ಇಂದಿನ ಕಾಲದಲ್ಲಿ ವ್ಯಕ್ತಿಯ ಜೀವಿತಾವಧಿ 70 ವರ್ಷಗಳು. ಆದರೆ ಪಾಕಿಸ್ತಾನದಲ್ಲಿರುವ ಹುಂಜಾ (Hunza Community) ಎಂಬ ಸಮುದಾಯದ ಜನರು 120 ರಿಂದ 150 ವರ್ಷಗಳ ಕಾಲ ಬದುಕುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಈ ಸಮಯದಾಯದ ಜನರು 70 ವರ್ಷಗಳವರೆಗೆ ಯವ್ವನರಂತೆ ಕಾಣುತ್ತಾರೆ, ಅಷ್ಟೇ ಅಲ್ಲದೆ, ಮಹಿಳೆಯರು 65 ವರ್ಷ ವಯಸ್ಸಿನಲ್ಲೂ ಮಕ್ಕಳಿಗೆ ಜನ್ಮ ನೀಡುತ್ತಾರೆ. ಅರೆ, ಈ ಸಮುದಾಯದ ರಹಸ್ಯವಾದರೂ ಏನು ಅಂತಿರಾ? ಇಲ್ಲಿದೆ ನೋಡಿ ಮಾಹಿತಿ.
150 ವರ್ಷಗಳ ಕಾಲ ಬದುಕುವ ಹುಂಜಾ ಸಮುದಾಯದ ಜನರ ದೊಡ್ಡ ರಹಸ್ಯವೆಂದರೆ, ಈ ಜನರು ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿಲ್ಲ ಮತ್ತು ವೃದ್ಧಾಪ್ಯವು ಅವರನ್ನೂ ಕಾಡುವುದಿಲ್ಲ. ಇದಲ್ಲದೆ, ಈ ಸಮುದಾಯದ ಮಹಿಳೆಯರು ತುಂಬಾ ಸುಂದರವಾಗಿರುತ್ತಾರೆ. ಅವರು ಸಾಮಾನ್ಯ ಮನುಷ್ಯರಿಗೆ ಹೋಲಿಸಿದರೆ ದೀರ್ಘಕಾಲದ ವರೆಗೆ ಯವ್ವನರಾಗಿರುತ್ತಾರೆ. ಇದಕ್ಕೆಲ್ಲ ಕಾರಣ ಅವರ ಜೀವನ ಪದ್ಧತಿ.
ವಾಸ್ತವವಾಗಿ, 1984 ರಲ್ಲಿ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಅಧಿಕಾರಿಗಳು ಅಬ್ದುಲ್ ಮೊಬಾಟ್ ಎಂಬ ಪ್ರಯಾಣಿಕ 1832 ರಲ್ಲಿ ಜನಿಸಿರುವುದನ್ನು ಕಂಡುಕೊಂಡರು. ಮೊದಲಿಗೆ ಇದು ತಾಂತ್ರಿಕ ದೋಷ ಎಂದು ಅವರು ಭಾವಿಸಿದ್ದರು. ಹೀಗಾಗಿ ಸಂಪೂರ್ಣ ತನಿಖೆ ನಡೆಸಿದಾಗ ಅಬ್ದುಲ್ ಅವರ ವಯಸ್ಸು 152 ವರ್ಷಗಳು ಎಂದು ತಿಳಿದುಬಂದಿದೆ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಅಷ್ಟಕ್ಕು ಈ ಅಬ್ದುಲ್ ಪಾಕಿಸ್ತಾನದ ಹುಂಜಾ ಸಮುದಾಯಕ್ಕೆ ಸೇರಿದವರಾಗಿದ್ದರು.
ಇದನ್ನೂ ಓದಿ: ಸುಗಂಧ ಹೆಚ್ಚಾಗಿರುವ ಸಾಬೂನು ಬಳಸುತ್ತೀರಾ? ಹಾಗದರೆ ಸೊಳ್ಳೆಗಳಿಗೆ ನೀವೇ ಇಷ್ಟ!
ಈ ಸಮುದಾಯವು ಪಾಕಿಸ್ತಾನದ ಕಾರಕೋರಂ ಪರ್ವತ ಪ್ರದೇಶದ ಹುಂಜಾ ಕಣಿವೆಯಲ್ಲಿ ವಾಸಿಸುತ್ತಿದೆ. ಇದನ್ನು ಹಂಜ್‌ಕುಟಾಸ್ ಅಥವಾ ಹುಂಜಾ ಎಂದು ಕರೆಯಲಾಗುತ್ತದೆ. ಅವರ ಜನಸಂಖ್ಯೆಯು ತುಂಬಾ ಚಿಕ್ಕದಾಗಿದ್ದರೂ ವಿಶ್ವದಲ್ಲೇ ಅತಿ ಹೆಚ್ಚು ಜೀವಿತಾವಧಿಯನ್ನು ಹೊಂದಿದ್ದಾರೆ. ಅತ್ಯಂತ ಆರೋಗ್ಯಕರ, ಅತ್ಯಂತ ಸಮೃದ್ಧ ಹಾಗೂ ಸಂತೋಷದ ಸಮುದಾಯ ಎಂದೂ ಕರೆಯಲಾಗುತ್ತದೆ. ಇಲ್ಲಿಯವರೆಗೆ ಈ ಸಮುದಾಯದ ಯಾವುದೇ ವ್ಯಕ್ತಿಗೆ ಕ್ಯಾನ್ಸರ್ ಬಂದಿಲ್ಲ ಎಂದು ಹೇಳಲಾಗುತ್ತದೆ.
ಹುಂಜಾ ಸಮುದಾಯದ ದೀರ್ಘಾಯುಷ್ಯದ ಹಿಂದೆ ಏನಾದರೂ ಪವಾಡವಿರಬಹುದು ಎಂದು ನೀವು ಭಾವಿಸುತ್ತಿದ್ದರೆ, ಅದು ತಪ್ಪು. ವಾಸ್ತವವಾಗಿ, ಈ ಜನರು ತಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಆರೋಗ್ಯವಾಗಿರುತ್ತಾರೆ. ಅವರ ಆಯುಷ್ಯವೂ ದೀರ್ಘವಾಗಿರಲು ಇದೇ ಕಾರಣ. ಅಖ್ರೋಟ್ ಮತ್ತು ಜರ್ದಾಳುಗಳನ್ನು ಅತಿಯಾಗಿ ಸೇವಿಸುವುದರಿಂದ ಈ ಸಮಯದಾಯದ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುವುದಿಲ್ಲ.
ಹುಂಜಾ ಸಮುದಾಯದ ಜನರು ವರ್ಷದಲ್ಲಿ 2 ರಿಂದ 3 ತಿಂಗಳು ಆಹಾರ ಸೇವಿಸುವುದಿಲ್ಲ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಅವರು ಪಾನೀಯ ಮಾತ್ರ ಕುಡಿಯುತ್ತಾರೆ. ಅವರ ಜೀವನಶೈಲಿಯು ದೀರ್ಘ ನಡಿಗೆ ಮತ್ತು ಹಣ್ಣುಗಳು, ಹಸಿ ತರಕಾರಿಗಳು, ಬೀಜಗಳು, ಹಾಲು ಮತ್ತು ಮೊಟ್ಟೆಗಳ ಆಹಾರಕ್ರಮವನ್ನು ಒಳಗೊಂಡಿದೆ. ಈ ಜನರು 70 ವರ್ಷ ವಯಸ್ಸಿನಲ್ಲೂ ಯುವಕರಾಗಿ ಕಾಣಲು ಮತ್ತು 150 ವರ್ಷಗಳವರೆಗೆ ಬದುಕಲು ಇದು ಕಾರಣವಾಗಿದೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ