Domestic Violence: ಕೌಟುಂಬಿಕ ಕಲಹ, ಹಿಂಸಾಚಾರವು ಮಕ್ಕಳ ಮನಸ್ಸಿನ ಮೇಲೆ ಹೇಗೆಲ್ಲಾ ಪರಿಣಾಮ ಬೀರಬಲ್ಲದು?
ಕುಟುಂಬದಲ್ಲಿ ಏನೇ ಸಮಸ್ಯೆ, ಮನಸ್ಥಾಪಗಳಿದ್ದರೂ ದೊಡ್ಡವರ ನಡುವೆ ಇರಲಿ, ಮಕ್ಕಳೆದುರು ಜಗಳ ಮಾಡುವುದಾಗಿರಲಿ, ಹೊಡೆದಾಟವಾಗಿರಲಿ ಮಾಡಿದ್ದಲ್ಲಿ ಅದು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
ಕುಟುಂಬದಲ್ಲಿ ಏನೇ ಸಮಸ್ಯೆ, ಮನಸ್ಥಾಪಗಳಿದ್ದರೂ ದೊಡ್ಡವರ ನಡುವೆ ಇರಲಿ, ಮಕ್ಕಳೆದುರು ಜಗಳ ಮಾಡುವುದಾಗಿರಲಿ, ಹೊಡೆದಾಟವಾಗಿರಲಿ ಮಾಡಿದ್ದಲ್ಲಿ ಅದು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಕೌಟುಂಬಿಕ ಕಲಹ ಅಥವಾ ಹಿಂಸಾಚಾರವು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಹಾಗೆಯೇ ಮಕ್ಕಳನ್ನು ದೀರ್ಘಕಾಲದ ಆಘಾತಕ್ಕೆ ದೂಡುತ್ತದೆ.
ಮಗುವಿನ ಮೇಲೆ ದೀರ್ಘಕಾಲದ ಪರಿಣಾಮ ಒಂದೊಮ್ಮೆ ನೀವು ಮಕ್ಕಳೆದುರು ನಿತ್ಯ ಜಗಳವಾಡುತ್ತಿದ್ದರೆ ಅದು ಮಕ್ಕಳ ಮೇಲೆ ದೀರ್ಘಕಾಲದ ಪರಿಣಾಮವನ್ನು ಉಂಟು ಮಾಡುತ್ತದೆ. ಹಾಗೆಯೇ ಮಕ್ಕಳಲ್ಲಿ ಏಕಾಗ್ರತೆ ಕೊರತೆ, ಕೋಪ ಇವೆಲ್ಲವೂ ಜಾಸ್ತಿಯಾಗುತ್ತದೆ. ಸುಮಾರು 10-12 ವರ್ಷಗಳ ಕಾಲ ಈ ರೀತಿ ಕೂಟುಂಬಿಕ ದೌರ್ಜನ್ಯವನ್ನು ನೋಡುತ್ತಾ ಬಂದಿರುವ ಮಕ್ಕಳಲ್ಲಿ ಪಿಟಿಎಸ್ಡಿ ಸಮಸ್ಯೆಯುಂಟಾಗಬಹುದು. ಹಾಗೆಯೇ ಮಕ್ಕಳಲ್ಲಿ ತಾವು ಸುರಕ್ಷಿತವಾಗಿಲ್ಲ ಎಂಬ ಭಾವ ಉಂಟಾಗುತ್ತದೆ.
ಮಕ್ಕಳ ನಿತ್ಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು ಮಕ್ಕಳು ನಿತ್ಯವೂ ಮನೆಯಲ್ಲಿ ನಡೆಯುತ್ತಿರುವ ಕಲಹ, ಮನಸ್ತಾಪವನ್ನು ವೀಕ್ಷಿಸುತ್ತಿರುತ್ತಾರೆ ಇದು ಅವರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗೆಯೇ ಆತಂಕ, ಒತ್ತಡದಿಂದಾಗಿ ಶಾಲೆಗೆ ಹೋಗಲು ಕೂಡ ಹಿಂಜರಿಯುತ್ತಾರೆ.
ಹಲವು ರೀತಿಯ ಪರಿಣಾಮಗಳು ಕೌಟುಂಬಿಕ ಕಲಹಗಳು ಮಕ್ಕಳ ಮೇಲೆ ಹಲವು ರೀತಿಯ ಪರಿಣಾಮವನ್ನು ಬೀರುತ್ತದೆ. ಶಾರೀರಿಕವಾಗಿ, ಮಾನಸಿಕವಾಗಿ ಪರಿಣಾಮ ಬೀರುತ್ತದೆ.
ನಿಮ್ಮ ಮಗುವನ್ನು ರಕ್ಷಿಸುವುದು ಹೇಗೆ? ಮೊದಲನೆಯದಾಗಿ ಮಗುವಿಗೆ ತಾನು ಸುರಕ್ಷಿತವಾಗಿದ್ದೇನೆ ಎಂಬ ಭಾವನೆ ಮೂಡುವಂತೆ ಮಾಡಿ. ಆಗ ಮಾತ್ರ ನಿಮ್ಮ ಮಗುವೂ ಸುರಕ್ಷಿತವಾಗಿರುತ್ತದೆ. ನಿಮ್ಮ ಮಾನಸಿಕ ಸ್ಥಿರತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಿ. ಕೆಟ್ಟ ನಡವಳಿಕೆಗಳ ಬಗ್ಗೆ ಅವರಿಗೆ ಶಿಕ್ಷಣ ನೀಡಿ ಮತ್ತು ಆರೋಗ್ಯಕರ ಸಂವಹನ ಹೇಗಿರಬೇಕು ಎಂಬುದನ್ನು ತಿಳಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ