ಈ ಗುಣಗಳು ನಿಮ್ಮಲ್ಲಿದ್ದರೆ, ಎಲ್ಲರೂ ನಿಮ್ಮತ್ತ ಆಕರ್ಷಿತರಾಗುತ್ತಾರಂತೆ

ಎಲ್ಲರೂ ನಿಮ್ಮನ್ನು ಇಷ್ಟಪಡಲೇಬೇಕು ಎಂಬ ನಿಯಮವಿಲ್ಲ. ಹೀಗಿದ್ದರೂ ಕೂಡ ಮನಸ್ಸು ನನ್ನನ್ನು ಎಲ್ಲರೂ ನೆಚ್ಚಿಕೊಳ್ಳಬೇಕು. ಸುತ್ತಮುತ್ತ ಇರುವವರೆಲ್ಲಾ ನನ್ನನ್ನು ಇಷ್ಟಪಡಬೇಕು ಎಂದು ಬಯಸುತ್ತದೆ. ನಿಮಗೂ ಕೂಡಾ ಇದೇ ರೀತಿಯ ಬಯಕೆ ಇದ್ಯಾ? ಹಾಗಿದ್ರೆ ಈ ಒಂದಷ್ಟು ಗುಣಗಳನ್ನು ಅಳವಡಿಸಿಕೊಳ್ಳಿ. ಖಂಡಿತವಾಗಿಯೂ ಸುತ್ತಮುತ್ತಲಿನ ಜನ ಆಯಸ್ಕಾಂತದಂತೆ ನಿಮ್ಮತ್ತ ಆಕರ್ಷಿತರಾಗುತ್ತಾರೆ.

ಈ ಗುಣಗಳು ನಿಮ್ಮಲ್ಲಿದ್ದರೆ, ಎಲ್ಲರೂ ನಿಮ್ಮತ್ತ ಆಕರ್ಷಿತರಾಗುತ್ತಾರಂತೆ
ಸಾಂದರ್ಭಿಕ ಚಿತ್ರ
Image Credit source: freepik

Updated on: Oct 05, 2025 | 6:18 PM

ಸುತ್ತಮುತ್ತಲಿರುವ ಜನರು ನಮ್ಮನ್ನು ಇಷ್ಟಪಡುತ್ತಿದ್ದಾರೆ ಎಂಬ ವಿಚಾರವನ್ನು ಕೇಳುವುದೇ ಒಂದು ರೀತಿಯ ಖುಷಿ ಅಲ್ವಾ. ಪ್ರತಿಯೊಬ್ಬರೂ ಸಹ ನಾವು ನಮ್ಮ ಸುತ್ತಮುತ್ತಲಿನ ಜನರಿಗೆ ಇಷ್ಟವಾಗಬೇಕು ಎಂದು ಬಯಸುತ್ತಾರೆ. ಆದ್ರೆ ಎಲ್ಲರೂ ನಮ್ಮನ್ನು ಇಷ್ಟಪಡುವುದು ಕಷ್ಟಸಾಧ್ಯ. ನಮ್ಮಲ್ಲಿ ಆಕರ್ಷಕ ಗುಣಗಳಿದ್ದರೆ  (attractive personality) ಮಾತ್ರ ಜನ ನಮ್ಮತ್ತ ಆಯಸ್ಕಾಂತದಂತೆ ಆಕರ್ಷಿತರಾಗುತ್ತಾರೆ. ನಮ್ಮನ್ನು ಯಾರು ಇಷ್ಟಪಡಲ್ಲ ಎಂಬ ಅಂಶ ಮಾನಸಿಕವಾಗಿ ನಮ್ಮನ್ನು ಕುಗ್ಗಿಸುತ್ತದೆ. ನಿಮ್ಮನ್ನೂ ಎಲ್ಲರು ಇಷ್ಟಪಡ್ಬೇಕು, ಎಲ್ಲರೂ ನಿಮ್ಮತ್ತ ಆಕರ್ಷಿತರಾಗ್ಬೇಕು ಎಂಬ ಬಯಕೆ ನಿಮಗೂ ಇದ್ಯಾ? ಹಾಗಿದ್ರೆ ಈ ಗುಣಗಳನ್ನು ನೀವು ಅಳವಡಿಸಿಕೊಳ್ಳಬೇಕಂತೆ. ಇದರಿಂದ ಖಂಡಿತವಾಗಿಯೂ ಖಂಡಿತವಾಗಿಯೂ ಸುತ್ತಮುತ್ತಲಿನ ಜನ ಆಯಸ್ಕಾಂತದಂತೆ ನಿಮ್ಮತ್ತ ಆಕರ್ಷಿತರಾಗುತ್ತಾರೆ.

ಈ ಗುಣಗಳಿದ್ದರೆ ಜನ ನಿಮ್ಮನ್ನು ಇಷ್ಟಪಡ್ತಾರೆ:

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು: ಅನೇಕ ಜನರು ಮಾಡುವ ತಪ್ಪು ಎಂದರೆ, ಯಾರಾದ್ರೂ ಸಹಾಯ ಕೇಳಿದ್ರೆ ಉತ್ಸಾಹದಲ್ಲಿ ಭರವಸೆಗಳನ್ನು ನೀಡುತ್ತಾರೆ. ನಂತರ ಕೊಟ್ಟ ಮಾತನ್ನು ಹಗುರವಾಗಿ ತೆಗೆದುಕೊಂಡು ಇದನ್ನು ಮತ್ತೆ ಮಾಡಿದರೆ ಆಯ್ತು ಎಂದು ಉಡಾಫೆಯ ಮಾತುಗಳನ್ನಾಡುತ್ತಾರೆ. ಇದು ಖಂಡಿತವಾಗಿಯೂ ನಿಮ್ಮ ಮೇಲಿನ ಗೌರವವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಕೆಲಸದ ಸ್ಥಳದಲ್ಲಾಗಿರಲಿ ಅಥವಾ ವೈಯಕ್ತಿಕ ಜೀವನದಲ್ಲಾಗಿರಲಿ ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಲಿಯಿರಿ. ಭರವಸೆಯನ್ನು ಈಡೇರಿಸುವ ನಿಮ್ಮ ಗುಣ ನಿಮ್ಮ ಮೌಲ್ಯವನ್ನು ಹೆಚ್ಚಿಸುತ್ತದೆ ಮತ್ತು ಇದು ನಿಮ್ಮತ್ತ ಸುತ್ತಮುತ್ತಲಿನ ಜನ ಆಕರ್ಷಿತರಾಗುವಂತೆ ಮಾಡುತ್ತದೆ.

ತಪ್ಪುಗಳನ್ನು ಒಪ್ಪಿಕೊಳ್ಳುವುದು: ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಆದರೆ ಎಲ್ಲರೂ ತಾವು ಮಾಡುವ ತಪ್ಪುಗಳನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಮತ್ತೂ ಕೆಲವೊಬ್ಬರು ತಮ್ಮ ತಪ್ಪುಗಳನ್ನು ಇತರರ ಮೇಲೆ ಹೇರಲು ಪ್ರಯತ್ನಿಸುತ್ತಾರೆ. ಆದರೆ ಇದು ಸರಿಯಲ್ಲ.  ನೀವು ನಿಮ್ಮ  ತಪ್ಪಿಗೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಅದನ್ನು ಒಪ್ಪಿಕೊಂಡರೆ, ಅದು ನಿಮ್ಮ ಮೇಲಿನ ಗೌರವವನ್ನು ಹೆಚ್ಚು ಮಾಡುತ್ತದೆ. ಈ ಗುಣದಿಂದ ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ.

ಇದನ್ನೂ ಓದಿ
ಹೆಂಡತಿಯಾದವಳು ತನ್ನ ಗಂಡನಿಂದ ಈ ವಿಷಯಗಳನ್ನು ಎಂದಿಗೂ ಮರೆ ಮಾಡಬಾರದು
ಯಶಸ್ಸು ಗಳಿಸಲು ಪಾಲಿಸಬೇಕಾದ ನಿಯಮಗಳಿವು
ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಈ ಗುಣಗಳನ್ನು ತ್ಯಜಿಸಿ
ಈ ಮೂರು ಮಾರ್ಗಗಳ ಮೂಲಕ ಗಳಿಸಿದ ಹಣ ಎಂದಿಗೂ ಶಾಶ್ವತವಲ್ಲ

ಬೆಂಬಲ ನೀಡುವುದು: ಎಲ್ಲರನ್ನೂ ಬೆಂಬಲಿಸುವ ಗುಣ ನಿಮ್ಮಲ್ಲಿದ್ದರೆ ಜನ ನಿಮ್ಮತ್ತ ಆಕರ್ಷಿತರಾಗುತ್ತಾರೆ. ನಿಮ್ಮ ಸುತ್ತಮುತ್ತಲಿನ ಜನರ ಸರಿ ತಪ್ಪುಗಳನ್ನು ತಿದ್ದಿ, ಜೀವನದಲ್ಲಿ ಮುನ್ನಡೆಯಲು, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸರಿಯಾದ ಬೆಂಬಲವನ್ನು ನೀಡುವಂತಹದ್ದನ್ನು ಮಾಡಿ. ಈ ಗುಣ ನಿಮ್ಮಲ್ಲಿದ್ದರೆ ಖಂಡಿತವಾಗಿಯೂ ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ.

ಜನರೊಂದಿಗೆ ಸಂಪರ್ಕ ಸಾಧಿಸುವುದು: ಸದಾ ಜನರೊಂದಿಗೆ ಸಂಪರ್ಕದಲ್ಲಿರಿ. ಅಂದ್ರೆ ಫೋನ್‌ ಮಾಡುತ್ತಲೋ ಅಥವಾ ಮೆಸೇಜ್‌ ಮಾಡುತ್ತಾ ಅವರ ಕಷ್ಟ ಸುಖ, ಜೀವನದ ಕನಸು, ಗುರಿಗಳ ಬಗ್ಗೆ ವಿಚಾರಿಸುತ್ತಿರಿ. ಎಲ್ಲರ ಬಗ್ಗೆ ಕೇರ್‌ ಮಾಡುವ ಈ ಗುಣ ನಿಮ್ಮಲ್ಲಿದ್ದರೆ ಜನ ನಿಮ್ಮತ್ತ ಆಯಾಸ್ಕಾಂತದಂತೆ ಆಕರ್ಷಿತರಾಗುತ್ತಾರೆ.

ಇದನ್ನೂ ಓದಿ: ಹೆಂಡತಿಯಾದವಳು ತನ್ನ ಗಂಡನಿಂದ ವಿಷಯಗಳನ್ನು ಎಂದಿಗೂ ಮರೆ ಮಾಡಬಾರದು

ಸರಿಯಾಗಿ ಪ್ರತಿಕ್ರಿಯೆ ನೀಡುವುದು:  ಯಾರಾದರೂ ಏನಾದರೂ ಮಾಡಿದಾಗ ಅಥವಾ ಕೇಳಿದಾಗ ಪ್ರತಿಕ್ರಿಯೆ ನೀಡಬೇಕಾಗುತ್ತದೆ, ಆಗ ಅದು ಇನ್ನೊಬ್ಬ ವ್ಯಕ್ತಿಗೆ ನೋವುಂಟು ಮಾಡುವ ರೀತಿಯಲ್ಲಿ ಇರಬಾರದು. ಅದನ್ನು ಸರಿಯಾಗಿ ವಿವರಿಸಬೇಕು. ಸರಿಯಾದ ಸಲಹೆಗಳನ್ನು ನೀಡಬೇಕು. ಮತ್ತು ಯಾವಾಗಲೂ ಸಕಾರಾತ್ಮಕವಾಗಿ ರ್ತಿಸಬೇಕು. ಈ ಗುಣ ಎಲ್ಲರನ್ನೂ ಆಕರ್ಷಿಸುತ್ತದೆ.

ಅಹಂಕಾರ ಭಾವ ಇಲ್ಲದಿರುವುದು: ಅಹಂಕಾರ ಇದ್ದರೆ ಯಾರು ನಿಮ್ಮನ್ನು ಇಷ್ಟಪಡುವುದಿಲ್ಲ. ಎಲ್ಲರೊಂದಿಗೂ ಸ್ನೇಹಪರದಿಂದ ವರ್ತಿಸಿ, ನಾನೇ ಶ್ರೇಷ್ಠ ಎಂಬ ಅಹಂಕಾರದ ಭಾವವನ್ನು ಬಿಟ್ಟು ಬಿಡಿ. ಯಾರಾದ್ರೂ ಸಣ್ಣ ಸಹಾಯ ಮಾಡಿದರೂ ಅವರಿಗೆ ಧನ್ಯವಾದಗಳನ್ನು ತಿಳಿಸಿ. ಈ ಗುಣವನ್ನು ಎಲ್ಲರೂ ಇಷ್ಟಪಡುತ್ತಾರೆ. ಹೀಗೆ ಎಲ್ಲರೂ ನಿಮ್ಮನ್ನು ನೆಚ್ಚಿಕೊಳ್ಳಬೇಕೆಂದರೆ ಸಾಮಾನ್ಯದಲ್ಲಿ ಸಾಮಾನ್ಯರಂತೆ ಇರಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ