ಉದ್ದವಾದ ಮತ್ತು ಹೊಳೆಯುವ ಕೇಶರಾಶಿಯನ್ನು ಪಡೆಯಬೇಕು ಎಂಬ ಆಸೆ ಎಲ್ಲಾ ಹೆಣ್ಣು ಮಕ್ಕಳಲ್ಲಿಯೂ ಇರುತ್ತದೆ. ನಿಮ್ಮ ಕೂದಲಿನ ಬಣ್ಣ ಮತ್ತು ಹೊಳಪು ನಿಮ್ಮ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಬದಲಾಗಿರುವ ಕೆಲವು ಜೀವನಶೈಲಿಯಲ್ಲಿ ಕೂದಲು ಉದುರುವ ಸಮಸ್ಯೆಯೇ ಮಹಿಳೆಯರಿಗೆ ದೊಡ್ಡ ಚಿಂತೆಯಾಗಿಬಿಟ್ಟಿದೆ. ಹೀಗಿರುವಾಗ ನಿಮ್ಮ ತಲೆ ಕೂದಲು ಚೆನ್ನಾಗಿ ಬೆಳೆಯಲು ಮತ್ತು ಕಾಂತಿಯನ್ನು ಹೆಚ್ಚಿಸಲು ಇಲ್ಲಿದೆ ಕೆಲವು ಟಿಪ್ಸ್ಗಳು. ಇವುಗಳನ್ನು ಅನುಸರಿಸುವ ಮೂಲಕ ನೀವು ಕೂದಲು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಪೌಷ್ಟಿಕ ತಜ್ಞರಾದ ಪೂಜಾ ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಉದ್ದವಾದ ಕೂದಲು ಮತ್ತು ಕಾಂತಿಯುತ ಕೂದಲನ್ನು ಹೊಂದಲು ಏನೆಲ್ಲಾ ಮಾಡಬಹುದು ಎಂಬುದಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಉದ್ದ ಮತ್ತು ಹೊಳೆಯುವ ಕೂದಲನ್ನು ಹೊಂದಲು ಅನುಸರಿಸಬಹುದಾದ ಸಲಹೆಗಳು ಈ ಕೆಳಗಿನಂತಿದೆ:
ಆಮ್ಲಾ
ನೆಲ್ಲಿಕಾಯಿ ಔಷಧೀಯ ಗುಣಗಳಿಂದ ಕೂಡಿದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಜತೆಗೆ ಕಾಲಜನ್ ಇರುವುದರಿಂದ ಕೂದಲು ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ. ವಯಸ್ಸು, ನಾವು ಸೇವಿಸುವ ಆಹಾರವನ್ನು ಅವಲಂಬಿಸಿ ಕೂದಲು ಪ್ರತೀ ವರ್ಷ ಸುಮಾರು ಆರು ಇಂಚು ಬೆಳೆಯುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಅಗಸೆ ಬೀಜ
ಅಗಸೆ ಬೀಜದಲ್ಲಿ ಫೈಬರ್ ಮತ್ತು ಪ್ರೋಟೀನ್ಗಳು ಸಮೃದ್ಧವಾಗಿರುತ್ತದೆ. ಇದು ನಿಮ್ಮ ಆರೋಗ್ಯ ಸುಧಾರಣೆಗೆ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಎರಡು ಚಮಚ ಅಗಸೆ ಬೀಜದಲ್ಲಿ 6,400mg ಒಮೆಗಾ 3 ಕೊಬ್ಬಿನಾಮ್ಲವಿರುತ್ತದೆ. ಇದು ನಿಮ್ಮ ಕೂದಲು ಚೆನ್ನಾಗಿ ಬೆಳೆಯಲು ಸಹಾಯಕವಾಗಿದೆ.
ಕರಿಬೇವು
ಕರಿಬೇವಿನ ಎಲೆಗಳನ್ನು ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ರಸವನ್ನು ತಲೆಗೆ ಹಚ್ಚುವ ಮೂಲಕ ನೀವು ದಪ್ಪವಾದ ಕೂದಲನ್ನು ಪಡೆಯಬಹುದು ಜತೆಗೆ ಕೂದಲು ಹೊಳಪನ್ನು ಪಡೆದುಕೊಳ್ಳುತ್ತದೆ. ಇದರಲ್ಲಿ ವಿಟಮಿನ್ ಇ ಇದ್ದು ಇದು ನಿಮ್ಮ ಆರೋಗ್ಯಕ್ಕೆ ಉತ್ತಮ. ಜತೆಗೆ ಕೂದಲು ಕಾಂತಿಯುತವಾಗಿ ಬೆಳೆಯಲು ಸಹಾಯಕ ಎಂದು ಪೂಜಾ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:
Health Tips: ಸಾತ್ವಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು
Health Benefits: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆಲ್ಲಿಕಾಯಿ, ಶುಂಠಿ ಜ್ಯೂಸ್ ಕುಡಿಯಿರಿ