Midday meal: ಶಾಲೆಗಳಲ್ಲಿ ವೆಜ್ ಬೆಸ್ಟಾ..? ಇಲ್ಲ ನಾನ್ ವೆಜ್ ಬೆಸ್ಟಾ..? ಮತ್ತೆ ಕೇಂದ್ರ ಬಿಂದು ಆಯ್ತು ಶಿಕ್ಷಣ ಇಲಾಖೆ
ರಾಜ್ಯದ ಶಾಲೆಗಳಲ್ಲಿ ಮಕ್ಕಳ ಊಟದ ವಿಚಾರ ಮತ್ತೆ ಚರ್ಚೆಗೆ ಗ್ರಾಸಾವಾಗಿದೆ. ಕೆಲ ದಿನಗಳಿಂದ ಮೊಟ್ಟೆ ಶಾಲೆಯ ಮಕ್ಕಳಿಗೆ ನೀಡಿದಕ್ಕೆ ದೊಡ್ಡ ಮಟ್ಟದಲ್ಲಿ ಪರ-ವಿರೋಧ ಕೇಳಿ ಬಂದಿತ್ತು. ಇದೀಗ ಮತ್ತೆ ಮಕ್ಕಳ ಊಟದಲ್ಲಿ ವೆಜ್ ಬೆಸ್ಟಾ. ನಾನ್ ವೆಜ್ ಎಂಬ ಹೊಸ ವಾದ ಶುರುವಾಗಿದೆ.
ಬೆಂಗಳೂರು: ಆಹಾರ, ಧರ್ಮ ವಿಚಾರವಾಗಿ ಶಿಕ್ಷಣ ಇಲಾಖೆ(Karnataka Education department) ಸಾಕಷ್ಟು ಸದ್ದು ಮಾಡುತ್ತಿದೆ. ಕಳೆದ ಒಂದು ವರ್ಷದಿಂದ ಶಾಲೆಯ ಮಕ್ಕಳಿಗೆ (School Students) ತಲೆಕಟ್ಟು ಹೋಗಿದೆ. ಇದೀಗ ಮತ್ತೆ ಹೊಸ ಚರ್ಚೆಗೆ ಶಿಕ್ಷಣ ಇಲಾಖೆ ಮುನ್ನಲಿಗೆ ಬಂದಿದೆ. ಮಕ್ಕಳ ಆಹಾರ ಪದ್ಧತಿಯಲ್ಲಿ ರಾಜ್ಯದ ಮಕ್ಕಳಿಗೆ ನಾನ್ ವೆಜ್ ಬೆಸ್ಟ್, ವೆಜ್ ಬೆಸ್ಟ್ ಎಂಬ ವಾದ ಶುರುವಾಗಿದೆ. ನಿನ್ನೆ (j.09) ವಿಧಾನಸೌಧದಲ್ಲಿ ನಡೆದ ನೈತಿಕ ಶಿಕ್ಷಣ ವಿಚಾರ ಸಭೆಯಲ್ಲಿ ಸ್ವಾಮೀಜಿಗಳು, ಶಿಕ್ಷಣ ತಜ್ಞರು ಮಕ್ಕಳಿಗೆ ಸಾತ್ವಿಕ ಆಹಾರ ಕೊಡಬೇಕು ಎಂದು ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಹಬ್ಬ-ಹರಿದಿನ, ವಿಶೇಷ ಸಂದರ್ಭಗಳಲ್ಲಿ ಶಾಲಾ ಮಕ್ಕಳಿಗೆ ವಿಶೇಷ ಭೋಜನ ಯೋಜನೆ
ಹೌದು.. ಸರ್ಕಾರಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳು ತಮ್ಮ ಕನಸು ನನಸು ಮಾಡಿಕೊಳ್ಳಲು ವಿದ್ಯೆಯನ್ನು ಕಲಿಯುತ್ತಿದ್ದಾರೆ. ಇಲ್ಲಿ ಜಾತಿ, ಧರ್ಮ ಯಾವುದೇ ಭೇದಭಾವ ಇಲ್ಲದೇ ನಾವು ಎಲ್ಲರು ಒಂದೇ ಎಂದು ನೋರಾರು ಕನಸು ಹೊತ್ತು ನಗು ಮುಖದಲ್ಲಿ ಶಾಲೆಗೆ ಬಂದು ಹೋಗ್ತಾರೆ. ಆದ್ರೆ, ಇದೀಗ ಇಲಾಖೆ , ಆಹಾರ ವಿಚಾರವಾಗಿ ನಡೆಯುತ್ತಿರುವ ವಿವಾದ ನೋಡಿದ್ರೆ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಮೂಡಿದೆ.
ದಿನ ಬೆಳಗಾದ್ರೆ ಸಾಕು ಶಿಕ್ಷಣ ಇಲಾಖೆ ಕಾಂಟ್ರ್ವರ್ಸುಗಳಿಂದ ಜಾಸ್ತಿ ಸದ್ದು ಮಾಡುತ್ತಿದೆ ಇದೀಗ ಮಕ್ಕಳಿಗೆ ಕೊಡುವ ಮಧ್ಯಾಹ್ನ ಊಟ ಬಗ್ಗೆ ವೆಜ್- ನಾನ್ ವೆಜ್ ಬಗ್ಗೆ ಮತ್ತೆ ವಿವಾದ ಬಂದಿದೆ. ಮಕ್ಕಳಲ್ಲಿ ಬದಲಾಗ್ತಿರೋ ವರ್ತನೆಗೆ ಮಾಂಸಹಾರಿ ಕಾರಣ ಎಂದು ಅನೇಕರಿಂದ ಅಭಿಪ್ರಾಯ ಕೇಳಿ ಬಂದಿದೆ. ತೇಜಸ್ವಿನಿ ಅನಂತಕುಮಾರ್, ಸ್ವರ್ಣವಲ್ಲಿ ಮಠ, ಪೇಜಾವರ ಮಠದ ಸ್ವಾಮೀಜಿ ಸೇರಿದಂತೆ ಅನೇಕ ಪಠದ ಸ್ವಾಮೀಜಿಗಳಿಂದ ಅನೇಕರಿಂದ ಸಾತ್ವಿಕ ಆಹಾರದ ಬಗ್ಗೆ ಸಲಹೆ ನೀಡಿದ್ದಾರೆ.
ಇನ್ನೂ ವಿಚಾರವಾಗಿ ಮಾತನಾಡಿ ಶಿಕ್ಷಣ ಸಚಿವ ನಾಗೇಶ್, ಸಭೆಯಲ್ಲಿ ಸಾತ್ವಿಕ ಆಹಾರದ ಬಗ್ಗೆಯೂ ಸಲಹೆಗಳು ಬಂದಿವೆ. ಮೊಟ್ಟೆಯನ್ನ ಕೊಡೋದು ಬೇಡ ಅಂದಿದ್ವಿ. ಆದರೂ ಸರ್ಕಾರ ಕೊಟ್ಟಿದೆ. ಆ ಒಂದು ವಿಚಾರವನ್ನೂ ಸಹ ನಾವು ಒಪ್ಪಿಕೊಂಡಿದ್ದೇವೆ. ಆದರೆ ಈ ಸಭೆಯ ವಿಚಾರ ಸಾತ್ವಿಕ ಆಹಾರದ ಬಗ್ಗೆ ಅಲ್ಲ. ಆದರೂ ಸಾತ್ವಿಕ ಆಹಾರ ಮಕ್ಕಳ ಮನಸಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತೆ. ಸದ್ಯಕ್ಕೆ ಯಾವುದೇ ಪ್ರಸ್ತಾವನೆ ಇಲ್ಲ ಎಂದರು
ಒಟ್ಟಿನಲ್ಲಿ ಈ ಸಾತ್ವಿಕ ಆಹಾರ ಪದ್ದತಿ ಮತ್ತೊಂದು ದಂಗಲ್ ಸೃಷ್ಟಿ ಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಮೊಟ್ಟೆ ಮಾಂಸ ಅಹಾರ ಆಹಾರ ಪದ್ಧತಿಗಳ ವಿಚಾರದಲ್ಲಿ ದಂಗಲ್ ಶುರುವಾಗುವ ಆತಂಕ ಎದರಾಗಿದ್ದು ಮಕ್ಕಳ ಆಹಾರ ನೀಡುವ ವಿಚಾರದಲ್ಲಿ ಪರ ವಿರೋಧ ಚರ್ಚೆ ಮುಂದಿನ ಹಂತದಲ್ಲಿ ಯಾವ ಸ್ವರೂಪ ಪಡೆಯುತ್ತೆ ಎಂದು ಕಾದು ನೋಡಬೇಕಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ