ನೀವು ನಿಮ್ಮ ಸಂಗಾತಿಯೊಂದಿಗೆ ಆಗಾಗ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ, ಆಗ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ.
ಏಕೆಂದರೆ ಸದಾ ಕಚೇರಿಯ ಕೆಲಸವನ್ನೇ ತಲೆಯಲ್ಲಿಟ್ಟುಕೊಂಡರೆ ನಿಮ್ಮವರನ್ನು ಕ್ರಮೇಣವಾಗಿ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಿಮ್ಮವರಿಗಾಗಿ ನೀವು ಕೆಲ ಸಮಯವನ್ನು ಮೀಸಲಿಡಲೇಬೇಕು.
ಹಾಗಾದರೆ ನಿಮ್ಮ ಸಂಗಾತಿ ಜತೆಗೆ ನೀವು ಹೇಗೆ ಸಮಯ ಕಳೆಬಹುದು, ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ದಿನಸಿ ಸಾಮಾನುಗಳನ್ನು ಖರೀದಿಸಲು ಒಟ್ಟಿಗೆ ತೆರಳಿ, ಕನಿಷ್ಠ ಒಂದು ಹೊತ್ತಾದರೂ ಒಟ್ಟಿಗೆ ಕುಳಿತು ಊಟ ಮಾಡಿ, ನಿತ್ಯ ಒಂದರ್ಧ ಗಂಟೆಯಾದರೂ ಜತೆಗೆ ಕುಳಿತು ಮಾತನಾಡಿ.
ಅಡುಗೆ ಮನೆಯಲ್ಲಿ ನಿಮ್ಮ ಸಂಗಾತಿಗೆ ಸ್ವಲ್ಪ ಸಹಾಯ ಮಾಡಿ, ಅವರನ್ನು ಲಾಂಗ್ ಡ್ರೈವ್ಗೆ ಕರೆದುಕೊಂಡು ಹೋಗಿ.
ಮೊಬೈಲ್ ದೂರವಿಟ್ಟು ಸಂಗಾತಿಯೊಂದಿಗೆ ಮಾತನಾಡಿ
ಸದಾ ಮೊಬೈಲ್ನಲ್ಲಿಯೇ ಮುಳುಗಿಕೊಂಡಿರಬೇಡಿ, ಮೊಬೈಲ್ ಅನ್ನು ಬದಿಗಿಟ್ಟು ಸಂಗಾತಿ ಜತೆಗೆ ಕೆಲ ಸಮಯ ಮಾತನಾಡುವುದರಿಂದ ಪ್ರೀತಿ ಮತ್ತಷ್ಟು ಹೆಚ್ಚುತ್ತದೆ.
ಯಾವುದಾದರೂ ಗೇಮ್ಗಳನ್ನು ಆಡಿ
ಕೇರಮ್, ವೀಡಿಯೋ ಗೇಮ್ಗಳು, ಶೆಟಲ್, ಪಗಡೆ ಹೀಗೆ ನಿಮಗೆ ಯಾವುದಿಷ್ಟವೋ ಆ ಆಟಕ್ಕಾಗಿ ನಿತ್ಯ ಕೆಲ ಸಮಯವನ್ನು ಮೀಸಲಿಡಿ.
ಒಟ್ಟಿಗೆ ಯೋಗ ಮಾಡಿ
ಒಟ್ಟಿಗೆ ಯೋಗ ಮಾಡುವುದು, ಬೈಕಿಂಗ್ ಮಾಡುವುದು, ನೃತ್ಯ ಅಥವಾ ಪೇಂಟಿಂಗ್ ಪಾಠಗಳಿಗೆ ದಾಖಲಾಗುವುದು ಇತ್ಯಾದಿ ಯಾವುದಾದರೂ ಆಗಿರಬಹುದು. ಒಟ್ಟಿಗೆ ಸಮಯ ಕಳೆಯುವುದು ನಿಮ್ಮ ಉದ್ದೇಶವಾಗಿರಲಿ.
ನಿಮ್ಮ ಭವಿಷ್ಯದ ಬಗ್ಗೆ ಕುಳಿತು ಮಾತನಾಡಿ
ಹಣಕಾಸಿನ ಯೋಜನೆಯಾಗಿರಬಹುದು ಅಥವಾ ಕುಟುಂಬದ ಕುರಿತ ಆಲೋಚನೆಯಾಗಿರಬಹುದು, ಒಟ್ಟಿಗೆ ನಿರ್ಧಾರವನ್ನು ತೆಗೆದುಕೊಳ್ಳಿ.
ಆಕರ್ಷಕ ಉಡುಗೊರೆಗಳು
ಸಣ್ಣ ಸಣ್ಣ ಉಡುಗೊರೆಗಳು ಕೂಡ ಸಂತೋಷವನ್ನು ಇಮ್ಮಡಿಗೊಳಿಸುತ್ತವೆ. ಹೀಗಾಗಿ ಆಗಾಗ ನಿಮ್ಮ ಸಂಗಾತಿಗೆ ಉಡುಗೊರೆಯನ್ನು ನೀಡುತ್ತಿರಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ