ಇತ್ತೀಚೆಗಿನ ದಿನಗಳಲ್ಲಿ ಐಸ್ ವಾಟರ್ ಬಾತ್ ಎನ್ನುವುದು ಟ್ರೆಂಡ್ ಆಗುತ್ತಿದೆ. ಸೆಲೆಬ್ರಿಟಿಗಳು, ಕ್ರಿಕೆಟ್ ಪಟುಗಳು ಐಸ್ ವಾಟರ್ ಸ್ನಾನ ಮಾಡುತ್ತಿದ್ದಾರೆ. ಅದಲ್ಲದೇ, ಐಸ್ ವಾಟರ್ ಸ್ನಾನವನ್ನು ಹಲವರು ಚಾಲೆಂಜ್ ಆಗಿಯೂ ಸ್ವೀಕರಿಸುತ್ತಿದ್ದಾರೆ. ಐಸ್ ವಾಟರ್ನಲ್ಲಿ 10ರಿಂದ 15 ನಿಮಿಷ ಕುಳಿತುಕೊಳ್ಳುವ ಮೂಲಕ ಇದೊಂದು ಥೆರಪಿಯಾಗಿದೆ. ಐಸ್ ನೀರಿರುವ ಟಬ್ನಲ್ಲಿ ತಲೆಯನ್ನು ಮಾತ್ರ ಮೇಲೆತ್ತಿಕೊಂಡು ಸಂಪೂರ್ಣವಾಗಿ ದೇಹವನ್ನು ಮುಳುಗಿಸಿ ಕುಳಿತುಕೊಳ್ಳುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಅಧಿಕವಾಗಿದೆ.
* ಸ್ನಾಯುಗಳ ನೋವನ್ನು ನಿವಾರಿಸುತ್ತದೆ: ದೀರ್ಘಕಾಲದ ವ್ಯಾಯಾಮದ ನಂತರದಲ್ಲಿ ಐಸ್ ವಾಟರ್ ಸ್ನಾನವು ಬಹಳಷ್ಟು ಪ್ರಯೋಜನಕಾರಿಯಾಗಿದೆ. ವ್ಯಾಯಾಮದ ನಂತರ ವ್ಯಕ್ತಿಯು ಸ್ನಾಯುಗಳಲ್ಲಿ ಅನುಭವಿಸುವ ಕೆಲವು ಊತ ಮತ್ತು ನೋವನ್ನು ಶಮನ ಮಾಡುತ್ತದೆ.
* ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ : ದೈಹಿಕವಾಗಿ ಶ್ರಮ ವಹಿಸಿ ಕೆಲಸ ಮಾಡುವುದರಿಂದ ದೇಹದ ಉಷ್ಣತೆಯೂ ಸಹಜವಾಗಿ ಹೆಚ್ಚಾಗುತ್ತದೆ. ಹೀಗಾದಾಗ ಐಸ್ ನೀರಿನಲ್ಲಿ ಸ್ನಾನವನ್ನು ಮಾಡುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಏಕಾಗ್ರತೆಯನ್ನು ಹೆಚ್ಚಿಸುತ್ತದೆ : ವೆಬ್‌ಮ್‌ಡಿ ವರದಿಯ ಪ್ರಕಾರ, ಮಾನಸಿಕ ಆರೋಗ್ಯಕ್ಕೆ ಐಸ್ ಬಾತ್ ತುಂಬಾ ಪ್ರಯೋಜನಕಾರಿಯಾಗಿದೆ. ಅದಲ್ಲದೇ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಭೂ ಗರ್ಭದ ಸ್ಫೋಟ, ಜನರ ಜೀವಕ್ಕೆ ಆಪತ್ತು ಖಚಿತ!
* ಉರಿಯೂತವನ್ನು ಕಡಿಮೆ ಮಾಡುತ್ತದೆ : ತಣ್ಣೀರು ದೇಹದಲ್ಲಿನ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ಇದು ದೇಹದಲ್ಲಿನ ಊತ ಹಾಗೂ ಉರಿಯೂತವನ್ನು ನಿವಾರಿಸುತ್ತದೆ.
* ಉತ್ತಮ ನಿದ್ರೆಗೆ ಸಹಕಾರಿ : ಕೆಲವು ಸಂಶೋಧನೆಗಳ ಪ್ರಕಾರ, ಐಸ್ ವಾಟರ್ ಬಾತ್ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಈ ರೀತಿಯ ಸ್ನಾನದಿಂದ ಆಯಾಸವನ್ನು ಅನುಭವಿಸುವ ಪ್ರಮಾಣವು ಕಡಿಮೆಯಾಗುತ್ತದೆ.
* ರೋಗನಿರೋಧಕ ಶಕ್ತಿಯು ಹೆಚ್ಚಳ : ತಣ್ಣನೆಯ ನೀರಿನಲ್ಲಿ ಮುಳುಗಿ ಸ್ನಾನ ಮಾಡುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ