ನೀವು ಎಂದಾದರೂ ಫಿಶ್ ಬುರ್ಜಿ ತಿಂದಿದ್ದೀರಾ?; ಪಾಕ ವಿಧಾನ ಇಲ್ಲಿದೆ
ಸಾಮಾನ್ಯವಾಗಿ ಎಗ್ ಬುರ್ಜಿ ನೀವು ತಿಂದಿರುತ್ತೀರಿ, ಆದರೆ ಎಂದಾದರೂ ಎಗ್ ಬುರ್ಜಿ ಎಂದಾದರೂ ಟ್ರೈ ಮಾಡಿದ್ದೀರಾ? ನಾನ್ ವೆಜ್ ಪ್ರಿಯರು ವಿಶೇಷ ಮೀನು ಪ್ರಿಯರು ಈ ಸಿಂಪಲ್ ರೆಸಿಪಿಯನ್ನು ಮನೆಯಲ್ಲೊಮ್ಮೆ ಟ್ರೈ ಮಾಡಿ.
ನಾನ್ ವೆಜ್ ಪ್ರಿಯರು ಪ್ರತಿದಿನ ಏನಾದರೊಂದು ಹೊಸ ಹೊಸ ಮಾಂಸಹಾರದ ಖಾದ್ಯಗಳನ್ನು ತಿನ್ನಲು ಬಯಸುತ್ತಾರೆ. ಸಾಮಾನ್ಯವಾಗಿ ಎಗ್ ಬುರ್ಜಿ ನೀವು ತಿಂದಿರುತ್ತೀರಿ, ಆದರೆ ಎಂದಾದರೂ ಎಗ್ ಬುರ್ಜಿ ಎಂದಾದರೂ ಟ್ರೈ ಮಾಡಿದ್ದೀರಾ? ನಾನ್ ವೆಜ್ ಪ್ರಿಯರು ವಿಶೇಷ ಮೀನು ಪ್ರಿಯರು ಈ ಸಿಂಪಲ್ ರೆಸಿಪಿಯನ್ನು ಮನೆಯಲ್ಲೊಮ್ಮೆ ಟ್ರೈ ಮಾಡಿ. ವೆರೈಟಿ ತಿನ್ನಲು ಬಯಸುವವರು ಈ ಫಿಶ್ ಬುರ್ಜಿಯನ್ನು ಟ್ರೈ ಮಾಡಬಹುದು. ವಾರಾಂತ್ಯ ಮತ್ತು ವಿಶೇಷ ದಿನಗಳಲ್ಲಿ ಇದನ್ನು ಮಾಡಿ ತಿನ್ನಿ. ರುಚಿಯಂತೂ ತುಂಬಾ ಅಧ್ಭುತ. ಈ ಮೀನಿನ ಬುರ್ಜಿಗೆ ಬೇಕಾಗುವ ಪದಾರ್ಥಗಳು ಯಾವುವು? ಈಗ ಅದನ್ನು ಹೇಗೆ ಮಾಡಬೇಕೆಂದು ಇಲ್ಲಿ ತಿಳಿದುಕೊಳ್ಳಿ.
ಮೀನಿನ ಬುರ್ಜಿಗೆ ಬೇಕಾಗುವ ಸಾಮಾಗ್ರಿಗಳು:
ಕಡಿಮೆ ಮುಳ್ಳುಗಳಿರುವ ಮೀನು ಆಯ್ಕೆ ಮಾಡಿ. ಇದರ ಜೊತೆ ಉಪ್ಪು, ಅರಿಶಿನ, ಹಸಿರು ಮೆಣಸಿನಕಾಯಿ, ಸಣ್ಣದಾಗಿ ಕೊಚ್ಚಿದ ಇರುಳ್ಳಿ, ಕರಿಬೇವು, ಎಣ್ಣೆ, ಕೊತ್ತಂಬರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸು ಪುಡಿ, ಗರಂ ಮಸಾಲಾ, ಸಾಸಿವೆ.
ಇದನ್ನೂ ಓದಿ: ರೆಸ್ಟೋರೆಂಟ್ ಸ್ಟೈಲ್ ಸೂಪರ್ ಟೇಸ್ಟಿ ಚಿಕನ್ ಪೆಪ್ಪರ್ ಫ್ರೈ ಮಾಡುವ ವಿಧಾನ ಇಲ್ಲಿದೆ
ಮೀನಿನ ಬುರ್ಜಿ ತಯಾರಿಸುವ ವಿಧಾನ:
- ಮೊದಲು ಮೀನನ್ನು ಚೆನ್ನಾಗಿ ತೊಳೆದು ಪಕ್ಕಕ್ಕೆ ಇಡಿ. ಸ್ವಚ್ಛಗೊಳಿಸಿದ ಮೀನಿಗೆ ಸ್ವಲ್ಪ ಉಪ್ಪು ಮತ್ತು ಅರಿಶಿನ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ. ಆ ನಂತರ ಇವುಗಳನ್ನು ತಟ್ಟೆಯಲ್ಲಿ ತೆಗೆದುಕೊಂಡು ಮೀನಿನ ತುಂಡುಗಳ ಮೇಲಿನ ಚರ್ಮ ಮತ್ತು ಒಳಗಿನ ಮುಳ್ಳನ್ನು ನಿಧಾನವಾಗಿ ಹೊರತೆಗೆಯಿರಿ.
- ಈಗ ಕಡಾಯಿಯನ್ನು ತೆಗೆದುಕೊಂಡು ಎಣ್ಣೆ ಬಿಸಿ ಮಾಡಿ. ನಂತರ ಸಾಸಿವೆ ಮತ್ತು ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ಕೊಚ್ಚಿಟ್ಟ ಈರುಳ್ಳಿ, ಹಸಿರು ಮೆಣಸಿನಕಾಯಿ ಹಾಕಿ ಸ್ವಲ್ಪ ಕೆಂಪಾಗಾಗುವ ವರೆಗೆ ಫ್ರೈ ಮಾಡಿ. ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
- ನಂತರ ಈಗಾಗಲೇ ಮಸಾಲೆ ಹಾಕಿ ಮೀನು ಸೇರಿಸಿ, ಸ್ವಲ್ಪ ಉಪ್ಪು, ಅರಿಶಿನ ಮತ್ತು ಕಾಳುಮೆಣಸಿನ ಪುಡಿ ಹಾಕಿ ಫ್ರೈ ಮಾಡಿ. ನಂತರ ಗರಂ ಮಸಾಲಾ ಸೇರಿಸಿ, ಎರಡು ನಿಮಿಷ ಫ್ರೈ ಮಾಡಿ. ಕೊತ್ತಂಬರಿ ಸೊಪ್ಪು ಹಾಕಿ ಸ್ಟವ್ ಆಫ್ ಮಾಡಿ. ಈಗ ಟೇಸ್ಟಿ ಮತ್ತು ಆರೋಗ್ಯಕರ ಮೀನಿನ ಬುರ್ಜಿಯನ್ನು ರೆಡಿಯಾಗಿದೆ. ಇದನ್ನು ಚಪಾತಿ, ರೊಟ್ಟಿ ಅಥವಾ ಅನ್ನದೊಂದಿಗೆ ತಿಂದರೆ ತುಂಬಾ ರುಚಿಯಾಗಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: