ಮನೆಯಲ್ಲೇ ತಯಾರಿಸಿ ಅಲೋವೆರಾ ಎಣ್ಣೆ; ಇದರ ಪ್ರಯೋಜನಗಳೇನು?

| Updated By: sandhya thejappa

Updated on: Sep 18, 2021 | 5:05 PM

Aloe Vera Oil: ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸಲು ಅಲೋವೆರಾವನ್ನು ಹಲವು ವಿಧಗಳಲ್ಲಿ ಬಳಸಬಹುದು. ಜೊತೆಗೆ ಅಲೋವೆರಾ ಎಣ್ಣೆಯನ್ನು ಕೂಡ ಬಳಸಬಹುದು.

ಮನೆಯಲ್ಲೇ ತಯಾರಿಸಿ ಅಲೋವೆರಾ ಎಣ್ಣೆ; ಇದರ ಪ್ರಯೋಜನಗಳೇನು?
ಅಲೋವೆರಾ
Follow us on

ಲೋಳೆಸರ ಅಥವಾ ಅಲೋವೆರಾ (Aloe Vera) ಹತ್ತು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಮುಖದ ಕಾಂತಿ ಹೆಚ್ಚಿಸಲು ಇದನ್ನು ಹೆಚ್ಚು ಬಳಲಾಗುತ್ತದೆ. ಜೊತೆಗೆ ತಲೆ ಕೂದಲಿನ ಆರೈಕೆಗೂ ಇದನ್ನು ಬಳಸುತ್ತಾರೆ. ತಲೆ ಕೂದಲಿಗೆ ಸಂಬಂಧಿಸಿದ ಕೆಲ ಸಮಸ್ಯೆಗಳನ್ನು ನಿವಾರಿಸುವ ಗುಣಗಳನ್ನು ಅಲೋವೆರಾ ಹೊಂದಿದೆ. ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸಲು ಅಲೋವೆರಾವನ್ನು ಹಲವು ವಿಧಗಳಲ್ಲಿ ಬಳಸಬಹುದು. ಜೊತೆಗೆ ಅಲೋವೆರಾ ಎಣ್ಣೆಯನ್ನು ಕೂಡ ಬಳಸಬಹುದು. ಅಲೋವೆರಾ ಎಣ್ಣೆಯನ್ನು ಹಚ್ಚುವುದರಿಂದ ಕೂದಲಿಗೆ ಪೋಷಣೆ ಸಿಗುತ್ತದೆ. ಮತ್ತು ಕೂದಲಿನ ಬೆಳವಣಿಗೆ ಕೂಡ ಉತ್ತಮವಾಗಿರುತ್ತದೆ. ಅಲೋವೆರಾ ಎಣ್ಣೆಯನ್ನು ತಯಾರಿಸುವುದು ಹೇಗೆ ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಮನೆಯಲ್ಲಿ ಅಲೋವೆರಾ ಎಣ್ಣೆಯನ್ನು ತಯಾರಿಸಿ
ಈ ಎಣ್ಣೆಯನ್ನು ತಯಾರಿಸಲು ಅಲೋವೆರಾ ಜೆಲ್ ಮತ್ತು ತೆಂಗಿನ ಎಣ್ಣೆ ಬೇಕಾಗುತ್ತದೆ. ಮೊದಲು ಅಲೋವೆರಾ ಗಿಡವನ್ನು ತೆಗೆದುಕೊಂಡು ಅಲೋವೆರಾ ಜೆಲ್ ತೆಗೆಯಿರಿ. ಮಿಕ್ಸರ್ ಗ್ರೈಂಡರ್​ನಲ್ಲಿ ಅಲೋವೆರಾ ತಿರುಳನ್ನು ಹಾಕಿ. ನಂತರ ಅಲೋವೆರಾವನ್ನು ತೆಗೆದುಕೊಂಡು ಅದನ್ನು ಪಕ್ಕಕ್ಕೆ ಇರಿಸಿ. ಬಾಣಲೆಯಲ್ಲಿ ತೆಂಗಿನ ಎಣ್ಣೆ ಮತ್ತು ಅಲೋವೆರಾ ಹಾಕಿ. ತೈಲ ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತದೆ. ಎಣ್ಣೆಯನ್ನು ತಣ್ಣಗಾಗಲು ಬಿಡಿ ಮತ್ತು ನಂತರ ಫಿಲ್ಟರ್ ಮಾಡಿದರೆ ಅಲೋವೆರಾ ಎಣ್ಣೆ ಸಿದ್ಧವಾಗುತ್ತದೆ.

ಅಲೋವೆರಾ ಎಣ್ಣೆಯನ್ನು ಬಳಸುವುದು ಹೇಗೆ
ತಲೆ ಕೂದಲಿನ ಮಧ್ಯದಲ್ಲಿ ಭಾಗ ಮಾಡಿ ಎಣ್ಣೆಯನ್ನು ಹಚ್ಚಬೇಕು. ತಲೆ ನೆತ್ತಿ ಎಣ್ಣೆಯನ್ನು ಹೀರಿಕೊಳ್ಳುವಂತೆ ನಿಧಾನವಾಗಿ ಮಸಾಜ್ ಮಾಡಿ. ನೀವು ಇದನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸಬಹುದು. 30 ನಿಮಿಷಗಳ ಕಾಲ ಎಣ್ಣೆಯನ್ನು ಇರಿಸಿ ನಂತರ ತೊಳೆಯಿರಿ.

ಅಲೋವೆರಾ ಎಣ್ಣೆಯ ಪ್ರಯೋಜನಗಳು
* ಕೂದಲು ಉದುರುವುದು ಕಡಿಮೆಯಾಗುತ್ತದೆ
ಸ್ನಾನ ಮಾಡುವಾಗ ಅಥವಾ ತಲೆ ಬಾಚುವಾಗ ತಲೆಯಲ್ಲಿರುವ ಎಲ್ಲ ಕೂದಲು ಉದುರುತ್ತಿದೆ ಅಂತ ಒಮ್ಮೊಮ್ಮೆ ಭಾಸವಾಗುತ್ತದೆ. ತಲೆ ಕೂದಲು ಉದುರುತ್ತಿದ್ದರೆ ಚಿಂತೆ ಬಿಡಿ. ಅಲೋವೆರಾದಿಂದ ತಯಾರಾದ ಎಣ್ಣೆಯನ್ನು ಬಳಸಿ.

* ಕೂದಲು ಉದ್ದವಾಗುತ್ತದೆ
ಉದ್ದ ಕೂದಲೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಕೂದಲು ಉದ್ದವಾಗಬೇಕೆಂದು ಮಹಿಳೆಯರು ಪರದಾಡುತ್ತಾರೆ. ಹೀಗಾಗಿ ಕೂದಲು ಬೇಗ ಬೇಗ ಉದ್ದವಾಗಬೇಕಾದರೆ ಅಲೋವೆರಾ ಎಣ್ಣೆಯನ್ನು ವಾರಕ್ಕೆ ಎರಡು ಬಾರಿ ಬಳಸಿ.

* ತಲೆ ಹೊಟ್ಟು ನಿವಾರಣೆ
ತಲೆಯಲ್ಲಿ ಹೊಟ್ಟಿದ್ದರೆ ಕೂದಲು ಉದುರುವುದು ಹೆಚ್ಚಾಗುತ್ತದೆ. ಹೀಗಾಗಿ ಇದರ ಬಗ್ಗೆ ಹೆಚ್ಚು ಗಮನವಿರಬೇಕು. ತಲೆಯಲ್ಲಿ ಹೊಟ್ಟಾದರೆ ಕೂದಲಿನ ಬೆಳವಣಿಗೆ ಮೇಲೆ ಹೊಡೆತ ಬೀಳುತ್ತದೆ. ತಲೆ ಹೊಟ್ಟು ನಿವಾರಣೆಯಾಗಬೇಕಾದರೆ ಅಲೋವೆರಾ ಎಣ್ಣೆಯನ್ನು ಬಳಸಿ.

ಇದನ್ನೂ ಓದಿ

Health Tips: ನಿಮ್ಮ ಪಾದಗಳು ಆರೋಗ್ಯವಾಗಿರಲು ಈ ಕೆಲವು ಸಲಹೆಗಳು ನಿಮಗಾಗಿ

Health Tips: ಫ್ರಿಡ್ಜ್​ನಲ್ಲಿ ಹಣ್ಣುಗಳನ್ನಿಟ್ಟು ತಿನ್ನುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

(How to prepare Aloe Vera oil and its uses)