ನಿಮ್ಮ ಜೀವನಕ್ಕೆ ಈ ವ್ಯಕ್ತಿಗಳು ಎಂಟ್ರಿ ಕೊಟ್ಟರೆ ಜೀವನದ ಸಂತೋಷವೇ ದೂರವಾಗುವುದು ಗ್ಯಾರಂಟಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 31, 2024 | 2:18 PM

ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಯಾರನ್ನು ನಂಬುವುದು ಬಿಡುವುದು ಎಂದು ತಿಳಿಯುವುದಿಲ್ಲ. ಹೀಗಾಗಿ ಒಬ್ಬ ವ್ಯಕ್ತಿಯನ್ನು ಜೀವನಕ್ಕೆ ಬರ ಮಾಡಿಕೊಳ್ಳುವ ಮೊದಲು ಸಾವಿರ ಸಲ ಯೋಚಿಸಬೇಕು. ಇಲ್ಲದಿದ್ದರೆ ಈ ರೀತಿಯ ಗುಣ ಸ್ವಭಾವ ಹೊಂದಿರುವ ವ್ಯಕ್ತಿಗಳು ನಿಮ್ಮ ಜೀವನಕ್ಕೆ ಬಂದವರು ಆಗಿ ಬಿಟ್ಟರೆ ಸುಖ, ಶಾಂತಿ, ನೆಮ್ಮದಿಯೆನ್ನುವುದೇ ದೂರ ಮಾತಾಗಿ ಬಿಡುತ್ತದೆ.

ನಿಮ್ಮ ಜೀವನಕ್ಕೆ ಈ ವ್ಯಕ್ತಿಗಳು ಎಂಟ್ರಿ ಕೊಟ್ಟರೆ ಜೀವನದ ಸಂತೋಷವೇ ದೂರವಾಗುವುದು ಗ್ಯಾರಂಟಿ
ಸಾಂದರ್ಭಿಕ ಚಿತ್ರ
Follow us on

ಈಗಿನ ಕಾಲದಲ್ಲಿ ಯಾವ ವ್ಯಕ್ತಿಯನ್ನು ನಂಬಬೇಕು, ಬೇಡ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಕೆಲವರು ನಮ್ಮ ಹಿತವನ್ನು ಬಯಸುವಂತೆ ಇದ್ದು ಕೊನೆಗೆ ಕೈ ಕೊಡುವುದೇ ಹೆಚ್ಚು. ಇಲ್ಲದಿದ್ದರೆ ನಮ್ಮ ಸೋಲನ್ನು ಕಂಡು ಖುಷಿ ಪಡುವವರು ಇದ್ದಾರೆ. ಹೀಗಾಗಿ ಯಾವುದೇ ವ್ಯಕ್ತಿಯನ್ನು ನಮ್ಮ ಜೀವನದಲ್ಲಿ ಹತ್ತಿರ ಮಾಡಿಕೊಳ್ಳುತ್ತಿದ್ದರೆ ಅವರು ಗುಣಸ್ವಭಾವ ಹಾಗೂ ನಡವಳಿಕೆ ಹೇಗೆ ಎಂದು ತಿಳಿಯುವುದು ಮುಖ್ಯ. ಈ ಕೆಲವು ಗುಣಗಳುಳ್ಳ ವ್ಯಕ್ತಿಗಳನ್ನು ಆದಷ್ಟು ದೂರವಿಟ್ಟರೆ ನೆಮ್ಮದಿಯಾಗಿ ಬದುಕಲು ಸಾಧ್ಯ.

  • ನಮ್ಮನ್ನು ಎಷ್ಟು ಜನ ಪ್ರೀತಿಸುತ್ತಾರೆಯೇ ಅಷ್ಟೇ ದ್ವೇಷಿಸುವವರು ಇರುತ್ತಾರೆ. ಆದರೆ ಕೆಲವರು ನಮ್ಮ ಜೊತೆಗೆ ಒಳ್ಳೆಯವರಾಗಿದ್ದು, ಬೆನ್ನಿಗೆ ಚೂರಿ ಹಾಕುವ ಗುಣವನ್ನು ಹೊಂದಿರುತ್ತಾರೆ. ಇಂತಹ ಮನಸ್ಥಿತಿ ಇರುವ ವ್ಯಕ್ತಿಗಳನ್ನು ಸಾಧ್ಯವಾದಷ್ಟು ನಿಮ್ಮ ಜೀವನದಲ್ಲಿ ಬಿಟ್ಟು ಕೊಳ್ಳದೇ ಇರುವುದೇ ಉತ್ತಮ. ಇಂತಹವರಿಂದ ಜೀವನದ ಸಂತೋಷವೇ ದೂರವಾಗುತ್ತದೆ.
  • ಕೆಲವು ವ್ಯಕ್ತಿಗಳಿಗೆ ಯಾರಾದರೂ ಕಷ್ಟದಲ್ಲಿ ಇದ್ದಾರೆ ಎಂದರೆ ಅದನ್ನು ನೋಡಿ ಸಂತೋಷ ಪಡುತ್ತಾರೆ. ಕಷ್ಟ ಅಥವಾ ನೋವು ಪಡುವುದನ್ನು ನೋಡಿ ಎಂಜಾಯ್ ಮಾಡುವ ವ್ಯಕ್ತಿಗಳು ನಿಮ್ಮ ಸುತ್ತಲೂ ಇದ್ದಾರೆ ಎನ್ನುವುದನ್ನು ಮರೆಯಬೇಡಿ. ನಿಮಗೆ ಕನಿಕರ ತೋರುವಂತೆ ನಡೆದುಕೊಂಡರೂ ಬೆನ್ನ ಹಿಂದೆ ನಿಮ್ಮನ್ನು ಆಡಿಕೊಂಡು ನಗುತ್ತಾರೆ. ಈ ನಡವಳಿಕೆಯನ್ನು ಹೊಂದಿರುವ ವ್ಯಕ್ತಿಗಳು ನಿಮ್ಮ ಜೀವನಕ್ಕೆ ಬಂದರೆ ಸಂತೋಷವು ಹಾಳಾಗುತ್ತದೆ.
  • ನಿಮ್ಮ ಬಳಿಯೇ ನಿಮ್ಮ ವೈಯಕ್ತಿಕ ವಿಚಾರಗಳು ಹಾಗೂ ಕುಟುಂಬದ ವಿಚಾರಗಳನ್ನು ತಿಳಿದುಕೊಂಡು ಅದನ್ನು ಬೇರೆಯವರೊಂದಿಗೆ ಹೇಳಿಕೊಂಡು ನಗುವುದು, ತಮಾಷೆ ಮಾಡುವುದು. ಇದು ಕೆಲವರಿಗೆ ಖುಷಿ ಕೊಡುವ ಕೆಲಸ ಆಗಿರುತ್ತದೆ. ಈ ಸ್ವಭಾವದ ವ್ಯಕ್ತಿಗಳು ನಿಮ್ಮ ಸುತ್ತ ಮುತ್ತಲಿದ್ದರೆ ಅಂತಹವರನ್ನು ನಿಮ್ಮ ಸುತ್ತಲೂ ಸೇರಿಸಬೇಡಿ.
  • ಜೀವನದಲ್ಲಿ ಸದಾ ಪಾಸಿಟಿವ್‌ ಆಗಿರಬೇಕು. ಆದರೆ ನಿಮ್ಮ ಸುತ್ತ ಮುತ್ತಲೂ ಈ ವ್ಯಕ್ತಿಗಳು ನಿಮ್ಮ ಪಾಸಿಟಿವ್ ಯೋಚನೆಗಳನ್ನು ಬದಲಾಯಿಸಲು ನೆಗೆಟಿವ್‌ ಆಗಿ ಮಾತಾಡುತ್ತಾರೆ. ಎಷ್ಟೇ ಧನಾತ್ಮಕವಾಗಿ ಇರಲು ಪ್ರಯತ್ನ ಪಟ್ಟರೂ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿ ಪ್ರಾಬಲ್ಯ ಸಾಧಿಸುತ್ತಾರೆ. ಹೀಗಾಗಿ ಈ ವ್ಯಕ್ತಿಗಳು ನಿಮಗೆ ಹತ್ತಿರವಾಗುತ್ತಿದ್ದರೆ ಅವರಿಂದ ಸಾಧ್ಯವಾದಷ್ಟು ದೂರವಿರುವುದು ಉತ್ತಮ.
  • ಕೆಲವು ವ್ಯಕ್ತಿಗಳು ಅಗತ್ಯವಿದ್ದಾಗ ಬಳಸಿಕೊಳ್ಳುತ್ತಾರೆ. ಜೀವನದಲ್ಲಿ ಒಳ್ಳೆಯದನ್ನು ಮಾಡಲು ಬಂದವರಂತೆ ಕಾಣಿಸುತ್ತಾರೆ. ಆದರೆ ನಮ್ಮನ್ನು ಸಂಪೂರ್ಣವಾಗಿ ಬಳಸಿಕೊಂಡು ಕೈಕೊಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಈ ರೀತಿಯ ವ್ಯಕ್ತಿಗಳನ್ನು ಅಪ್ಪಿತಪ್ಪಿಯೂ ನಿಮ್ಮ ಬದುಕಿನಲ್ಲಿ ಇರಿಸಿಕೊಳ್ಳಬೇಡಿ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ