ನವರಾತ್ರಿಯ ಮೊದಲ ದಿನ ಯಾವ ದೇವಿಯನ್ನ ಆರಾಧಿಸಬೇಕು?
ಇಂದಿನಿಂದ ಒಂಬತ್ತು ದಿನಗಳ ಕಾಲ ಎಲ್ಲೆಲ್ಲೂ ನವರಾತ್ರಿ ಸಂಭ್ರಮ. ಶಕ್ತಿದೇವತೆಯ ಆರಾಧನೆ. ದುರ್ಗಾ ಪೂಜೆ.. ಪಾರಾಯಣ.. ನಿತ್ಯ ನವದುರ್ಗೆಯರನ್ನು ಹಾಡುವ, ಕೊಂಡಾಡುವ ಈ ನವರಾತ್ರಿ, ದೇವಿ ಒಲುಮೆಗೆ ಪಾತ್ರರಾಗೋಕೆ ಸುಸಂದರ್ಭ. ನವರಾತ್ರಿ ಎಲ್ಲಾ ಜನರೂ ಆಚರಿಸುವ ಒಂದು ವಿಶಿಷ್ಟವಾದ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತೆ. 9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದು ಕರೆಯುತ್ತಾರೆ. ನವರಾತ್ರಿ ಒಂಬತ್ತು ರಾತ್ರಿಗಳ ಸಮೂಹ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿದೆ. 9 ದಿನಗಳ ಕಾಲ ಆದಿಶಕ್ತಿಯನ್ನು […]
ಇಂದಿನಿಂದ ಒಂಬತ್ತು ದಿನಗಳ ಕಾಲ ಎಲ್ಲೆಲ್ಲೂ ನವರಾತ್ರಿ ಸಂಭ್ರಮ. ಶಕ್ತಿದೇವತೆಯ ಆರಾಧನೆ. ದುರ್ಗಾ ಪೂಜೆ.. ಪಾರಾಯಣ.. ನಿತ್ಯ ನವದುರ್ಗೆಯರನ್ನು ಹಾಡುವ, ಕೊಂಡಾಡುವ ಈ ನವರಾತ್ರಿ, ದೇವಿ ಒಲುಮೆಗೆ ಪಾತ್ರರಾಗೋಕೆ ಸುಸಂದರ್ಭ. ನವರಾತ್ರಿ ಎಲ್ಲಾ ಜನರೂ ಆಚರಿಸುವ ಒಂದು ವಿಶಿಷ್ಟವಾದ ಹಬ್ಬ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತೆ. 9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದು ಕರೆಯುತ್ತಾರೆ. ನವರಾತ್ರಿ ಒಂಬತ್ತು ರಾತ್ರಿಗಳ ಸಮೂಹ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿದೆ. 9 ದಿನಗಳ ಕಾಲ ಆದಿಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತೆ. ದೇವಿಯ ರೂಪವಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿ ದೇವಿಯರನ್ನು ಒಂಬತ್ತು ದಿನಗಳ ಕಾಲ ಆರಾಧಿಸಲಾಗುತ್ತೆ. ದೇವಿಯ ಪರಮ ಪವಿತ್ರ 9 ಸ್ವರೂಪಗಳ ಆರಾಧನೆಯ ಪರ್ವವೇ ನವರಾತ್ರಿ.
ಮೊದಲ ದಿನ ಶೈಲಪುತ್ರಿ ಪೂಜೆ: ಶಾಸ್ತ್ರಗಳ ಪ್ರಕಾರ, ನವರಾತ್ರಿಯ ಒಂದೊಂದು ದಿನದ ಉಪಾಸನೆಗೂ ವಿಶೇಷ ಮಹತ್ವವಿದೆ. ನವರಾತ್ರಿಯ ಪ್ರಥಮ ದಿನ ದೇವಿಯ ಸ್ವರೂಪವಾದ ಶೈಲಪುತ್ರಿ ಪೂಜೆ ಮಾಡಲಾಗುತ್ತೆ. ಜಗಜ್ಜನನಿ ದುರ್ಗಾದೇವಿಯ ಮೊದಲ ಸ್ವರೂಪ ಶೈಲಪುತ್ರಿ. ಪರ್ವತರಾಜ ಹಿಮವಂತನ ಪುತ್ರಿಯಾದ್ದರಿಂದ ಈಕೆಯನ್ನು ಶೈಲಪುತ್ರಿ ಎನ್ನಲಾಗುತ್ತೆ. ಶೈಲಪುತ್ರಿಯ ರೂಪ ಅತ್ಯಂತ ಸುಂದರ. ಪಾರ್ವತಿದೇವಿಯ ಪ್ರತಿರೂಪವಾದ ಶೈಲಪುತ್ರಿ ವೃಷಭವಾಹನೆ. ಬಲಗೈಯಲ್ಲಿ ತ್ರಿಶೂಲ, ಎಡಗೈಯಲ್ಲಿ ಕಮಲವನ್ನು ಹಿಡಿದಿದ್ದಾಳೆ. ಸರಳ ವ್ಯಕ್ತಿತ್ವ, ಸೌಮ್ಯ ರೂಪ ಈಕೆಯದ್ದು. ಶಿವಪುರಾಣದ ಪ್ರಕಾರ, ಸತಿದೇವಿ ದಕ್ಷಪ್ರಜಾಪತಿಯ ಯಜ್ಞಕುಂಡಕ್ಕೆ ಹಾರಿ ಭಸ್ಮವಾಗ್ತಾಳೆ. ಸತಿ ದೇವಿಯೇ ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನಿಗೆ ಪುತ್ರಿಯಾಗಿ ಜನಿಸಿ, ಶೈಲಪುತ್ರಿಯಾದಳು. ನಂತರ ಶೈಲಪುತ್ರಿ ಕಠಿಣ ತಪಸ್ಸು ಮಾಡಿ ಶಿವನೊಂದಿಗೆ ವಿವಾಹವಾದಳು.
ಅಸುರರಿಂದ ತೊಂದರೆ ಅನುಭವಿಸುತ್ತಿದ್ದ, ದೇವಾನುದೇವತೆಗಳಿಗೆ ದುರ್ಗೆಯಾಗಿ ಅಭಯ ಹಸ್ತ ನೀಡಿದವಳೇ ಈ ಶೈಲಪುತ್ರಿ. ಶೈಲಪುತ್ರಿ ಅನಂತ ಫಲಗಳನ್ನು ಕರುಣಿಸುವ ದೇವಿ. ನವರಾತ್ರಿಯ ಮೊದಲ ದಿನ ಶ್ರದ್ಧಾ ಭಕ್ತಿಯಿಂದ ಶೈಲಪುತ್ರಿಯನ್ನು ಆರಾಧಿಸಿದ್ರೆ ದೇವಿ ಭಕ್ತರಿಗೆ ವಿಶೇಷ ಶಕ್ತಿಯನ್ನು ಕರುಣಿಸ್ತಾಳೆ ಎನ್ನಲಾಗುತ್ತೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಮಂತ್ರವನ್ನು ಜಪಿಸಿ, ದೇವಿಯ ಆರಾಧನೆ ಮಾಡಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ವೆ ಎಂಬ ನಂಬಿಕೆ ಇದೆ.
ಶೈಲಪುತ್ರಿ ಪೂಜಾ ಮಂತ್ರ
ವಂದೇ ವಾಂಛಿತಲಾಭಾಯ ಚಂದ್ರಾರ್ಧ ಕೃತಶೈಖರಾಮ್
ವೃಷರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್
ಶೈಲಪುತ್ರಿ ಪೂಜೆಯ ಫಲ
* ಶೈಲಪುತ್ರಿಯ ನಾಮಸ್ಮರಣೆ ಶಕ್ತಿದಾಯಕ
* ಕೋಮಲ ಚಿತ್ತದವರು ಬೆಟ್ಟದಷ್ಟು ಕಲ್ಲಾಗ್ತಾರೆ
* ದೇಹ ಪರ್ವತದಂತೆ ಸದೃಢಗೊಳ್ಳುತ್ತೆ
* ಕಠೋರ ಶಕ್ತಿಯನ್ನು ತಾಯಿ ಕರುಣಿಸ್ತಾಳೆ
* ಸಾಮಾನ್ಯ ವ್ಯಕ್ತಿಯೂ ಮಹಾಪುರುಷನಾಗ್ತಾನೆ
ಯೋಗಸಾಧನೆಗೆ ನವರಾತ್ರಿ ಪ್ರಶಸ್ತವಾದ ಸಮಯ. ಹೀಗಾಗೇ ಯೋಗಿಗಳು ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಆರಾಧನೆ ಮಾಡ್ತಾರೆ. ಆ ಮೂಲಕ ತಮ್ಮ ಮನವನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳ್ಳುವಂತೆ ಮಾಡ್ತಾರೆ. ಇದರಿಂದಲೇ ಅವರ ಯೋಗಸಾಧನೆ ಆರಂಭವಾಗುತ್ತೆ.
Published On - 4:07 pm, Sun, 29 September 19