AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಯಶಸ್ವಿ ಜನರ ಈ ಐದು ನಿಯಮಗಳನ್ನು ಪಾಲಿಸಿದರೆ ನೀವೂ ಜೀವನದಲ್ಲಿ ಸಕ್ಸಸ್‌ ಆಗ್ತೀರಿ ಅಂತ ಅರ್ಥ

ಜೀವನದಲ್ಲಿ ಶ್ರೀಮಂತಿಕೆಯನ್ನು ಬಯಸುವವರು, ಯಶಸ್ಸನ್ನು ಸಾಧಿಸಲು ಬಯಸುವವರು ಏನು ಮಾಡಬೇಕು, ಏನು ಮಾಡಬಾರದು ಎಂಬಿತ್ಯಾದಿ ಪ್ರಮುಖ ವಿಷಯಗಳನ್ನು ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ನಿಮಗೂ ಕೂಡ ಜೀವನದಲ್ಲಿ ಯಶಸ್ಸನ್ನು ಗಳಿಸುವ ಬಯಕೆ ಇದ್ಯಾ, ಹಾಗಿದ್ರೆ ಚಾಣಕ್ಯರು ಹೇಳಿರುವ ಈ ಐದು ನಿಯಮಗಳನ್ನು ತಪ್ಪದೆ ಪಾಲಿಸಿ.

Chanakya Niti: ಯಶಸ್ವಿ ಜನರ ಈ ಐದು ನಿಯಮಗಳನ್ನು ಪಾಲಿಸಿದರೆ ನೀವೂ ಜೀವನದಲ್ಲಿ ಸಕ್ಸಸ್‌ ಆಗ್ತೀರಿ ಅಂತ ಅರ್ಥ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Oct 03, 2025 | 9:30 AM

Share

ಮಹಾನ್‌ ವಿದ್ವಾಂಸರಾದ ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ನಮ್ಮ ಜೀವನ ನಿರ್ವಹಣೆಗೆ ಅಗತ್ಯವಾದ ಸಾಕಷ್ಟು ಅರ್ಥಪೂರ್ಣ ಮಾಹಿತಿಗಳನ್ನು ನೀಡಿದ್ದಾರೆ. ಹೌದು ದಾಂಪತ್ಯ ಜೀವನ ಚೆನ್ನಾಗಿರಲು ಗಂಡ ಹೆಂಡತಿ ಹೇಗಿರಬೇಕು, ಎಂತಹ ವ್ಯಕ್ತಿಗಳ ಸ್ನೇಹ ಮಾಡಬೇಕು, ಯಾವ ಮಾರ್ಗದಲ್ಲಿ ಹಣ ಗಳಿಸಬಾರದು, ಯಶಸ್ಸು ಗಳಿಸುವುದು ಹೇಗೆ, ಕಷ್ಟದ ಸಂದರ್ಭಗಳನ್ನು ಎದುರಿಸುವುದು ಹೇಗೆ ಇಂತಹ ಸಾಕಷ್ಟು ವಿಚಾರಗಳ ಬಗ್ಗೆ ತಮ್ಮ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಯಶಸ್ಸು ಮತ್ತು ಶ್ರೀಮಂತಿಕೆಯನ್ನು ಬಯಸುವವರು ಈ ಐದು ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದಿದ್ದಾರೆ. ನಿಮಗೂ ಕೂಡ ಜೀವನದಲ್ಲಿ ಯಶಸ್ಸು ಗಳಿಸುವ ಬಯಕೆ ಇದ್ಯಾ, ಹಾಗಿದ್ರೆ ಚಾಣಕ್ಯರು ಹೇಳಿರುವ ಈ ಐದು ನಿಯಮಗಳನ್ನು ತಪ್ಪದೆ ಪಾಲಿಸಿ.

ಯಶಸ್ಸು ಗಳಿಸಲು ಪಾಲಿಸಬೇಕಾದ ನಿಯಮಗಳಿವು:

ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ:  ಯಶಸ್ವಿ ಜನರು ಯಾವಾಗಲೂ ಸಮಯವನ್ನು ಗೌರವಿಸುತ್ತಾರೆ. ಸರಿಯಾದ ಸಮಯ ನಿರ್ವಹಣೆಯೇ ದೊಡ್ಡ ಸಂಪತ್ತು ಎಂದು ಚಾಣಕ್ಯ ಹೇಳುತ್ತಾರೆ. ಒಂದು ಕ್ಷಣವನ್ನೂ ವ್ಯರ್ಥ ಮಾಡಬೇಡಿ, ಸಿಕ್ಕ ಅವಕಾಶ ಮತ್ತು ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ. ಸಮಯಪಾಲನೆ, ಯೋಜನೆ ಮತ್ತು ಗುರಿ ನಿಗದಿಪಡಿಸುವಿಕೆಯಂತಹ ಸಣ್ಣ ಅಭ್ಯಾಸಗಳು ನಿಮ್ಮ ಯಶಸ್ಸಿನ ಮೆಟ್ಟಿಲುಗಳು. ಹಾಗಾಗಿ ಸಮಯ ನಿರ್ಮಹಣೆಯ ಬಗ್ಗೆ ಗಮನ ಇರಲಿ.

ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ: ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಿಂತ, ಚಿಂತನಶೀಲವಾಗಿ ಯೋಚಿಸಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಚಾಣಕ್ಯನ ಪ್ರಕಾರ, ಹಿಂದು ಮುಂದು ಯೋಚಿಸದೆ ತೆಗೆದುಕೊಳ್ಳುವ ನಿರ್ಧಾರಗಳಿಂದ ಹಾನಿಯೇ ಹೆಚ್ಚಿರುತ್ತದೆ.  ಚಾಣಕ್ಯರು ಹೇಳುವಂತೆ ಶ್ರೀಮಂತ ಮತ್ತು ಯಶಸ್ವಿ ಜನರು ತಮ್ಮ ಅನುಭವ ಮತ್ತು ಜ್ಞಾನದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಇದು ದೀರ್ಘಕಾಲೀನ ಪ್ರಯೋಜನಗಳನ್ನು ನೀಡುತ್ತದೆ. ಅದೇ ರೀತಿ ನೀವು ಕೂಡ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಇದನ್ನೂ ಓದಿ
Image
ಈ ಮೂರು ಮಾರ್ಗಗಳ ಮೂಲಕ ಗಳಿಸಿದ ಹಣ ಎಂದಿಗೂ ಶಾಶ್ವತವಲ್ಲ
Image
ಈ ಸಂದರ್ಭಗಳಲ್ಲಿ ಮಾತನಾಡುವುದಕ್ಕಿಂತ ನೀವು ಮೌನವಾಗಿರುವುದು ಒಳ್ಳೆಯದು
Image
ಈ ವಿಚಾರಗಳನ್ನು ಅಪ್ಪಿತಪ್ಪಿಯೂ ಯಾರೊಂದಿಗೂ ಹಂಚಿಕೊಳ್ಳಬೇಡಿ
Image
ಇಂತಹ ಸ್ಥಳಗಳಲ್ಲಿ ವಾಸಿಸುವ ಜನರು ಎಂದಿಗೂ ಪ್ರಗತಿ ಹೊಂದುವುದಿಲ್ಲ

ಸ್ನೇಹಿತರು ಮತ್ತು ಸಂಬಂಧಗಳ ಮಹತ್ವವನ್ನು ಅರ್ಥಮಾಡಿಕೊಳ್ಳಿ: ಪ್ರತಿ ಕ್ಷಣ ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಬೇಡಿ.  ಸ್ನೇಹ ಮತ್ತು ಸಂಬಂಧಕ್ಕೂ ಬೆಲೆಯನ್ನು ನೀಡಿ. ಉತ್ತಮ ಸ್ನೇಹಿತರು ಮತ್ತು ಒಳ್ಳೆಯ ಸಂಬಂಧಗಳು ನಿಮ್ಮ ಯಶಸ್ಸನ್ನು ದ್ವಿಗುಣಗೊಳಿಸುತ್ತದೆ ಎಂದು ಚಾಣಕ್ಯ ವಿವರಿಸುತ್ತಾರೆ. ಹಾಗಾಗಿ ಯಾವತ್ತಿಗೂ ಸಜ್ಜನರ ಸಂಘದೊಂದಿಗಿರಿ.

ಇದನ್ನೂ ಓದಿ: ಮೂರು ಮಾರ್ಗಗಳ ಮೂಲಕ ಗಳಿಸಿದ ಹಣ ಎಂದಿಗೂ ಶಾಶ್ವತವಲ್ಲ

ನಿಧಿ ಮತ್ತು ಸಂಪನ್ಮೂಲಗಳ ಸರಿಯಾದ ನಿರ್ವಹಣೆ: ಯಶಸ್ವಿ ಜನರು ತಮ್ಮ ಹಣ ಮತ್ತು ಸಂಪನ್ಮೂಲಗಳನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡುತ್ತಾರೆ ಮತ್ತು ಹೂಡಿಕೆ ಮಾಡುತ್ತಾರೆ. ಚಾಣಕ್ಯನ ಪ್ರಕಾರ, ಸರಿಯಾದ ಸಂಪನ್ಮೂಲ ನಿರ್ವಹಣೆಯು ದೀರ್ಘಾವಧಿಯ ಯಶಸ್ಸಿಗೆ ಕಾರಣವಾಗುತ್ತದೆ. ನಿಮಗೂ ಯಶಸ್ಸನ್ನು ಸಾಧಿಸಲು ಬಯಸಿದರೆ, ಶ್ರೀಮಂತಿಕೆಯನ್ನು ಬಯಸಿದರೆ ಅನಗತ್ಯ ಖರ್ಚುಗಳನ್ನು ತಪ್ಪಿಸಿ ಮತ್ತು ಸರಿಯಾದ ಹೂಡಿಕೆಗಳ ಮೇಲೆ ಗಮನ ಹರಿಸಿ.

ಕಷ್ಟಗಳ ಬಂದಾಗಲೂ ತಾಳ್ಮೆಯಿಂದಿರಿ: ಯಶಸ್ವಿ ಜನರು ಕಠಿಣ ಸಂದರ್ಭಗಳಲ್ಲಿಯೂ ತಾಳ್ಮೆಯಿಂದಿರುತ್ತಾರೆ. ಬಿಕ್ಕಟ್ಟಿನ ಸಮಯದಲ್ಲಿ ತಾಳ್ಮೆ ಮತ್ತು ಪರಿಶ್ರಮವು ವ್ಯಕ್ತಿಯನ್ನು ಬಲಿಷ್ಠಗೊಳಿಸುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ. ಎಂತಹದ್ದೇ ಸವಾಲುಗಳು ಎದುರಾದರೂ ತಾಳ್ಮೆಯಿಂದ ಇರಿ. ನೀವು ಎದುರಿಸುವ ಸವಾಲುಗಳಿಂದ ಪಾಠಗಳನ್ನು ಕಲಿಯಿರಿ ಮತ್ತು ಮುಂದುವರಿಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ