ಎಲ್ಲರಿಗೂ ಕೂಡ ತಾವು ಯಂಗ್ ಆಗಿರಬೇಕು, ತಮಗೆ ವಯಸ್ಸು ಆಗಿರುವುದು ಯಾರಿಗೂ ಗೊತ್ತಾಗಬಾರದು ಎನ್ನುವುದಿರುತ್ತದೆ. ಆದರೆ ಈಗಿನ ಆಹಾರ ಕ್ರಮದಲ್ಲಿನ ಬದಲಾವಣೆಗಳು ವಯಸ್ಸಾಗುವ ಲಕ್ಷಣಗಳು ಬಹುಬೇಗನೆ ಕಾಣಿಸಿಕೊಳ್ಳುತ್ತದೆ. ಹೆಚ್ಚಿನವರಲ್ಲಿ ಚರ್ಮ ಹಾಗೂ ಮುಖವು ಅಂದಗೆಡುತ್ತವೆ, ತಲೆಕೂದಲು ಬಿಳಿಯಾಗುತ್ತದೆ. ಸಹಜವಾಗಿ ಈ ಲಕ್ಷಣಗಳು ಕಂಡು ಬಂದರೆ ಮುಜುಗರಕ್ಕಿಡಾಗುವುದೇ ಹೆಚ್ಚು. ಈ ಸಮಯದಲ್ಲಿಯು ನಿಮ್ಮ ವಯಸ್ಸನ್ನು ಮರೆಮಾಚುವುದು ನಿಮ್ಮ ಕೈಯಲ್ಲಿದೆ ಎನ್ನುವುದನ್ನು ಮರೆಯಬಾರದು.
* ಆಹಾರದ ಬಗ್ಗೆ ಗಮನವಿರಲಿ : ವಯಸ್ಸು ಏರಿದಾಗಲು ತಮ್ಮ ಆರೋಗ್ಯ, ತ್ವಚೆ ಹಾಗೂ ಸೌಂದರ್ಯ ವನ್ನು ಕಾಪಾಡುವುದು ಮುಖ್ಯ. ಹೀಗಾಗಿ ಪೌಷ್ಟಿಕಾಂಶಯುಕ್ತ ಆಹಾರದ ಬಗ್ಗೆ ಹೆಚ್ಚು ಕೊಡುವುದು ಉತ್ತಮ. ಆಹಾರದಲ್ಲಿ ಸೊಪ್ಪು ತರಕಾರಿ, ಹಣ್ಣು ಹಂಪಲುಗಳು, ಧಾನ್ಯಗಳು ಬೇಳೆಕಾಳುಗಳು ಬಳಕೆ ಹೆಚ್ಚಿರಲಿ
* ನೀರು ಕುಡಿಯುವ ಅಭ್ಯಾಸವಿರಲಿ : ನಮ್ಮ ದೇಹಕ್ಕೆ ಆಹಾರದ ಜೊತೆಗೆ ನೀರು ಕೂಡ ಅಷ್ಟೇ ಮುಖ್ಯವಾಗುತ್ತದೆ. ಪ್ರತಿಯೊಬ್ಬರು ದಿನಕ್ಕೆ ಕನಿಷ್ಠ ಏಳರಿಂದ ಎಂಟು ಲೋಟದಷ್ಟದಾರೂ ನೀರು ಕುಡಿಯಲೇಬೇಕು. ನೀರಿನ ಅಂಶವು ಚರ್ಮವು ಸುಕ್ಕು, ನಿರಿಗೆಗಳು ಉಂಟಾಗಲು ಬಿಡುವುದಿಲ್ಲ.
* ವ್ಯಾಯಾಮ ಮಾಡುವ ಅಭ್ಯಾಸವಿರಲಿ : ಎಷ್ಟೇ ಬ್ಯುಸಿಯಾಗಿದ್ದರೂ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ವ್ಯಾಯಾಮ, ಯೋಗ, ವಾಕಿಂಗ್ ಮಾಡುವುದರಿಂದ ಆ ದಿನವು ಲವಲವಿಕೆಯಿಂದ ಕೂಡಿರುತ್ತದೆ. ವ್ಯಾಯಾಮದಿಂದ ದೇಹದಲ್ಲಿರುವ ಕೆಟ್ಟ ಕೊಬ್ಬುಗಳು ದೂರವಾಗಿ ಯಂಗ್ ಆಗಿ ಕಾಣಿಸಿಕೊಳ್ಳುವಂತೆ ಮಾಡುತ್ತದೆ.
* ಚರ್ಮದ ಆರೋಗ್ಯದ ಬಗ್ಗೆ ನಿಗಾವಿರಲಿ : ಒಬ್ಬ ವ್ಯಕ್ತಿಯು ಸುಂದರವಾಗಿ ಕಾಣಿಸುವಂತೆ ಮಾಡುವುದೇ ಈ ಚರ್ಮ. ಹೀಗಾಗಿ ಪ್ರತಿನಿತ್ಯ ಮುಖವನ್ನು ತಣ್ಣೀರಿನಿಂದಲೇ ತೊಳೆಯುವ ಅಭ್ಯಾಸವಿರಲಿ. ಮಾಯ್‌ಶ್ಚರೈಸರ್ ಹಾಗೂ ಸನ್‌ಸ್ಕ್ರೀನ್ ಲೋಶನ್ ಗಳ ಬಳಕೆಯನ್ನು ಮಾಡುವ ಅಭ್ಯಾಸವಿರಲಿ. ಈ ಉತ್ಪನ್ನಗಳನ್ನು ಬಳಸುವುದರಿಂದ ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ವಚೆಯನ್ನು ರಕ್ಷಿಸುತ್ತದೆ.
ಇದನ್ನೂ ಓದಿ: ಎದೆ ನೋವು ಕಾಣಿಸಿಕೊಂಡರೆ ಗಾಬರಿಯಾಗಬೇಡಿ, ಮನೆ ಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಿ
* ಕೆಟ್ಟ ಅಭ್ಯಾಸಗಳಿದ್ದರೆ ಈಗಲೇ ನಿಲ್ಲಿಸಿ : ಕೆಲವರು ಧೂಮಪಾನ, ಮದ್ಯಪಾನದಂತಹತಹ ಕೆಟ್ಟ ಚಟಗಳಿಗೆ ದಾಸರಾಗುತ್ತಾರೆ. ಇದು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಈ ಹೀಗಾಗಿ ದುರಾಭ್ಯಾಸಗಳಿಂದ ದೂರವಿದ್ದರೆ ಆರೋಗ್ಯವನ್ನು ಕಾಯಿಲೆಗಳಿಂದ ರಕ್ಷಿಸಬಹುದು.
*ಕಣ್ಣ ತುಂಬಾ ನಿದ್ದೆ ಮಾಡಿ : ಮನುಷ್ಯಕ್ಕೆ ದೇಹಕ್ಕೆ ವಿಶ್ರಾಂತಿ ಅಗತ್ಯ. ಹೀಗಾಗಿ ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ನಿದ್ದೆ ಮಾಡಿ ರೆಸ್ಟ್ ಮಾಡುವುದು ಮುಖ್ಯ. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಂಡರೆ ಆ ದಿನವು ಖುಷಿ ಖುಷಿಯಾಗಿರುತ್ತದೆ. ಉಲ್ಲಾಸದಿಂದ ಕೂಡಿದ ದಿನವು ನಿಮ್ಮನ್ನು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
* ಜಂಕ್ ಫುಡ್ ಸೇವನೆಯಿಂದ ದೂರವಿರಿ : ಹೆಚ್ಚಿನವರು ರುಚಿ ರುಚಿಯಾಗಿ ಜಂಕ್ ಫುಡ್ ಗಳನ್ನೇ ಹೆಚ್ಚು ಸೇವಿಸುತ್ತಾರೆ. ಇದು ಆರೋಗ್ಯಕರವಾದ ಆಹಾರವಲ್ಲ. ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುವುದಲ್ಲದೆ, ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆದಷ್ಟು ಈ ಕುರುಕುಲು ಹಾಗೂ ಜಂಕ್ ಫುಡ್ ನಂತಹ ಆಹಾರಗಳಿಂದ ದೂರವಿದ್ದರೇ ಆರೋಗ್ಯವಂತರು ಹಾಗೂ ಯಂಗ್ ಆಗಿರಲು ಸಾಧ್ಯ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ