ್ಲ.‌ ಸ್ತ್ರೀಯರು ನೂತನ ವಸ್ತುಗಳನ್ನು ಖರೀದಿಸಿ ಸಂತೋಷಪಡುವರು. ನಿಮ್ಮ ಅಕ್ಕಪಕ್ಕದವರ ಮೇಲೆ‌ಅಲ ಸದಭಿಪ್ರಾಯವು ಇರದು.

ತುಲಾ ರಾಶಿ: ಕೋಪವನ್ನು ಕಡಿಮೆ ಮಾಡಿಕೊಂಡದರೂ ಕೆಲವು ಸಂದರ್ಭವನ್ನು ಎದರಿಸಲು ಸಿಟ್ಟು ಮಾಡಿಕೊಳ್ಳಬೇಕಾದೀತು ಅಥವಾ ಸಿಟ್ಟುಬಂದಂತೆ ನಟಿಸುವಿರಿ. ಸಾಲ ಕೊಟ್ಟವರು ನಿಮ್ಮನ್ನು ಪೀಡಿಸಬಹುದು. ಕೆಲಸದ ಸುಲಭ ಮಾರ್ಗವು ನಿಮಗೆ ಸೂಚಿಸದೇ ಇರಬಹುದು. ಮಕ್ಕಳ ವಿವಾಹವನ್ನು ನಿಶ್ಚಯಿಸಿ ನಿಶ್ಚಿಂತರಾಗುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ಆಗದು. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ. ಬಂಧುಗಳು ನಿಮ್ಮ‌ ಬಗ್ಗೆ ಸಲ್ಲದ ಅಭಿಪ್ರಾಯವನ್ನು ಹೇಳಿಯಾರು. ಯಾರ ಮೇಲೂ ಪಕ್ಷಪಾತ ಮಡುವುದು ಬೇಡ. ಗೊಂದಲದಲ್ಲಿ ಯಾವ‌ ಕಾರ್ಯಕ್ಕೂ ಹೋಗುವುದು ಬೇಡ. ವ್ಯಾಪಾರದಲ್ಲಿ ಹಿನ್ನಡೆಯಾಗಲಿದ್ದು ಮಾನಸಿಕವಾಗಿ ಕುಗ್ಗುವಿರಿ. ಪುಣ್ಯಸ್ಥಳಗಳಿಗೆ ನೀವು ಹೋಗಬೇಕಾಗುವುದು. ತಪ್ಪನ್ನು ಒಪ್ಪಿಕೊಳ್ಳಲು ನಿಮಗೆ ಸಮಯವು ಬೇಕಾಗಬಹುದು. ದೂರ ಪ್ರಯಾಣವು ನಿಮ್ಮ ಆರೋಗ್ಯದ ಮೇಲೆ‌ ಪರಿಣಾಮ ಬೀರಬಹುದು.

ವೃಶ್ಚಿಕ ರಾಶಿ: ಕೆಲವರ ಜೊತೆ ನಿಮ್ಮ ಮಾತು ಹಲವು ಅನುಮಾನಗಳಿಗೆ ಕಾರಣವಾಗಬಹುದು.‌ ಸಂಬಂಧದಲ್ಲಿ ಸಕಾರಾತ್ಮಕ ಮಾತುಗಳು ಅಗತ್ಯ. ನೌಕರರು ನಿಮ್ಮ‌ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ರಾಜಕೀಯದ ಬಲದಿಂದ ಕಾನೂನಿನ ಸಮರವು ನಿಮ್ಮ ಪರವಾಗಬಹುದು. ವಾಹನ ಚಲಾಯಿಸುವಾಗ ಜಾಗರೂಕತೆ ಮುಖ್ಯ. ಮಕ್ಕಳ ತಪ್ಪನ್ನು ನಿರ್ಲಕ್ಷ್ಯ ಮಾಡದೇ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕಾಗುವುದು. ಕಾರ್ಯದಲ್ಲಿ ಗೊಂದಲವನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ನೀವು ಜೊತೆಗಿದ್ದರೆ ಮಿತ್ರರು ಎಂತಹ ಕೆಲಸವನ್ನು ಮಾಡಲೂ ಹಿಂಜರಿಯರು. ಸಂಗಾತಿಯ ಮೇಲೆ ದ್ವೇಷದ‌ ಬುದ್ಧಿಯು ಬರಬಹುದು. ಮುಂಗೋಪವನ್ನು ಕಡಿಮೆ ಮಾಡಿಕೊಂಡರೂ ನಿಯಂತ್ರಣವನ್ನು ತಪ್ಪಬಹುದು.

ಧನು ರಾಶಿ: ನಿಮಗೆ ನಿಮ್ಮ ತಪ್ಪಿನ ಅರಿವಾದರೂ ಅದನ್ನು ಸರಿ ಮಾಡಿಕೊಳ್ಳುವ ಮನಸ್ಸಿದ್ದರೂ ಸಮಯ ಮಾತ್ರ ದೂರ ಸರಿದಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ಬಂಧುಗಳ ಸಹಾಯವನ್ನು ಕೇಳುವಿರಿ. ಕೊಟ್ಟ ಹಣಕ್ಕೆ ಸರಿಯಾದ ಕೆಲಸವನ್ನು ಮಾಡಿಕೊಡುವಿರಿ.‌ ಗ್ರಾಹಕರಲ್ಲಿ ಸಂತುಷ್ಟಿ ಇರುವುದು. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು. ಅಧ್ಯಾತ್ಮದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಪ್ರೇಮ ವಿವಾಹವು ನಿಮಗೆ ಖಷಿಕೊಡದು. ಯಾರನ್ನಾದರೂ ಪ್ರೀತಿಸುವ ಮನಸ್ಸಾಗುವುದು. ನಿಮ್ಮ ಅಸ್ಮಿತೆಯನ್ನು ನೀವು ಬಿಟ್ಟಕೊಡಲಾರಿರಿ.‌ ಮನೆಯ ಜವಾಬ್ದಾರಿಯನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ನಿಮ್ಮ ವಸ್ತುಗಳು ಇಲ್ಕವಾಗಿದ್ದು ನಿಮಗೆ ಗೊತ್ತಾಗದೇಹೋಗುವುದು. ಇಷ್ಟು ದಿನ ಗುಪ್ತವಾಗಿದ್ದ ಪ್ರೇಮವು ಇಂದು ಪ್ರಕಟವಾಗುವುದು.

ಮಕರ ರಾಶಿ: ದೊಡ್ಡ ವ್ಯಕ್ತಿಗಳ ಸಹವಾಸವನ್ನು ಮಾಡಿ ಅವರ ಜೊತೆ ನಿಮ್ಮ‌ ಹಲವು ದಿನದ‌ ಸಮಸ್ಯೆಗಳನ್ನು ಹೇಳಿಕೊಳ್ಳುವಿರಿ.‌ ಪಾಲುದಾರಿಕೆಯಲ್ಲಿ ನಿಮಗೆ ಸೂಕ್ತ ವ್ಯಕ್ತಿಗಳ ಕೊರತೆ ಕಾಣಿಸುವುದು. ವಿದೇಶೀಯ ವ್ಯವಹಾರದ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ಹೂಡಿಕೆಗೆ ಒತ್ತಡವು ಇರುವುದು. ನಿಮ್ಮ‌ ಬಗ್ಗೆ ನಿಮ್ಮ ಶ್ರಮದಿಂದ ಎಣಿಸಿದಷ್ಟು ಲಾಭವು ಆಗುವುದು. ಲಾಭದ ಮುಂದೆ ಆಯಾಸವು ನಗಣ್ಯವಾಗಲಿದೆ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ. ಕಳೆದ ಸಮಯವನ್ನು ಚಿಂತಿಸಿ ಪ್ರಯೋಜನವಾಗದು. ನಿಮ್ಮ ಕಡೆಯಿಂದ ಆದ ತಪ್ಪಿಗೆ ಕ್ಷಮೆಯನ್ನು ಕೇಳಿ ಸರಿ ಮಾಡಿಕೊಳ್ಳಿ. ಉಪಕಾರದ ಸ್ಮರಣೆಯಿಂದ ಕೆಲಸವನ್ನು ಮಾಡಿ. ಸರಳವಾದುದನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ನೀವು ಕುಟುಂಬದ ಬಗ್ಗೆ ತೆಗೆದುಕೊಂಡ ತೀರ್ಮಾನವು ಇತರರಿಗೂ ಸರಿಯಾಗುವುದು. ಗೃಹಬಳಕೆಯ ವಸ್ತುಗಳ ಮಾರಾಟವು ನಿಮಗೆ ಲಾಭವನ್ನು ಕೊಡುವುದು.

ಕುಂಭ ರಾಶಿ: ಸಂಗಾತಿಯ ಮಾತಿನಿಂದ ಉದ್ವೇಗಕ್ಕೆ ಒಳಗಾಗುವಿರಿ. ಮನೋರಂಜನೆಯ ಅವಧಿಯಲ್ಲಿ ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ. ಸ್ನೇಹಿತರು ಕೊಟ್ಟ ಹಣವನ್ನು ಪುನಃ ಕೇಳಿದ್ದು ನಿಮಗೆ ಅಪಮಾನವಾಗುವುದು. ಅಪಘಾತಗಳು ಸಂಭವಿಸಬಹುದು. ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಚಾಲಾಯಿಸಬೇಕಾಗುವುದು. ಮಕ್ಕಳ ಜೊತೆ ವಿದೇಶ ಪ್ರವಾಸಕ್ಕೆ ತೆರಳುವಿರಿ. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು. ನಿಮಗಾದ ನಷ್ಟವನ್ನು ಸರಿ ಮಾಡಿಕೊಳ್ಳಲು ನಿಮ್ಮ ಮಾರ್ಗವು ಬದಲಾದೀತು. ಉದ್ಯೋಗದ ಬಗ್ಗೆ ಅನೇಕ ಸಲಹೆಗಳು ಬರಬಹುದು. ಎಲ್ಲವನ್ನೂ ಸಮಾಧಾನ ಚಿತ್ತದಿಂದ ಆಲಿಸಿ. ನಿಮ್ಮ ನೋವಿಗೆ ಯಾರೂ ಸ್ಪಂದಿಸದಿರುವುದು ನಿಮಗೆ ಬೇಸರವಾಗುವುದು. ನಿಮ್ಮ‌ ಇಂದಿನ ನಡೆಯನ್ನು ಗುರುತಿಸಲಾಗದು. ಇಂದು ನಿಮ್ಮ ಸಾಮರ್ಥ್ಯದ ಮೇಲೆ ಪೂರ್ಣವಿಶ್ವಾಸವು ಇರದು.

ಮೀನ ರಾಶಿ: ನಿಮ್ಮ ತಗ್ಗಿ ಬಗ್ಗಿ ನಡೆಯುವ ಗುಣದಿಂದ ಆಗಬೇಕಾದ ಕಾರ್ಯಗಳು ಬೇಗನೆ ಆಗಲಿವೆ. ನಿಮ್ಮ‌ ಅರೋಗ್ಯದ ಬಗ್ಗೆ ಮಕ್ಕಳು ಹೆಚ್ಚಿನ ಕಾಳಜಿ ವಹಿಸುವರು. ನಿಮ್ಮ ಒತ್ತಡಗಳು ಎಂದಿಗಿಂತ ಕಡಿಮೆ ಇರುವ ಕಾರಣ ಮನಸ್ಸು ‌ಸಮಾಧಾನದಿಂದ ಇರುವುದು. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಭೂಮಿಯ ಒಳಗೆ ಸಿಗುವ ವಸ್ತುಗಳಿಂದ ಲಾಭವನ್ನು ಪಡೆಯಬಹುದು. ನಿಮ್ಮ‌ ಕನಸು ಅರ್ಧ ಪೂರ್ಣವಾಗಿದ್ದು ಖುಷಿ ಕೊಡುವುದು.‌ ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು. ಆಪ್ತರನ್ನು ಅನುಮಾನಿಸುವುದು ಬೇಡ. ನಿಮ್ಮ ಸಂಬಂಧಿಸದ ವಿಚಾರದಲ್ಲಿ ಮಧ್ಯಪ್ರವೇಶವನ್ನು ಮಾಡುವುದು ಬೇಡ. ನೂತನ ಗೃಹನಿರ್ಮಾಣವನ್ನು ಮಾಡಲು ಚಿಂತಿಸುವಿರಿ. ಸ್ವಂತ ಉದ್ಯಮವನ್ನು ವಿಸ್ತರಿಸಲು ನಿಮಗೆ ಕೆಲವು ಕೊರತೆಗಳು ಇರವುದು.

ಲೋಹಿತ ಹೆಬ್ಬಾರ್ – 8762924271 (what’s app only)