
ಸ್ವಚ್ಛತೆ ಮತ್ತು ನೈರ್ಮಲ್ಯ (Hygiene) ಮೊದಲಿಗೆ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಮನೆಯೊಳಗೆ ಹಾಗೂ ಮನೆ ಸುತ್ತಮುತ್ತಲಿನ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿದರೆ ಹೋದರೆ ಇದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನೈರ್ಮಲ್ಯ ಎಂದ ತಕ್ಷಣ, ಮನೆ ಸ್ವಚ್ಛವಾಗಿಟ್ಟುಕೊಳ್ಳುವುದು, ಶೌಚಾಲಯ ಸ್ವಚ್ಛವಾಗಿಟ್ಟುಕೊಳ್ಳುವುದು ಮಾತ್ರವಲ್ಲ, ನಾವು ದಿನನಿತ್ಯ ಬಳಸುವ ಟವೆಲ್, ಬೆಡ್‌ಶೀಟ್, ಬ್ಲಾಂಕೆಟ್, ತಲೆದಿಂಬು, ಒಳ ಉಡುಪು, ಟೂತ್ ಬ್ರಶ್ ಈ ಒಂದಷ್ಟು ವಸ್ತುಗಳನ್ನು ಸಹ ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ದಿನನಿತ್ಯದ ಬಳಕೆಯ ಈ ವಸ್ತುಗಳ ನಿಯಮಿತ ಸ್ವಚ್ಛತೆ ಎಷ್ಟು ಮುಖ್ಯ, ಎಷ್ಟು ಬಾರಿ ಇವುಗಳನ್ನು ಸ್ವಚ್ಛಗೊಳಿಸಬೇಕು ಎಂಬ ವಿಚಾರವನ್ನು ಡಾ. ಮನನ್ ವೋರಾ (Dr. Manan Vora) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಾವು ಊಟ ಮಾಡುವ ಮೊದಲು ಕೈತೊಳೆಯುವುದರಿಂದ ಹಿಡಿದು ಪ್ರತಿನಿತ್ಯ ಸ್ನಾನ ಮಾಡಿ ನಮ್ಮ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವಂತೆ, ನಾವು ದಿನನಿತ್ಯ ಬಳಕೆ ಮಾಡುವ ಈ ಒಂದಷ್ಟು ವಸ್ತುಗಳನ್ನು ಸಹ ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಎಂದು ಡಾ. ಮನನ್ ವೋರಾ ಹೇಳಿದ್ದಾರೆ.
ಒಳ ಉಡುಪು, ಬೆಟ್‌ಶೀಟ್, ತಲೆದಿಂಬು ಕವರ್‌ಗಳನ್ನು ಯಾವಾಗ, ಎಷ್ಟು ಬಾರಿ ಸ್ವಚ್ಛಗೊಳಿಸಬೇಕು, ಟೂತ್‌ಬ್ರಶನ್ನು ಎಷ್ಟು ಸಮಯದವರೆಗೆ ಬಳಸೇಕು ಎಂಬ ಉಪಯುಕ್ತ ಮಾಹಿತಿಯನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
ಡಾ. ಮನನ್ ಹೇಳುವಂತೆ, ನಾವು ತೊಡುವ ಒಳುಡುಪುಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಲೇಬೇಕು, ನೈರ್ಮಲ್ಯದ ದೃಷ್ಟಿಯಿಂದ ಇದಕ್ಕೆ ಯಾವುದೇ ವಿನಾಯಿತಿ ಇಲ್ಲ. ಅದೇ ರೀತಿ ಬೆಟ್‌ಶೀಟ್‌ಗಳನ್ನು ವಾರಕ್ಕೆ ಒಂದು ಬಾರಿ ತೊಳೆಯಬೇಕು, ತಲೆದಿಂಬಿನ ಹೊದಿಕೆಯನ್ನು ಪ್ರತಿ ನಾಲ್ಕು ದಿನಕ್ಕೊಮ್ಮೆ ಸ್ವಚ್ಛಗೊಳಿಸಬೇಕು, ಅದರಲ್ಲೂ ಮೊಡವೆ ಮತ್ತು ಎಣ್ಣೆಯುಕ್ತ ಚರ್ಮದ ಸಮಸ್ಯೆಯಿರುವವರು ಕಡ್ಡಾಯವಾಗಿ ತಲೆದಿಂಬು ಕವರ್ ತೊಳೆಯಲೇಬೇಕು ಎಂದು ಅವರು ಹೇಳಿದ್ದಾರೆ. ತಲೆದಿಂಬುಗಳನ್ನು ಆರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು, ಟವೆಲ್‌ಗಳನ್ನು ಎರಡು ಮೂರು ಬಳಕೆಯ ನಂತರ ಕಡ್ಡಾಯವಾಗಿ ತೊಳೆಯಲೇಬೇಕು. ಇಲ್ಲದಿದ್ದರೆ ಇದರಲ್ಲಿ ಸಂಗ್ರಹವಾಗುವ ಸೂಕ್ಷ್ಮಾಣು ಜೀವಿಗಳು ಚರ್ಮಕ್ಕೆ ಹಾನಿ ಉಂಟುಮಾಡುತ್ತವೆ.
ಇದನ್ನೂ ಓದಿ: ಹುಡುಗಿಯರೇ… ಈ ಎರಡು ಅಂಶಗಳಿರುವ ಲಿಪ್‌ಸ್ಟಿಕ್ ಮುಟ್ಟಿನ ತೊಂದರೆಗೆ ಕಾರಣವಾಗಬಹುದು, ಎಚ್ಚರ
ಇನ್ನೂ ನಾವು ಬಳಕೆ ಮಾಡುವಂತಹ ಜೀನ್ಸ್ ಪ್ಯಾಂಟ್‌ಗಳನ್ನು 4 ರಿಂದ 5 ಬಾರಿ ಧರಿಸಿದ ನಂತರ ತೊಳೆಯಬೇಕು. ಏನಾದ್ರೂ ಪ್ಯಾಂಟ್‌ನಿಂದ ವಾಸನೆ ಬಂದರೆ ಆದಷ್ಟು ಬೇಗ ಸ್ವಚ್ಛಗೊಳಿಸಬೇಕು ಅದೇ ರೀತಿ ಹಲ್ಲುಜ್ಜುವ ಬ್ರಶ್ ವಿಚಾರಕ್ಕೆ ಬಂದರೆ, ಬಾಯಿಯ ನೈರ್ಮಲ್ಯದ ದೃಷ್ಟಿಯಿಂದ ಟೂತ್ ಬ್ರಶ್‌ಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಚೇಂಜ್ ಮಾಡಲೇಬೇಕು ಎನ್ನುತ್ತಾರೆ ಡಾ. ಮನನ್.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ