ಇಂದಿನ ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಬೇಡದ ಆರೋಗ್ಯ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವವರೇ ಹೆಚ್ಚಾಗಿರುತ್ತಾರೆ. ನಾವು ಸೇವಿಸುವ ಕೆಲವು ಆಹಾರಗಳಿಂದ ಆರೋಗ್ಯಕ್ಕೆ ಅಡ್ಡಪರಿಣಾಮಗಳು ಹೆಚ್ಚಿದೆ ಎಂದು ತಿಳಿದಿದ್ದರೂ ಸೇವಿಸುವ ಪ್ರಮಾಣವಂತೂ ಕಡಿಮೆ ಮಾಡಲ್ಲ. ಸಕ್ಕರೆ ಪಾನೀಯಗಳು ಆರೋಗ್ಯಕರವಾಗಿ ಹಿತಕರವಲ್ಲ. ಪ್ಯಾಕ್ ಮಾಡಿದ ಹಣ್ಣಿನ ರಸವಾಗಲಿ ಅಥವಾ ತಂಪು ಪಾನೀಯಗಳನ್ನು ಮಿತವಾಗಿ ಸೇವಿಸುವುದು ಉತ್ತಮ. ಸಕ್ಕರೆ ಪಾನೀಯಗಳು ನಮ್ಮ ದೇಹಕ್ಕೆ ಉತ್ತಮವಲ್ಲ ಎಂದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದ್ದರೂ ಇದನ್ನು ನಿರ್ಲಕ್ಷಿಸುತ್ತೇವೆ.
ಇತ್ತೀಚಿನ ಇನ್ಸ್ಟಾಗ್ರಾಮ್ ರೀಲ್‌ನಲ್ಲಿ, ಯೋಗ ಮತ್ತು ಆಯುರ್ವೇದ ಜೀವನಶೈಲಿ ತಜ್ಞರಾದ ನಮಿತಾ ಚಂದ್ರ ಪಿಪರಾಯ, ‘ನಾವು ಸಕ್ಕರೆ ಪಾನೀಯಗಳನ್ನು ಸೇವಿಸಿದಾಗ ನಮ್ಮ ದೇಹಕ್ಕೆ ಏನಾಗುತ್ತದೆ ಎಂಬುದನ್ನು ಸ್ಕಿಟ್‌ನೊಂದಿಗೆ ವಿವರಿಸಿದ್ದಾರೆ. ತಜ್ಞರು ಸಕ್ಕರೆಯಂಶಯುಕ್ತ ಪಾನೀಯಗಳ ಸೇವನೆಯಿಂದ ಕ್ಯಾನ್ಸರ್, ಲಿವರ್ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಚರ್ಮ ಸುಕ್ಕುಗಟ್ಟುವಿಕೆ ಮತ್ತು ಡ್ರೈ ಸ್ಕಿನ್ ಸಮಸ್ಯೆಗಳು ಕಂಡು ಬರುತ್ತದೆ. ದೇಹದ ತೂಕ ಹೆಚ್ಚಳ ಹಾಗೂ ಶಕ್ತಿ ಸಾಮರ್ಥ್ಯ ಕುಂಠಿತವಾಗುತ್ತದೆ ಎಂದು ತಿಳಿಸಿದ್ದಾರೆ.
ಅದಲ್ಲದೇ ಹಣ್ಣುಗಳಲ್ಲಿ ಫೈಬರ್, ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಇದನ್ನು ಆಹಾರದಲ್ಲಿ ಅತ್ಯಮೂಲ್ಯ ಭಾಗವಾಗಿ ಬಳಸಬಹುದು. ಆದರೆ ಪ್ಯಾಕ್ ಮಾಡಿದ ಹಣ್ಣಿನ ರಸದ ಅತಿಯಾದ ಸೇವನೆಯೂ ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಕೊನೆಯಲ್ಲಿ, ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಆರೋಗ್ಯಕ್ಕೆ ಉತ್ತಮವಾದ ಆಹಾರಕ್ರಮಗಳನ್ನು ಸೇರಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಈ ಕಾರಣದಿಂದಲೇ ಹುಡುಗಿಯರು ಪ್ರಪೋಸ್ ಮಾಡೋ ಧೈರ್ಯ ಮಾಡಲ್ಲ
ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದು, ನೆಟ್ಟಿಗರೊಬ್ಬರು, ‘ನಿಮ್ಮ ವಿಷಯಕ್ಕಾಗಿ ತುಂಬಾ ಧನ್ಯವಾದಗಳು, ನಿಮ್ಮ ಈ ಪೇಜ್ ನಿಂದ ಬಹಳಷ್ಟು ಮಾಹಿತಿ ಪಡೆದು ಕೊಂಡಿದ್ದೇನೆ ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು, ‘ ನನ್ನಂತಹ ಸಕ್ಕರೆ ಸೇವಿಸುವ ಅದೆಷ್ಟೋ ಜನರಿಗೆ ನಿಮ್ಮ ವೀಡಿಯೊಗಳಲ್ಲಿನ ಮಾಹಿತಿಗಳು ಉಪಯೋಗಕ್ಕೆ ಬರುತ್ತದೆ ಎಂದಿದ್ದಾರೆ.
ಜೀವನಶೈಲಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ