ಸಾಮಾನ್ಯವಾಗಿ ಮನೆ ಹಾಗೂ ಸುತ್ತಮತ್ತಲಿನ ಪ್ರದೇಶಗಳಲ್ಲಿ ಸಣ್ಣ ಕ್ರಿಮಿ ಕೀಟಗಳು ಸಹಜವಾಗಿಯೇ ಕಂಡುಬರುತ್ತದೆ. ಕೀಟಗಳು ಕಂಡು ಬಂದಲ್ಲಿ ಅದನ್ನು ನಿರ್ಲಕ್ಷ್ಯಿಸಲು ಹೋಗದಿರಿ. ಕೆಲವೊಂದು ಕೀಟಗಳು ಸಾಮಾನ್ಯವಾಗಿದ್ದರೂ, ಕೆಲವೊಂದು ಕೀಟಗಳು ವಿಷಕಾರಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಇಂತಹ ಕೀಟಗಳು ನಿಮ್ಮ ಚರ್ಮವನ್ನು ಸ್ಪರ್ಶಿಸುವುದ್ದರಿಂದ ಚರ್ಮದ ಮೇಲೆ ಅಲರ್ಜಿಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ. ಸಾಮಾನ್ಯವಾಗಿ ಈ ಕಂದು ಬಣ್ಣದ ಕೀಟಗಳು ನಿಮ್ಮ ಮನೆಯ ಬಿರುಕು ಪ್ರದೇಶಗಳಲ್ಲಿ, ಹೂವಿನ ಗಿಡಗಳಲ್ಲಿ, ಹುಲ್ಲುಗಳಲ್ಲಿ ಕಂಡುಬರುವ ಕೀಟಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸದಿರಿ. ಇಂತಹ ಕೀಟಗಳು ಚಿಕ್ಕದಾಗಿದ್ದರೂ ವಿಷಕಾರಿಯಾಗಬಹುದು. ಆದ್ದರಿಂದ ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ.
ಕಂದು ಬಣ್ಣದ ವಿಷಕಾರಿ ಕೀಟ (Brown marmorated stink bug):
ಈ ಕೀಟವು ಸಾಮಾನ್ಯವಾಗಿ ಕಚ್ಚುವುದಿಲ್ಲ. ಆದರೆ ಈ ಕೀಟದಿಂದ ಬಿಡುಗಡೆಯಾಗುವ ದ್ರವ್ಯದಿಂದ ಆರೋಗ್ಯದ ಮೇಲೆ ಹಾನಿಯುಂಟು ಮಾಡುತ್ತದೆ. ಅಲರ್ಜಿಯ ಲಕ್ಷಣಗಳು ಸ್ರವಿಸುವ ಮೂಗು ಮುಂತಾದ ಚರ್ಮದ ಕಾಯಿಲೆಗೆ ಕಾರಣವಾಗುತ್ತದೆ.
ಸಣ್ಣ ಕಂದು ಕೀಟ:
ಈ ಕೀಟಗಳನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಸಾಮಾನ್ಯವಾಗಿ ಚಿಕ್ಕದಾಗಿರುತ್ತದೆ ಮತ್ತು ಕಂದು ಬಣ್ಣವನ್ನು ಹೊಂದಿರುತ್ತದೆ. ನೀವು ಕಾಡಿನ ಪ್ರದೇಶಗಳಲ್ಲಿ, ಹೊಲಗಳಲ್ಲಿ ಅಥವಾ ನಿಮ್ಮ ಮನೆಯ ಹೂವಿನ ಗಿಡಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಸಂಪೂರ್ಣವಾಗಿ ಬೆಳೆದಾಗ ಕೇವಲ 0.7 ಇಂಚು ಉದ್ದ ಬೆಳೆಯುತ್ತದೆ ಮತ್ತು ಆರು ಕಾಲುಗಳನ್ನು ಹೊಂದಿದೆ.
ಈ ಕೀಟವು ಚಿಕ್ಕದಾಗಿರುವಾಗ ಅಷ್ಟೋಂದು ಹಾನಿಕಾರಕವಲ್ಲ. ಈ ಕೀಟವು ಬೆಳೆಯುತ್ತಿದ್ದಂತೆ ರೆಕ್ಕೆಗಳನ್ನು ಹೊಂದಿರುವುದ್ದರಿಂದ ಇದು ಮನೆಯೊಳಗೆ ಬರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ನಿಮ್ಮ ಆಹಾರಗಳನ್ನು ಆದಷ್ಟು ಮುಚ್ಚಿಡಿ. ಯಾಕೆಂದರೆ ಇಂತಹ ಕೀಟಗಳು ನಿಮ್ಮ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಹೆಚ್ಚಿದೆ.
ಈ ವಿಷಕಾರಿ ಕೀಟವು 1998 ರಲ್ಲಿ ಮೊದಲ ಬಾರಿಗೆ ಅಮೇರಿಕಾದಲ್ಲಿ ಪತ್ತೆ ಹಚ್ಚಲಾಯಿತು ಎಂದು ಹೇಳಲಾಗುತ್ತದೆ. ಅತ್ಯಂತ ವಾಸನೆಯನ್ನು ಹೊಂದಿರುವ ಈ ವಿಷಕಾರಿ ಕೀಟವು ಕೊರಿಯಾ, ಚೀನಾ, ಜಪಾನ್ ಮತ್ತು ಏಷ್ಯಾದಲ್ಲಿ ಕಂಡುಬರುತ್ತದೆ.
ಈ ಕೀಟಗಳಿಂದ ಸಸ್ಯಗಳಿಗೆ ಯಾವುದೇ ಹಾನಿಕಾರಕವಲ್ಲ. ನೀವು ಯಾವುದೇ ರಾಸಾಯನಿಕವನ್ನು ಸಿಂಪಡಿಸಿದ ಗಿಡಗಳ ಎಲೆಗಳನ್ನು ಇದು ತಿನ್ನುವುದಿಲ್ಲ ಹಾಗೂ ಆ ಎಲೆಗಳ ಮೇಲೆ ಮೊಟ್ಟೆಯನ್ನು ಇಡುವುದಿಲ್ಲ. ಆದರೆ ನೀವು ಬೆಳೆಸಿದ ಯಾವುದೇ ಹಣ್ಣು ತರಕಾರಿಗಳ ಮೇಲೆ ಇದು ಚಲಿಸಿರುವುದ್ದರಿಂದ ಆದಷ್ಟು ಹಣ್ಣು ತರಕಾರಿಗಳನ್ನು ತೊಳೆದು ತಿನ್ನಿ.
ಇದನ್ನು ಓದಿ: ನಿಮ್ಮ ಮನೆಯಲ್ಲಿ ಜಿರಳೆ, ಇರುವೆಗಳ ಕಾಟವೇ? ಈ ಮನೆಮದ್ದುಗಳನ್ನು ಬಳಸಿ ಸುಲಭವಾಗಿ ಅವುಗಳನ್ನು ಓಡಿಸಿ
ಈ ಕೀಟಗಳು ನಿಮ್ಮ ಮನೆಯ ಸುತ್ತ ಮುತ್ತ ಕಂಡು ಬಂದಲ್ಲಿ ಕೀಟನಾಶಕಗಳನ್ನು ಬಳಸಬಹುದು. ಇಲ್ಲವಾದಲ್ಲಿ ಮನೆಯಲ್ಲಿಯೇ ಸುಲಭವಾಗಿ ಕೀಟ ನಿವಾರಕವನ್ನು ಬಳಸಿ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ಬಿಳಿ ಜೇಡಿಮಣ್ಣು, ಸೋಪ್ ನೀರು ಹಾಗೂ ನೀರು ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ಪ್ರೇ ಬಾಟಲಿಗೆ ಹಾಕಿ ಗಿಡಗಳ ಮೇಲೆ ಸಿಂಪಡಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:11 pm, Fri, 2 December 22