ಸಂಬಂಧವೆಂದರೆ ಹಾಗೆ ತುಸು ಮುನಿಸು ಹೆಚ್ಚು ಪ್ರೀತಿ, ಬಿಟ್ಟಿರಲಾರದ ಬಂಧ, ಆದರೂ ಕೆಲವೊಂದು ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡುವುದು ಸಹಜ. ಆದರೆ ಅದನ್ನೇ ಮುಂದುವರೆಸಿಕೊಂಡು ಹೋದರೆ ನಿಮ್ಮ ಸಂಬಂಧ (Relationship)ಗಟ್ಟಿಯಾಗಿರಲು ಸಾಧ್ಯವಿಲ್ಲ.
ಜೀವನ ಸುಂದವಾಗಿ ಇರಬೇಕು ಎಂದರೆ ಪ್ರೀತಿಯೆಂಬ ಮಾಯೆ ನಮ್ಮನ್ನು ಸುತ್ತುತ್ತಿರಬೇಕು. ನಿಜ, ಪ್ರೀತಿಗಾಗಿ ಮನುಷ್ಯ ಹಾತೊರೆಯುತ್ತಾನೆ. ನಮಗಾಗಿ ಒಂದು ಜೀವ ಇದೆ, ನಮ್ಮ ಎಲ್ಲಾ ಅಗತ್ಯತೆಗಳಿಗೆ ಆದ್ಯತೆಯನ್ನು ನೀಡಿ ರಕ್ಷಣೆಯ ಭಾವವನ್ನು ನೀಡುತ್ತದೆ ಎನ್ನುವ ನಂಬಿಕೆಯೇ ಜೀವಕ್ಕೊಂದು ಬೆಳಕು.
ಇಬ್ಬರಿಗೂ ಸಮನಾದ ಆದ್ಯತೆ ನೀಡಿ: ಇಬ್ಬರೂ ಒಂದೇ, ಇಬ್ಬರ ಭಾವನೆಗಳಿಗೂ ಒಂದೇ ರೀತಿಯ ಪ್ರಾಮುಖ್ಯತೆ ನೀಡಿದಾಗ ನಿಮ್ಮ ಸಂಬಂಧ ಹೆಚ್ಚು ಕಾಲ ಉಳಿಯಲು ಸಾಧ್ಯ. ಇಬ್ಬರ ಭಾವನೆಗಳನ್ನೂ ಗೌರವಿಸಬೇಕು. ಕೆಲಸದಲ್ಲಿ ಬ್ಯುಸಿ ಇರುವುದು ಸಾಮಾನ್ಯ, ಜತೆಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಹೌದು, ಆದರೂ ಬಿಡುವಿನ ವೇಳೆಯಲ್ಲಿ ಮನೆಯಿಂದ ಎಲ್ಲಾದರೂ ಹೋಗಿ ಸ್ವಲ್ಪ ಸಮಯವನ್ನು ನಿಮ್ಮವರ ಜತೆಯಲ್ಲಿ ಕಳೆಯಿರಿ.
ಸಂಬಂಧ ಕೇವಲ ಮೆಸೇಜ್ಗಷ್ಟೇ ಸೀಮಿತ: ಸಂಬಂಧ ಕೇವಲ ಮೆಸೇಜ್ಗಷ್ಟೇ ಸೀಮಿತವಾಗದಂತೆ ನೊಡಿಕೊಳ್ಳಿ, ಯಾವಾಗ ನಿಮ್ಮ ಸಂಬಂಧ ಸಕಾರಾತ್ಮಕವಾಗಿ ಇರುವುದಿಲ್ಲವೋ ಆಗ ನಿಮ್ಮ ಸಂಗಾತಿ ನಿಮ್ಮಿಂದ ತಪ್ಪಿಸಿಕೊಳ್ಳಲು ನಿಮ್ಮ ಜೊತೆ ಸಂವಹನ ನಡೆಸಲು ಮೆಸೇಜ್ ಮಾಡುತ್ತಾರೆ. ಆಗ ನೀವು ಎಚ್ಚೆತ್ತುಕೊಂಡು ಸಂಬಂಧವನ್ನು ಉಳಿಸಿಕೊಳ್ಳಲು ಮುಂದಾಗಬೇಕು.
ಒಬ್ಬರನ್ನೊಬ್ಬರು ನಿಂದಿಸಬೇಡಿ: ಸಂಬಂಧಗಳ ಹೊಸತರಲ್ಲಿ ನಿಂದನೆ ಎಂಬುದು ಇರುವುದಿಲ್ಲ.. ಜಗಳ ಆಡುವ ಪರಿಸ್ಥಿತಿ ಬಂದರೂ ತಾಳ್ಮೆ ಎಂಬುದು ಇರುತ್ತದೆ.. ಯಾವಾಗ ನಿಮ್ಮ ಸಂಗಾತಿ ನಿಮ್ಮ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಾರೋ ಆಗ ಅವರು ನಿಮ್ಮ ಜೊತೆಗೆ ಜಗಳ ಆಡುವ ಸಂದರ್ಭದಲ್ಲಿ ನಿಮ್ಮನ್ನ ವಯಕ್ತಿಕವಾಗಿ ಕೂಡ ನಿಂದನೆ ಮಾಡಬಹುದು..ಇದು ನಿಮ್ಮ ಸಂಬಂಧ ಹಾಳಾಗಿದೆ ಎಂದು ಸೂಚನೆ. ಹಾಗಾಗಿ ಒಬ್ಬರೊನ್ನಬ್ಬರು ನಿಂದಿಸಬೇಡಿ.
ಬೇರೆಯವರ ಭಾವನೆಗಳಿಗೆ ಸ್ಪಂದಿಸಿ: ಪ್ರತಿಯೊಂದು ವಿಷಯದಲ್ಲಿ ನಿಮ್ಮ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಿದ್ದ ಸಂಗಾತಿ ಇದ್ದಕ್ಕಿದ್ದಂತೆಯೇ ನಿಮ್ಮಿಂದ ಅಂತರ ಕಾಯ್ದುಕೊಂಡರೆ, ಹಾಗೂ ನಿಮ್ಮ ವಿಷಯಗಳಲ್ಲಿ ಹೆಚ್ಚು ಆಸಕ್ತಿ ತೋರಿಸದೆ ಇದ್ದರೆ, ನಿಮ್ಮ ಸಂಬಂಧದಲ್ಲಿ ಬಿರುಕು ಆರಂಭವಾಗಿದೆ ಎಂದರ್ಥ ಹೀಗಾಗಿ ಎಂದಿಗೂ ಇದಕ್ಕೆ ಆಸ್ಪದ ನೀಡಬೇಡಿ.
ಹಳೆಯದನ್ನು ಕೆದಕಿ ಜಗಳವಾಡಬೇಡಿ: ನೀವು ಹಿಂದೆ ಯಾವಾಗಲೋ ಮಾಡಿದ ತಪ್ಪನ್ನು ಇಟ್ಟುಕೊಂಡು ಪದೇಪದೇ ನಿಮ್ಮ ಮೇಲೆ ಜಗಳ ಆಡುವುದು.. ನಿಮ್ಮದಲ್ಲದ ತಪ್ಪುಗಳಿಗೆ ನಿಮ್ಮನ್ನ ಹೊಣೆಯಾಗಿಸುವುದು.. ಕ್ಷುಲ್ಲಕ ಕಾರಣವನ್ನು ಹುಡುಕಿ ಅದನ್ನ ಭೂತಕಾಲ ದೊಂದಿಗೆ ಹೋಲಿಕೆ ಮಾಡಿಕೊಂಡು ನಿಮ್ಮ ಸಂಗಾತಿ ಪದೇಪದೇ ನಿಮ್ಮ ಜೊತೆ ಜಗಳ ಹಾಡುತ್ತಿದ್ದರೆ ನಿಮ್ಮ ಸಂಬಂಧ ಅನಾರೋಗ್ಯಕರವಾಗಿದೆ ಎಂದು ಅರ್ಥ. ಹಾಗಾಗಿ ಯಾವುದೇ ಕಾರಣಕ್ಕೂ ಹಳೆಯ ವಿಷಯಗಳನ್ನು ತೆಗೆಯಲೇಬೇಡಿ.
ಕಾಂಪ್ಲಿಮೆಂಟ್ ಇರಲಿ: ಸಂಬಂಧಗಳು ಹಳೆಯದಾದಂತೆ ನಾವು ಸಂಗಾತಿಗೆ ಕಾಂಪ್ಲಿಮೆಂಟ್ ನೀಡುವುದನ್ನೇ ಮರೆತುಬಿಡುತ್ತೇವೆ. ಒಮ್ಮೆ ಅವರ ಬಗ್ಗೆ ಬೆಸ್ಟ್ ಕಾಂಪ್ಲಿಮೆಂಟ್ ಕೊಟ್ಟು ನೋಡಿ ಸಂಬಂಧ ಎಷ್ಟು ಬೇಗ ಸುಧಾರಿಸುತ್ತದೆ.
ಎಲ್ಲದಕ್ಕೂ ಬೇರೆಯವರನ್ನು ಹೊಣೆಯಾಗಿಸಬೇಡಿ: ಪ್ರತಿ ತಪ್ಪುಗಳಲ್ಲಿ ನಿಮ್ಮ ಸಂಗಾತಿ ನಿಮ್ಮನೆ ಹೊಣೆಯಾಗಿಸುತ್ತಿದ್ದರೆ, ಅವರು ನಿಮ್ಮಿಂದ ಅಂತರ ಕಾಯ್ದುಕೊಳ್ಳಲು ಬಯಸುತ್ತಿದ್ದಾರೆ, ನಿಮ್ಮ ಅಗತ್ಯತೆ ಇಲ್ಲ ಎಂದು ಅರ್ಥ ಹಾಗಾಗಿ ಎಲ್ಲದಕ್ಕೂ ಸಂಗಾತಿಯನ್ನು ಹೊಣೆಗಾರನನ್ನಅಗಿ ಮಾಡಬೇಡಿ.
ಫೋನ್ ಕರೆ ಅವಾಯ್ಡ್ ಮಾಡಬೇಡಿ: ಮೊದಲೆಲ್ಲಾ ನಿಮ್ಮ ಫೋನ್ ಬಂದ ತಕ್ಷಣ ಸ್ಪಂದನೆ ಮಾಡುತ್ತಿದ್ದ, ನಿಮ್ಮ ಪ್ರೇಮಿ ನಿಮ್ಮ ಜೊತೆ ಮಾತನಾಡಲು ಸಹ ಹಿಂದೆ-ಮುಂದೆ ಯೋಚನೆ ಮಾಡುತ್ತಿದ್ದಾರೆ, ನಿಮ್ಮ ಫೋನ್ ಕರೆಗಳನ್ನು ಸ್ವೀಕಾರ ಮಾಡಲು ಹಿಂದೇಟು ಹಾಕುತ್ತಾರೆ. ಈ ರೀತಿ ಮಾಡಲು ಅವಕಾಶ ಕೊಡಬೇಡಿ, ನೀವು ಕಚೇರಿಯಲ್ಲಿದ್ದರೆ ನೀವೇ ಪದೇ ಪದೇ ಕರೆ ಮಾಡಿ ಹೆಚ್ಚು ಹೊತ್ತು ಮಾತನಾಡಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ