Kannada News Lifestyle House Fly : How to Get Rid of House Flies Quickly? Lifestyle News in Kannada
House Fly: ಅಡುಗೆ ಮನೆಯಲ್ಲಿ ನೊಣಗಳ ಕಾಟಕ್ಕೆ ಇದುವೇ ಪರಿಹಾರ
ಮನೆಯೆಂದ ಮೇಲೆ ನೊಣ, ಸೊಳ್ಳೆಗಳ ಕಾಟ ಇದ್ದೆ ಇರುತ್ತದೆ. ಆದರೆ ಕೆಲವು ಸಮಯದಲ್ಲಿ ಈ ಕೀಟಗಳು ವಿಪರೀತ ತೊಂದರೆಯನ್ನುಂಟು ಮಾಡುತ್ತದೆ. ಅಡುಗೆ ಮನೆ ತುಂಬಾ ನೊಣಗಳುಹಾರಾಡುತ್ತಿರುತ್ತದೆ. ಆಹಾರದ ಪದಾರ್ಥಗಳ ಮೇಲೆ ಕೂರುತ್ತ ಬೇಡದ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತವೆ. ಹೀಗಾಗಿ ಈ ನೊಣಗಳ ಕಾಟದಿಂದ ಮುಕ್ತಿ ಹೊಂದಲು ಈ ಈ ಸಲಹೆಗಳನ್ನು ಪಾಲಿಸಿ.
Follow us on
ಮಳೆಗಾಲ, ಚಳಿಗಾಲಕ್ಕಿಂತ ಬೇಸಿಗೆಯಲ್ಲಿ ನೊಣಗಳ ಕಾಟ ವಿಪರೀತವಾಗಿರುತ್ತದೆ. ಹೀಗಾಗಿ ಹೆಚ್ಚಿನವರು ಹಣ್ಣು ಹಂಪಲುಗಳನ್ನು ಮನೆಯಲ್ಲಿ ತಂದಿಡಲು ಇಷ್ಟ ಪಡುವುದಿಲ್ಲ. ಅದಲ್ಲದೇ ಮನೆ ತುಂಬಾ ನೊಣಗಳು ಮುತ್ತಿಕೊಂಡು ಬಿಡುತ್ತವೆ. ಹೀಗೆ ಬಿಟ್ಟರೆ ಈ ಸಂಖ್ಯೆಯು ದ್ವಿಗುಣಗೊಳ್ಳುತ್ತವೆ. ಪ್ರಾರಂಭದಲ್ಲಿಯೇ ಸೂಕ್ತವಾದ ಮನೆ ಮದ್ದಿನ ಮೂಲಕ ಈ ನೊಣಗಳನ್ನು ಓಡಿಸಬಹುದು.
ಒಂದು ಲೋಟಕ್ಕೆ ಆಪಲ್ ಸೈಡರ್ ವಿನೇಗರ್ ಹಾಗೂ ಒಂದು ಡ್ರಾಪ್ ನಷ್ಟು ಡಿಶ್ ಸೋಪ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮೇಲಿನಿಂದ ಪ್ಲಾಸ್ಟಿಕ್ ಹೊದಿಕೆಯನ್ನು ಮುಚ್ಚಿ ಬಿಗಿಯಾಗಿ ಕಟ್ಟಿಕೊಳ್ಳಬೇಕು. ಆ ಬಳಿಕ ಮೇಲ್ಭಾಗದಲ್ಲಿ ಸಣ್ಣ ರಂಧ್ರಗಳನ್ನು ಮಾಡಿಟ್ಟರೆ ಇದರ ಪರಿಮಳಕ್ಕೆ ನೊಣಗಳು ಓಡಿ ಹೋಗುತ್ತವೆ.
ಒಂದು ಲೋಟ ಹಾಲಿಗೆ ಕಾಳುಮೆಣಸು ಮತ್ತು ಸಕ್ಕರೆಯನ್ನು ಸೇರಿಸಿ ಕುದಿಸಿ ಮನೆಯ ಮೂಲೆ ಮೂಲೆಗೆ ಸ್ಪ್ರೇ ಮಾಡುವುದರಿಂದ ನೊಣಗಳು ಇಲ್ಲವಾದಂತಾಗುತ್ತದೆ.
ನೊಣದ ಕಾಟ ಹೆಚ್ಚಾಗಿದ್ದರೆ ಅಡುಗೆ ಮನೆಯಲ್ಲಿ ಅರಶಿನಕ್ಕೆ ಉಪ್ಪು ಬೆರೆಸಿ ಉದುರಿಸುವುದರಿಂದ ಈ ನೊಣಗಳ ಸಂಖ್ಯೆಯು ಕಡಿಮೆಯಾಗುತ್ತದೆ.
ನೊಣಗಳನ್ನು ಓಡಿಸಲು ಒಂದು ಕಪ್ ನೀರಿಗೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿಯನ್ನು ಹಾಕಿ ಕುದಿಸಿ, ಅದು ತಣ್ಣಗಾದ ಮೇಲೆ ಬಾಟಲ್ ಗೆ ಹಾಕಿ ಸ್ಪ್ರೇ ಮಾಡುವುದರಿಂದ ಈ ನೊಣಗಳು ಓಡಿ ಹೋಗುತ್ತವೆ.
ಒಂದು ಕಪ್ ನೀರಿಗೆ ನಿಂಬೆ ರಸ ಮತ್ತು ಎರಡು ಚಮಚ ಉಪ್ಪನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿ, ಬಾಟಲಿಯಲ್ಲಿ ಹಾಕಿ ಸ್ಪ್ರೇ ಮಾಡುವುದರಿಂದ ನೊಣಗಳು ಹತ್ತಿರ ಕೂಡ ಸುಳಿಯುವುದಿಲ್ಲ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ