Egg Side Effect: ಪ್ರತಿದಿನ ಮೊಟ್ಟೆ ಸೇವಿಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ಎಚ್ಚರ ವಹಿಸಿ

TV9 Digital Desk

| Edited By: preethi shettigar

Updated on: Sep 18, 2021 | 9:33 AM

ಪ್ರತಿದಿನ ಮೊಟ್ಟೆಗಳನ್ನು ತಿನ್ನಲು ಬಯಸಿದರೆ ಅದರ ಅಡ್ಡಪರಿಣಾಮಗಳ ಬಗ್ಗೆ ತಿಳಿಯಲು ಮರೆಯದಿರಿ. ಏಕೆಂದರೆ ಅತಿಯಾದ ಮೊಟ್ಟೆ ಸೇವನೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

Egg Side Effect: ಪ್ರತಿದಿನ ಮೊಟ್ಟೆ ಸೇವಿಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ಎಚ್ಚರ ವಹಿಸಿ
ಸಾಂದರ್ಭಿಕ ಚಿತ್ರ

ಮೊಟ್ಟೆ ದೇಹಕ್ಕೆ ಬಹಳ ಮುಖ್ಯವಾದ ಎಲ್ಲಾ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದರೆ ಅತಿಯಾಗಿ ಇದನ್ನು ತಿನ್ನುವುದರಿಂದ ಅಡ್ಡಪರಿಣಾಮಗಳೂ (Side effect) ಇವೆ. ಹೀಗಾಗಿ ಪ್ರತಿದಿನ ಮೊಟ್ಟೆಗಳನ್ನು ತಿನ್ನಲು ಬಯಸಿದರೆ ಅದರ ಅಡ್ಡಪರಿಣಾಮಗಳ ಬಗ್ಗೆ ತಿಳಿಯಲು ಮರೆಯದಿರಿ. ಏಕೆಂದರೆ ಅತಿಯಾದ ಮೊಟ್ಟೆ (Egg) ಸೇವನೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

1. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆ ಮೊಟ್ಟೆಯ ಬಿಳಿಭಾಗವು ಕಡಿಮೆ ಕೊಬ್ಬು ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಕೆಲವರಿಗೆ ಮೊಟ್ಟೆಯ ಬಿಳಿಭಾಗಕ್ಕೆ ಸಂಬಂಧಪಟ್ಟಂತೆ ಅಲರ್ಜಿ ಇರುತ್ತದೆ. ಇಂತಹ ಸ್ಥಿತಿಯು ಚರ್ಮದ ದದ್ದು, ಊತ, ಕೆಂಪಾಗುವುದು, ಮರಗಟ್ಟುವಿಕೆ, ಅತಿಸಾರ ಮತ್ತು ತುರಿಕೆಗೆ ಕಾರಣವಾಗಬಹುದು. ಅಲರ್ಜಿ ಸಮಸ್ಯೆ ಇರುವವರು ಮೊಟ್ಟೆಗಳನ್ನು ಅತಿಯಾಗಿ ಸೇವಿಸಬಾರದು ಎಂದು ವೈದ್ಯರು ಸೂಚಿಸಿದ್ದಾರೆ.

2. ಮೂತ್ರಪಿಂಡದ ಸಮಸ್ಯೆ ಮೊಟ್ಟೆಯ ಬಿಳಿಭಾಗವು ಬಹಳಷ್ಟು ಪ್ರೋಟೀನ್ ಅನ್ನು ಹೊಂದಿರುತ್ತದೆ. ಹೀಗಾಗಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಇದು ತುಂಬಾ ಹಾನಿಕಾರಕವಾಗಿದೆ. ವಾಸ್ತವವಾಗಿ, ಮೂತ್ರಪಿಂಡದ ಸಮಸ್ಯೆಗಳಿರುವ ಜನರು ಕಡಿಮೆ ಮಟ್ಟದ ಜಿಎಫ್‌ಆರ್ (ಮೂತ್ರಪಿಂಡಗಳನ್ನು ಶೋಧಿಸುವ ದ್ರವ) ಹೊಂದಿರುತ್ತಾರೆ. ಮೊಟ್ಟೆಯ ಬಿಳಿ ಮತ್ತಷ್ಟು ಜಿಎಫ್‌ಆರ್ ಅನ್ನು ಕಡಿಮೆ ಮಾಡುತ್ತದೆ. ಇದು ಕಿಡ್ನಿ ರೋಗಿಗಳಿಗೆ ಸಮಸ್ಯೆ ಉಲ್ಬಣಗೊಳಿಸುತ್ತದೆ.

3. ಸ್ನಾಯು ನೋವು ಉಂಟು ಮಾಡುತ್ತದೆ ಮೊಟ್ಟೆಯ ಬಿಳಿ ಭಾಗದಲ್ಲಿ ಅಲ್ಬುಮಿನ್ ಇರುತ್ತದೆ. ಇದು ಬಯೋಟಿನ್ ಅನ್ನು ಹೀರಿಕೊಳ್ಳುವಲ್ಲಿ ದೇಹಕ್ಕೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಸ್ನಾಯು ನೋವು, ಚರ್ಮದ ಸಮಸ್ಯೆಗಳು, ಕೂದಲು ಉದುರುವುದು ಇತ್ಯಾದಿಗಳಿಗೆ ಕೂಡ ಕಾರಣವಾಗಬಹುದು.

4. ಹೃದಯ ಸಂಬಂಧಿ ಸಮಸ್ಯೆ ಮೊಟ್ಟೆಯ ಹಳದಿ ಲೋಳೆಯಲ್ಲಿ ಅಧಿಕ ಕೊಲೆಸ್ಟ್ರಾಲ್ ಇರುತ್ತದೆ. ದಿನಕ್ಕೆ ಎರಡಕ್ಕಿಂತ ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು. ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಜನರು ಮೊಟ್ಟೆ ಸೇವನೆಯನ್ನು ಕಡಿಮೆ ಮಾಡಬೇಕು.

5. ಮಧುಮೇಹಿ ರೋಗಿಗಳಿಗೆ ಅಪಾಯ ಮೊಟ್ಟೆಯ ಹಳದಿ ಲೋಳೆಯು ಮಧುಮೇಹಿ ರೋಗಿಗಳಿಗೆ ಅಪಾಯವಾಗಿದೆ. ಹೀಗಾಗಿ ದಿನಕ್ಕೆ ಒಂದಕ್ಕಿಂತ ಹೆಚ್ಚು ಮೊಟ್ಟೆಗಳನ್ನು ತಿನ್ನಬಾರದೆಂದು ವೈದ್ಯರು ಸೂಚಿಸಿದ್ದಾರೆ.

ಇದನ್ನೂ ಓದಿ: Mosambi Juice Benefits: ಮೂಸಂಬಿ ಜ್ಯೂಸ್​ ಆರೋಗ್ಯಕ್ಕೆ ಉತ್ತಮ; ವಾರಕ್ಕೆ ಎರಡು ಬಾರಿಯಾದರೂ ಮೂಸಂಬಿ ಜ್ಯೂಸ್​ ಸವಿಯಿರಿ

Beetroot Juice: ಬೀಟ್​ರೂಟ್​​ ಜ್ಯೂಸ್​ ಕುಡಿಯುವುದರಿಂದಾಗುವ ಅನೇಕ ಆರೋಗ್ಯಕರ ಬದಲಾವಣೆಗಳ ಬಗ್ಗೆ ಗಮನಹರಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada