ಜೀವನದಲ್ಲಿ ಯಾವುದೇ ಹೆಜ್ಜೆ ಇಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಒಂದು ಸಣ್ಣ ತಪ್ಪು ಕೂಡ ಜೀವನವನ್ನು ತೊಂದರೆಗೆ ಸಿಲುಕಿಸಬಹುದು. ಎಲ್ಲಾ ಸಂದರ್ಭದಲ್ಲೂ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಎಲ್ಲರಿಗೂ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ತನಗೆ ಮಾರ್ಗದರ್ಶನ ಮಾಡಲು ಸೂಕ್ತ ವ್ಯಕ್ತಿಗಳನ್ನು ಹುಡುಕುತ್ತಾನೆ. ಅಂಥವರಿಗೆ ಆಚಾರ್ಯ ಚಾಣಕ್ಯನ ಬೋಧನೆಗಳು ಬಹಳ ಉಪಕಾರಿ ಆಗಬಹುದು. ಚಾಣಕ್ಯನ ನೀತಿಶಾಸ್ತ್ರ ಪುಸ್ತಕವನ್ನು ಓದಿದರೆ ಜೀವನದ ಬಹಳಷ್ಟು ಸನ್ನಿವೇಶಗಳನ್ನು ಎದುರಿಸಲು, ಸರಿದೂಗಿಸಲು, ಬೆಳೆಯಲು ಸಹಾಯವಾಗುತ್ತದೆ.
ಆಚಾರ್ಯ ಚಾಣಕ್ಯ ಬಹಳಷ್ಟು ಸನ್ನಿವೇಶಗಳನ್ನು ಎದುರಿಗಿರಿಸಿ ವಿಚಾರವನ್ನು ತಿಳಿಸಿದ್ದಾನೆ. ಅದನ್ನು ಸದಾ ನೆನಪಿನಲ್ಲಿ ಇರಿಸಿಕೊಂಡು, ಅಳವಡಿಸಿಕೊಳ್ಳಲು ಕೂಡ ಪ್ರಯತ್ನಿಸಿದರೆ ಬಹುತೇಕ ಸಮಸ್ಯೆಗಳನ್ನು ತಡೆಯಬಹುದು. ಎಚ್ಚರವಾಗಿ ಇರಬಹುದು. ಆಚಾರ್ಯ ಚಾಣಕ್ಯ ನಾಲ್ಕು ಸ್ಥಳಗಳನ್ನು ಉಲ್ಲೇಖಿಸಿ, ಅಂಥಾ ಕಡೆ ಉಳಿಯಬೇಡಿ ಎಂದೂ ಹೇಳಿದ್ದಾನೆ. ಹಾಗೊಂದು ವೇಳೆ ಇಂಥಾ ಕಡೆ ಉಳಿದರೆ ಅಪಾಯ ಎದುರಾಗಬಹುದು ಎಂದು ತಿಳಿಸಿದ್ದಾನೆ.
ಬರಪೀಡಿತ ಪ್ರದೇಶ
ಚಾಣಕ್ಯ ನೀತಿ ಹೇಳುವಂತೆ ಬರ ಇರುವ ಸ್ಥಳ ವಾಸಯೋಗ್ಯವಲ್ಲ. ಯಾವುದೇ ಸಂದರ್ಭದಲ್ಲಿ ನೀವು ಅಲ್ಲಿಯೇ ಉಳಿದುಕೊಂಡರೆ, ನಿಮ್ಮ ಜೀವಕ್ಕೆ ಅಪಾಯ ಉಂಟಾಗಬಹುದು. ಮಾತ್ರ ಅಲ್ಲದೆ, ಇಡೀ ಕುಟುಂಬದ ಜೀವನವೂ ತೊಂದರೆಗೆ ಸಿಲುಕಬಹುದು. ಹಾಗಾಗಿ ಬರ ಪೀಡಿತ ಸ್ಥಳವನ್ನು ಕೂಡಲೇ ಬಿಟ್ಟು ಬರಬೇಕು.
ಜಗಳ ನಡೆಯುತ್ತಿರುವ ಸ್ಥಳ
ಜಗಳ, ಗಲಾಟೆ, ಗದ್ದಲ ಇಂತಹ ಘಟನೆಗಳು ಆಗುತ್ತಿರುವ ಸ್ಥಳಗಳಲ್ಲಿ ನೀವು ಇದ್ದರೆ ಅಲ್ಲಿಂದ ತಕ್ಷಣವೇ ಹೊರಡಬೇಕು. ಅಲ್ಲೇ ಇದ್ದರೆ ನಿಮಗೆ ಹಾನಿ ಆಗುವ ಸಾಧ್ಯತೆ ಹೆಚ್ಚು. ನಿಮ್ಮ ಜೀವನವು ಕೂಡ ಯಾವುದೇ ಸಮಯದಲ್ಲಿ ತೊಂದರೆಗೆ ಒಳಗಾಗಬಹುದು.
ಕೆಟ್ಟ ವ್ಯಕ್ತಿಯ ಜೊತೆಗೆ ಇರಬೇಡಿ
ದುಷ್ಟರು ಯಾರಿಗೂ ಹತ್ತಿರವಾಗಿ ಇರುವುದಿಲ್ಲ. ಅವರು ನಿಮಗೆ ಎಷ್ಟೇ ಹತ್ತಿರದವರಂತೆ ಕಂಡರೂ ಅವರ ಬಲೆಗೆ ಬೀಳಬೇಡಿ. ಅವರು ನಿಮ್ಮ ಉಪಯೋಗ ಇರುವ ತನಕ ಮಾತ್ರ ನಿಮ್ಮ ಜೊತೆಗೆ ಇರುತ್ತಾರೆ. ಬಳಿಕ ಒಂದು ದಿನ ಅವರು ನಿಮಗೆ ಹಾನಿ ಮಾಡುವುದಿಲ್ಲ ಎಂದೂ ಹೇಳಲಾಗುವುದಿಲ್ಲ.
ಶತ್ರು ದಾಳಿ ನಡೆಯುತ್ತಿರುವ ಸ್ಥಳ
ಶತ್ರು ದಾಳಿ ಸ್ಥಳದಲ್ಲಿ ನೀವು ಇದ್ದರೆ ಕೂಡಲೇ ನೀವು ಸುರಕ್ಷಿತ ಸ್ಥಳಕ್ಕೆ ಬರಬೇಕು. ಹಠಾತ್ ಪರಿಸ್ಥಿತಿಯಲ್ಲಿ ನೀವು ಅಲ್ಲಿಂದ ಹೊರಬರಬೇಕು. ಅಂತಹ ಸ್ಥಳದಲ್ಲಿ ನೀವು ಜೀವನ ಎದುರಿಸಲು ಪ್ರಯತ್ನಿಸಿದರೆ ಅದು ಅಪಾಯಕಾರಿ. ಅದರಿಂದ ನಿಮಗೆ ಹಾನಿ ಉಂಟಾಗಬಹುದು. ಈ ಪರಿಸ್ಥಿತಿಯಲ್ಲಿ ವ್ಯಕ್ತಿಯು ತನ್ನ ಜೀವವನ್ನು ಉಳಿಸಿಕೊಳ್ಳುವ ಬಗ್ಗೆ ಯೋಚಿಸಬೇಕು.
ಇದನ್ನೂ ಓದಿ: Chanakya Niti: ಪ್ರತಿಯೊಬ್ಬ ವ್ಯಕ್ತಿಯು ಈ ಎರಡು ವಿಷಯಗಳನ್ನು ಸೈನಿಕನಂತೆ ರಕ್ಷಿಸಬೇಕು!- ಚಾಣಕ್ಯ ನೀತಿ
ಇದನ್ನೂ ಓದಿ: Chanakya Niti: ಈ 5 ವಿಷಯಗಳನ್ನು ಯಾವತ್ತೂ ನೆನಪಿಡಿ, ಕೆಟ್ಟ ಸಮಯಗಳು ದೂರವಾಗುತ್ತವೆ- ಚಾಣಕ್ಯ ನೀತಿ