Tips To Pick Muskmelon: ನೀವು ಖರೀದಿಸುವ ಕರ್ಬೂಜ ಹಣ್ಣು ಸಿಹಿ ಮತ್ತು ಮಾಗಿದೆಯೇ ಎಂದು ಈ ರೀತಿ ಕಂಡುಕೊಳ್ಳಿ‌

ಬೇಸಿಗೆಯ ಈ ಸಮಯದಲ್ಲಿ ಯಾವ ಹಣ್ಣಿನ ಅಂಗಡಿಯಲ್ಲಿ ನೋಡಿದ್ರೂ ಹೆಚ್ಚಾಗಿ ಕರ್ಬೂಜ ಮತ್ತು ಕಲ್ಲಂಗಡಿ ಹಣ್ಣುಗಳೇ ಕಾಣಸಿಗುತ್ತವೆ. ಈ ಸುಡು ಬೇಸಿಗೆಯಲ್ಲಿ ದೇಹ ತಂಪಾಗಿಸಲು ಜನ ಹೆಚ್ಚಾಗಿ ಈ ಹಣ್ಣನ್ನೇ ಖರೀದಿ ಮಾಡ್ತಾರೆ. ಹೀಗೆ ಆರಿಸಿ ತಂದ ಕರ್ಬೂಜ ಹಣ್ಣು ರಸಭರಿತವಾಗಿಲ್ಲ, ಸಿಹಿಯಾಗಿಲ್ಲ, ಮಾಗಿಲ್ಲ ಅಂತೆಲ್ಲಾ ಕೆಲವರು ಕಂಪ್ಲೇಂಟ್‌ ಮಾಡ್ತಾರೆ. ಹೀಗಿರುವಾಗ ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಸಿಹಿಯಾದ ಮತ್ತು ಮಾಗಿದ ಕರ್ಬೂಜ ಹಣ್ಣನ್ನು ಆಯ್ದುಕೊಳ್ಳಿ.

Tips To Pick Muskmelon: ನೀವು ಖರೀದಿಸುವ ಕರ್ಬೂಜ ಹಣ್ಣು ಸಿಹಿ ಮತ್ತು ಮಾಗಿದೆಯೇ ಎಂದು ಈ ರೀತಿ ಕಂಡುಕೊಳ್ಳಿ‌
ಕರ್ಬೂಜ ಹಣ್ಣು
Image Credit source: Getty Images
Updated By: ಅಕ್ಷಯ್​ ಪಲ್ಲಮಜಲು​​

Updated on: Apr 07, 2025 | 2:25 PM

ಈ ಉರಿ ಬೇಸಿಗೆಯಲ್ಲಿ (Summer) ದೇಹವನ್ನು (Body) ತಂಪಾಗಿರಿಸಲು ಜನ ಹಣ್ಣಿನ ಜ್ಯೂಸ್‌ (fruit juice), ಹಣ್ಣುಗಳ (fruits) ಸೇವನೆ ಮಾಡ್ತಾರೆ. ಕಿತ್ತಲೆ, ಕಲ್ಲಂಗಡಿ, ಕರ್ಬೂಜ, ಮಾವು ಇತ್ಯಾದಿ ಹಣ್ಣುಗಳನ್ನು ಖರೀದಿ ಮಾಡುತ್ತಾರೆ. ಅದರಲ್ಲೂ ಈ ಸುಡು ಬೇಸಿಗೆಯಲ್ಲಂತೂ ಕಲ್ಲಂಗಡಿ (watermelon) ಮತ್ತು ಕರ್ಬೂಜ (muskmelon) ಹಣ್ಣಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್.‌ ರೇಟ್‌ ಜಾಸ್ತಿ ಇದ್ರೂ ಜನ ಇದನ್ನೇ ಯಥೇಚ್ಛವಾಗಿ ಖರೀದಿ ಮಾಡ್ತಾರೆ. ಕಲ್ಲಂಗಡಿ ಹಣ್ಣಿನಂತೆ, ಕರ್ಬೂಜ ಹಣ್ಣಿನಲ್ಲಿಯೂ ಶೇ. 90 ರಿಂದ 92% ರಷ್ಟು ನೀರಿನಾಂಶ ಇರುವ ಕಾರಣ ಜ್ಯೂಸ್‌ ಮಾಡಲು ಈ ಹಣ್ಣನ್ನೇ ಆಯ್ಕೆ ಮಾಡ್ತಾರೆ. ಆದ್ರೆ ಮಾರುಕಟ್ಟೆಯಿಂದ ತರುವ ಕರ್ಬೂಜ ಹಣ್ಣು ಒಂಚೂರು ಸಿಹಿಯಾಗಿಲ್ಲ ಕಣ್ರೀ, ಸಿಹಿಯಾದ ಕಲ್ಲಂಗಡಿ ಹಣ್ಣನ್ನು ಬೇಕಾದ್ರೂ ಆರಿಸಿ ತರಬಹುದು, ಆದ್ರೆ ಈ ಮಾಗಿದ (ripe) ಮತ್ತು ರುಚಿಯಾದ, ಸಿಹಿಯಾದ (sweet) ಕರ್ಬೂಜವನ್ನು ಆಯ್ಕೆ ಮಾಡುವುದೇ ಕಷ್ಟ ಅಂತ ಹಲವರು ಗೊಣಗುತ್ತಾರೆ. ಇದಕ್ಕೆಲ್ಲಾ ಟೆನ್ಷನ್‌ ಯಾಕೆ ಸುಲಭವಾಗಿ ಸಿಹಿಯಾದ ಕರ್ಬೂಜ ಹಣ್ಣನ್ನು ಆಯ್ಕೆ ಮಾಡಬಹುದು ಎಂದು ಮಾಸ್ಟರ್ ಶೆಫ್ ಪಂಕಜ್ ಭದೌರಿಯಾ (Master chef Pankaj Bhadouria) ಒಂದಷ್ಟು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಮಾಸ್ಟರ್ ಶೆಫ್ ಪಂಕಜ್ ಭದೌರಿಯಾ (masterchefpankajbhadouria) ಎಂಬವರು ಮಾಗಿದ ಹಾಗೂ ಸಿಹಿಯಾದ ಕರ್ಬೂಜ ಹಣ್ಣನ್ನು ಆರಿಸಿ ತರುವುದು ಹೇಗೆ ಎಂಬ ಟಿಪ್ಸ್‌ನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಪ್ರಮುಖ ಸಲಹೆಗಳನ್ನು ಪಾಲಿಸುವ ಮೂಲಕ ಸಿಹಿಯಾಗಿರುವ ಹಾಗೂ ನೈಸರ್ಗಿಕವಾಗಿ ಮಾಗಿದ ಕರ್ಬೂಜ ಹಣ್ಣನ್ನು ಆಯ್ದುಕೊಳ್ಳಿ ಎಂದು ಹೇಳಿದ್ದಾರೆ.

ಮಾಗಿದ ಮತ್ತು ಸಿಹಿ ಕರ್ಬೂಜವನ್ನು ಆಯ್ಕೆ ಮಾಡುವುದು ಹೇಗೆ:

  • ಮೊದಲನೆಯದಾಗಿ, ನೀವು ಕರ್ಬೂಜ ಹಣ್ಣನ್ನು ಖರೀದಿ ಮಾಡ್ತೀರಾ ಎಂದಾದ್ರೆ, ಆ ಹಣ್ಣಿನ ಬುಡದಿಂದ ವಾಸನೆಯನ್ನು ಗ್ರಹಿಸಿ, ಅದೇನಾದರೂ ಹೂವಿನಂತೆ ಅಥವಾ ಸಿಹಿಯಾದ ಫ್ರೂಟ್‌ ಪರಿಮಳವನ್ನು ಹೊಂದಿದ್ದರೆ, ಆ ಕರ್ಬೂಜ ಸಂಪೂರ್ಣವಾಗಿ ಸಿಹಿಯಾಗಿದೆ ಎಂದರ್ಥ.
  • ನಿಮ್ಮ ಬೆರಳಿನಿಂದ ಕರ್ಬೂಜವನ್ನು ಒತ್ತಿ ನೋಡುವ ಮೂಲಕ ಅದು ಮಾಗಿದ ಹಣ್ಣೇ ಎಂದು ಪರಿಶೀಲಿಸಬಹುದು. ನೀವು ಬೆರಳಿನಿಂದ ಒತ್ತಿದಾದ ಹಣ್ಣು ಗಟ್ಟಿಯಾಗಿರದೆ ಸ್ವಲ್ಪ ಮೃದುತ್ವವನ್ನು ಹೊಂದಿದ್ದರೆ, ಅದು ಸಂಪೂರ್ಣವಾಗಿ ಹಣ್ಣಾಗಿದೆ ಎಂದರ್ಥ. ಒಂದು ವೇಳೆ ಹಣ್ಣನ್ನು ಒತ್ತಿ ನೋಡುವ ಸಂದರ್ಭದಲ್ಲಿ ಅತಿಯಾದ ಮೃದುತ್ವವನ್ನು ಹೊಂದಿದ್ದರೆ, ಅದು ಒಳಗಿನಿಂದ ಅತಿಯಾಗಿ ಹಣ್ಣಾದ ಅಥವಾ ಕೊಳೆತು ಹೋಗಿರುವ ಸಾಧ್ಯತೆ ಇರುತ್ತದೆ ಅಂತಹ ಖರೀದಿಸಬೇಡಿ.
  • ಇನ್ನೊಂದು ಏನಂದ್ರೆ ಕರ್ಬೂಜ ಖರೀದಿಸುವಾಗ ಅದರ ಮೇಲಿರುವ ಬಲೆ ಬಲೆಯ ಆಕಾರದ ಗುರುತುಗಳನ್ನು ಗಮನಿಸಿ, ಆ ಬಲೆಯ ಗುರುತುಗಳು ಆಳವಾಗಿ ಮತ್ತು ಹೆಚ್ಚು ಏಕರೂಪವಾಗಿದ್ದರೆ, ಅಂತಹ ಹಣ್ಣು ಸಂಪೂರ್ಣವಾಗಿ ಮಾಗಿದೆ ಎಂದರ್ಥ.
  • ಕರ್ಬೂಜ ಖರೀದಿಸುವಾಗ, ಬಣ್ಣವನ್ನು ನೋಡುವುದು ಕೂಡಾ ಮುಖ್ಯ. ನೀವು ಯಾವಾಗಲೂ ಗೋಲ್ಡನ್‌ ಹಳದಿ ಬಣ್ಣಕ್ಕೆ ತಿರುಗಿದ ಕರ್ಬೂಜ ಹಣ್ಣನ್ನೇ ಆಯ್ಕೆ ಮಾಡಿ. ಏಕೆಂದರೆ ಈ ಬಣ್ಣದ ಹಣ್ಣು ಸಂಪೂರ್ಣವಾಗಿ ಮಾಗಿರುತ್ತದೆ ಜೊತೆಗೆ ಸಿಹಿಯಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ