ಕೀಟಗಳು ಕಿವಿಯೊಳಗೆ ಹೊಕ್ಕರೆ ಹೀಗೆ ಮಾಡಿ

  ಕೆಲವೊಮ್ಮೆ ಕೀಟಗಳು ಕಿವಿಯ ತೂತಿನೊಳಗೆ ತೂರಿಕೊಂಡು ಆಳಕ್ಕೆ ಇಳಿದುಬಿಡುತ್ತವೆ. ಇದು ಒಳಭಾಗದಲ್ಲಿ ನಡೆದಾಡಿದಂತೆಲ್ಲಾ ಕಿವಿಯ ಸೂಕ್ಷ್ಮ ಅಂಗಗಳಿಗೆ ಕಚಗುಳಿಯಾಗುವಂತಾಗುವುದು, ಕೆಲವೊಮ್ಮೆ ಕೀಟಗಳ ಕಾಲಿನ ಮುಳ್ಳುಗಳು ಚುಚ್ಚುವುದು ಅಥವಾ ಕೀಟ ಕಚ್ಚುವ ಮೂಲಕ ಒಳಭಾಗದಲ್ಲಿ ಭಾರೀ ಉರಿಯಾಗುವುದು ಅಥವಾ ನೋವು ಕಾಣಿಸಿಕೊಳ್ಳುವ ಸಂಭವವೂ ಇದೆ. ವಿಶೇಷವಾಗಿ ಮಕ್ಕಳು ಹೊರಗೆ ಆಟವಾಡುವ ಸಮಯದಲ್ಲಿ ಈ ತೊಂದರೆಗೆ ಒಳಗಾಗುತ್ತಾರೆ. ಪ್ರತಿಯೊಬ್ಬರೂ ಜೀವಮಾನದಲ್ಲಿ ಕನಿಷ್ಠ ಒಮ್ಮೆಯಾದರೂ ಈ ಅನುಭವವನ್ನು ಪಡೆದೇ ಇರುತ್ತಾರೆ. ಕಿವಿಯ ಒಳ ಅಂಗಗಳು ಅತಿ ಸೂಕ್ಷ್ಮವಾಗಿದ್ದು ಅತ್ಯಂತ ದುರ್ಬಲವೂ […]

ಕೀಟಗಳು ಕಿವಿಯೊಳಗೆ ಹೊಕ್ಕರೆ ಹೀಗೆ ಮಾಡಿ
Follow us
ಸಾಧು ಶ್ರೀನಾಥ್​
|

Updated on:Sep 29, 2019 | 6:57 PM

ಕೆಲವೊಮ್ಮೆ ಕೀಟಗಳು ಕಿವಿಯ ತೂತಿನೊಳಗೆ ತೂರಿಕೊಂಡು ಆಳಕ್ಕೆ ಇಳಿದುಬಿಡುತ್ತವೆ. ಇದು ಒಳಭಾಗದಲ್ಲಿ ನಡೆದಾಡಿದಂತೆಲ್ಲಾ ಕಿವಿಯ ಸೂಕ್ಷ್ಮ ಅಂಗಗಳಿಗೆ ಕಚಗುಳಿಯಾಗುವಂತಾಗುವುದು, ಕೆಲವೊಮ್ಮೆ ಕೀಟಗಳ ಕಾಲಿನ ಮುಳ್ಳುಗಳು ಚುಚ್ಚುವುದು ಅಥವಾ ಕೀಟ ಕಚ್ಚುವ ಮೂಲಕ ಒಳಭಾಗದಲ್ಲಿ ಭಾರೀ ಉರಿಯಾಗುವುದು ಅಥವಾ ನೋವು ಕಾಣಿಸಿಕೊಳ್ಳುವ ಸಂಭವವೂ ಇದೆ. ವಿಶೇಷವಾಗಿ ಮಕ್ಕಳು ಹೊರಗೆ ಆಟವಾಡುವ ಸಮಯದಲ್ಲಿ ಈ ತೊಂದರೆಗೆ ಒಳಗಾಗುತ್ತಾರೆ. ಪ್ರತಿಯೊಬ್ಬರೂ ಜೀವಮಾನದಲ್ಲಿ ಕನಿಷ್ಠ ಒಮ್ಮೆಯಾದರೂ ಈ ಅನುಭವವನ್ನು ಪಡೆದೇ ಇರುತ್ತಾರೆ. ಕಿವಿಯ ಒಳ ಅಂಗಗಳು ಅತಿ ಸೂಕ್ಷ್ಮವಾಗಿದ್ದು ಅತ್ಯಂತ ದುರ್ಬಲವೂ ಆಗಿವೆ. ಆದ್ದರಿಂದ ಕಿವಿಯೊಳಗೆ ಕಡ್ಡಿಹಾಕಿ ಕೀಟವನ್ನು ಹೊರತೆಗೆಯುವ ಪ್ರಯತ್ನದಲ್ಲಿ ಈ ಸೂಕ್ಷ್ಮ ಅಂಗಗಳಿಗೆ ಘಾಸಿಯಾಗಬಹುದು.

ಕಿವಿ ಹೊಕ್ಕ ಕೀಟ ಹೊರಬರುವುದು ಹೇಗೆ? ಕೀಟ ಒಳಭಾಗದಲ್ಲಿ ನಡೆದಾಡುತ್ತಿದ್ದಂತೆಯೇ ಹೆಚ್ಚಿನವರು ತಲೆಕೆಟ್ಟಂತೆ ವರ್ತಿಸುತ್ತಾರೆ. ಆದರೆ ಕೊಂಚ ಸಾವಧಾನ ವಹಿಸಿ ಈ ಕೆಳಗಿನ ವಿಧಾನಗಳಲ್ಲೊಂದನ್ನು ಅನುಸರಿಸಿದರೆ ಉಪಾಯದಿಂದ ಕೀಟವನ್ನು ಹೊರತೆಗೆಯಬಹುದು. ಕೀಟ ಒಳಹೊಕ್ಕ ಬಳಿಕ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೇ ಕೆಲವು ತೊಟ್ಟು ಆಲಿವ್ ಎಣ್ಣೆ ಅಥವಾ ಮಗುವಿನ ಎಣ್ಣೆಯನ್ನು ಕಿವಿಯೊಳಗೆ ಒಂದೊಂದೇ ತೊಟ್ಟಾಗಿ ಬೀಳುವಂತೆ ಹಾಕಿ. ಎಣ್ಣೆಯಿಂದ ಕಿವಿಯ ತೂತು ಮುಚ್ಚಿದರೆ ಕೀಟಕ್ಕೆ ಉಸಿರಾಡಲು ಸಾಧ್ಯವಾಗದೇ ಎಣ್ಣೆಯೊಂದಿಗೇ ಹೊರಬರುತ್ತದೆ.

ಒಂದು ವೇಳೆ ಕಿವಿಯಲ್ಲಿ ಸೋಂಕು, ಸೋರುವುದು, ಕಿವಿನೋವು ಅಥವಾ ಇತರ ಯಾವುದಾದರೂ ತೊಂದರೆ ಇದ್ದರೆ ಕಿವಿಗೆ ಎಣ್ಣೆ ಬಿಡದಿರಿ. ಉಳಿದವರಿಗೆ ಎಣ್ಣೆಯನ್ನು ಕೊಂಚವೇ ಅಂದ್ರೆ ಉಗುರು ಬಿಸಿ ಮಾಡಿ ಬಿಟ್ಟರೆ ಉತ್ತಮ. ಒಂದು ಕಿವಿಸ್ವಚ್ಛಗೊಳಿಸುವ ಹತ್ತಿಸುತ್ತಿದ ಕಡ್ಡಿಯನ್ನು ಅಪ್ಪಟ ಆಲ್ಕೋಹಾಲ್ ದ್ರವದಲ್ಲಿ ಮುಳುಗಿಸಿ ಕಿವಿಯ ತೂತಿನ ಬಳಿ ಇರಿಸಿ. ಇದರ ದ್ರವ ಕಿವಿಯೊಳಗೆ ತೊಟ್ಟಿಕ್ಕುವಂತೆ ಮಾಡಿ. ಆಲ್ಕೋಹಾಲ್ ನ ಹಬೆ ಕಿವಿಯೊಳಗೆ ವ್ಯಾಪಿಸಿದಂತೆಯೇ ಕೀಟ ಅಲ್ಲಿಂದ ಹೊರಬರುತ್ತದೆ. ಅಲ್ಲದೇ ಒಳಭಾಗ ಸ್ವಚ್ಛವೂ ಆಗುತ್ತದೆ.

ಬೆಂಕಿಕಡ್ಡಿ, ಹೇರ್​ಪಿನ್ ಬೇಡ! ಕೆಲವೊಮ್ಮೆ ಕಿವಿಯೊಳಗಿನ ತುರಿಕೆ ತಾಳಲಾರದೇ ಕಡ್ಡಿಯನ್ನು ಕಿವಿಯೊಳಗೆ ಬಿಡುವ ತವಕವುಂಟಾಗುತ್ತದೆ. ಆದರೆ ಎಂದಿಗೂ ಕಡ್ಡಿಯನ್ನು ಅಥವಾ ಬೆಂಕಿಕಡ್ಡಿ, ಹೇರ್ ಪಿನ್ ಮೊದಲಾದ ಯಾವುದನ್ನೂ ಕಿವಿಯೊಳಗೆ ತೂರಿಸದಿರಿ. ಏಕೆಂದರೆ ಕಿವಿಯೊಳಗಿರುವ ಕೀಟಕ್ಕೆ ಈ ಕಡ್ಡಿ ಚುಚ್ಚಿದರೆ ಅದು ತನ್ನ ಪ್ರಾಣ ಉಳಿಸಿಕೊಳ್ಳಲು ಕೈಕಾಲುಗಳನ್ನು ಆಡಿಸಿ ಕಿವಿಯ ಸೂಕ್ಷ್ಮ ಅಂಗಗಳ ಮೇಲೆ ಒತ್ತುತ್ತಾ ಅಥವಾ ಕಚ್ಚಿ ಅಥವಾ ಮುಳ್ಳುಗಳನ್ನು ಚುಚ್ಚಿ ತನ್ನ ವಿಷವನ್ನು ಸ್ರವಿಸಬಹುದು. ಆದ್ದರಿಂದ ಕೀಟ ಹೊಕ್ಕಿರುವ ಕಿವಿಯೊಳಗೆ ಖಂಡಿತಾ ಏನನ್ನೂ ತೂರಿಸಕೂಡದು.

ಕೆಲವೊಮ್ಮೆ ಕೀಟದ ಮೀಸೆಯ ತುದಿ ಕಿವಿಯ ಹೊರಗೆ ಇಣುಕುತ್ತಿರುವಂತೆ ಕಾಣುತ್ತದೆ. ಇದನ್ನು ತೆಗೆಯಲು ಬೆರಳನ್ನು ತೂರಿಸಲು ಪ್ರಬಲ ಬಯಕೆಯುಂಟಾಗುತ್ತದೆ. ಆದರೆ ಇದನ್ನು ನಿವಾರಿಸಲು ಬೆರಳು ತೂರಿಸಿದರೆ ಕೀಟ ಒಳಗಿನ ಭಾಗಗಳಿಗೆ ಕಚ್ಚಬಹುದು. ಕೆಲವೊಮ್ಮೆ ಬೆಂಕಿಕಡ್ಡಿ ಅಥವಾ ಹೇರ್ ಪಿನ್ನುಗಳನ್ನು ಕಿವಿಯೊಳಗೆ ತೂರಿಸುವಾಗ ಕಿವಿಯೊಳಗಿನ ಮೇಣದ ಪದರ ಎದ್ದು ಬಂದು ಕಿವಿಯ ತೂತಿಗೆ ಅಡ್ಡಲಾಗಿ ಸಿಕ್ಕಿಕೊಳ್ಳಬಹುದು. ಇವು ಕೀಟವನ್ನು ಹೊರತೆಗೆಯಲು ಇನ್ನಷ್ಟು ಕಷ್ಟವಾಗಿಸಬಹುದು. ಅಲ್ಲದೇ ಮೇಣ ಎದ್ದುಬಂದ ಚರ್ಮದ ಭಾಗ ಈಗ ಯಾವುದೇ ರಕ್ಷಣೆಯಿಲ್ಲದೇ ಕೀಟದ ಸೂಕ್ಷ್ಮ ಮುಳ್ಳುಗಳಿಗೆ ಸುಲಭವಾಗಿ ಚುಚ್ಚಿಕೊಳ್ಳಲು ಸಾಧ್ಯವಾಗುವಂತಿದ್ದು ಇದರಿಂದ ಸೋಂಕು ಉಂಟಾಗಬಹುದು. ಇದು ಕೇಳುವ ಸಾಮರ್ಥ್ಯವನ್ನೇ ಉಡುಗಿಸಬಹುದು.

ತಕ್ಷಣ ವೈದ್ಯರನ್ನ ಭೇಟಿಯಾಗಿ: ಒಂದು ವೇಳೆ ಎಣ್ಣೆ ಬಿಟ್ಟರೂ ಕೀಟ ಹೊರಬರದೇ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಈ ಪ್ರಯತ್ನದಲ್ಲಿ ಯಾವುದೇ ತಪ್ಪಾದರೂ ಇದರ ಪರಿಣಾಮ ಕಿವಿ ಕೇಳುವ ಸಾಮರ್ಥ್ಯಕ್ಕೆ ಅಪಾಯವಾಗುವ ಕಾರಣ ಯಾವುದೇ ರೀತಿಯ ನಿರ್ಲಕ್ಷ್ಯ ಸಲ್ಲದು.  

Published On - 5:30 pm, Sun, 29 September 19

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ