Indian Independence 2024: ತ್ರಿವರ್ಣ ಧ್ವಜದ ಮಧ್ಯೆ ಇರುವ ಅಶೋಕ ಚಕ್ರದ ಬಗೆಗಿನ ಕುತೂಹಲಕಾರಿ ಸಂಗತಿಗಳಿವು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 14, 2024 | 6:00 PM

ಭಾರತದ ರಾಷ್ಟ್ರ ಧ್ವಜದಲ್ಲಿರುವ ಮೂರು ಬಣ್ಣಗಳಾದ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಕುರಿತು ಎಲ್ಲರಿಗೂ ತಿಳಿದಿದೆ. ಆದರೆ ಮಧ್ಯದ ಬಿಳಿಭಾಗದೊಂದಿಗಿರುವ ಅಶೋಕ ಚಕ್ರದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. 24 ಗೆರೆಗಳನ್ನು ಹೊಂದಿದ್ದು ಒಂದೊಂದು ಗೆರೆಯೂ ಒಂದು ಅರ್ಥವನ್ನು ಪ್ರತಿನಿಧಿಸುತ್ತದೆ. ಹಾಗಾದ್ರೆ ಈ ಅಶೋಕ ಚಕ್ರದ ಕುರಿತಾದ ಹತ್ತು ಹಲವು ಕುತೂಹಲಕಾರಿ ವಿಷಯಗಳು ಇಲ್ಲಿದೆ.

Indian Independence 2024: ತ್ರಿವರ್ಣ ಧ್ವಜದ ಮಧ್ಯೆ ಇರುವ ಅಶೋಕ ಚಕ್ರದ ಬಗೆಗಿನ ಕುತೂಹಲಕಾರಿ ಸಂಗತಿಗಳಿವು
ತ್ರಿವರ್ಣ ಧ್ವಜ
Follow us on

ಭಾರತ ಸ್ವಾತಂತ್ರ್ಯಗೊಂಡು 2024ರ ಆಗಸ್ಟ್ 15ಕ್ಕೆ 78 ವರ್ಷಗಳು ತುಂಬುತ್ತಿದೆ. ಈ ಬಾರಿ ಭಾರತವು 78 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳಲು ಸಜ್ಜಾಗಿದೆ. ದೇಶವನ್ನು ಪ್ರತಿನಿಧಿಸುವ ಅತ್ಯಂತ ಮಹತ್ವದ ಅಂಶವೆಂದರೆ ಅದುವೇ ನಮ್ಮ ರಾಷ್ಟ್ರ ಧ್ವಜ. ರಾಷ್ಟ್ರಧ್ವಜದಲ್ಲಿನ ಕೇಸರಿ ಬಣ್ಣ ಧೈರ್ಯ, ಪರಿತ್ಯಾಗ, ದೇಶದ ಒಳಿತಿಗಾಗಿ ನಡೆಯುವ ಬಲಿದಾನದ ಸಂಕೇತವಾಗಿದೆ. ಬಿಳಿ ಬಣ್ಣವು ಸತ್ಯ, ಶಾಂತಿಯನ್ನು ಸೂಚಿಸಿದರೆ ಹಸಿರು ಬಣ್ಣ ಪ್ರಗತಿಯ ಸಂಕೇತವಾಗಿದೆ. ತ್ರಿವರ್ಣ ಧ್ವಜದ ಮಧ್ಯೆ ಭಾಗದಲ್ಲಿರುವ ಅಶೋಕ ಚಕ್ರವೂ ಧರ್ಮವನ್ನು ಪ್ರತಿನಿಧಿಸುತ್ತದೆ. ಅಶೋಕ ಚಕ್ರದ ಕುರಿತಾದ ಇನ್ನಷ್ಟು ಮಾಹಿತಿಯೂ ಇಲ್ಲಿದೆ.

  1. ಭಾರತದ ತ್ರಿವರ್ಣ ಧ್ವಜವನ್ನು ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಪಿಂಗಲಿ ವೆಂಕಯ್ಯ ವಿನ್ಯಾಸಗೊಳಿಸಿದರು. 1923 ರಲ್ಲಿ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಸಮಿತಿಯ ಅಧಿವೇಶನದಲ್ಲಿ ಎರಡು ಬಣ್ಣಗಳಿಂದ ರಚನೆಯಾದ ಧ್ವಜವನ್ನು ವೆಂಕಯ್ಯ ಅವರು ಪ್ರಸ್ತುಪಡಿಸಿದ್ದರು.
  2. ಆದಾದ ಬಳಿಕ ಜಲಂಧರ್‌ನ ಲಾಲಾ ಹಂಸರಾಜ್ ಅವರು ರಾಷ್ಟ್ರಧ್ವಜದಲ್ಲಿ ಚರಕ ಸೇರ್ಪಡಗೆ ಸಲಹೆ ನೀಡಿದ್ದರು. ಹೀಗಾಗಿ ಮೊದಲು ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜದಲ್ಲಿ ಚರಕವನ್ನು ಸೇರಿಸಲಾಯಿತು.
  3. ತದನಂತರದಲ್ಲಿ ಧ್ವಜದಲ್ಲಿ ಚರಕವು ಚೆನ್ನಾಗಿ ಕಾಣುವುದಿಲ್ಲ ಎನ್ನುವ ಕಾರಣಕ್ಕೆ ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರವನ್ನು 1947ರ ಜುಲೈ 22 ರಂದು ಅಳವಡಿಸಲಾಯಿತು.
  4. ಭಾರತದ ಧ್ವಜದ ಬಿಳಿ ಬಣ್ಣದ ಮೇಲ್ಭಾಗದಲ್ಲಿ ನೀಲಿ ಬಣ್ಣದಲ್ಲಿ ಅಶೋಕ ಚಕ್ರವಿದೆ.
  5. ಅಶೋಕ ಚಕ್ರವು ತ್ರಿವರ್ಣ ಧ್ವಜದ ಮಧ್ಯದಲ್ಲಿದ್ದು, 24 ಗೆರೆಗಳನ್ನು ಹೊಂದಿದ್ದು ಒಂದೊಂದು ಗೆರೆಯೂ ಒಂದೊಂದು ಅರ್ಥವನ್ನು ಹೊಂದಿದೆ.
  6.  24 ಗೆರೆಗಳಿಂದ ಪ್ರತಿನಿಧಿಸುವ ಅಶೋಕ ಚಕ್ರವು ಧರ್ಮಚಕ್ರವನ್ನು ಸೂಚಿಸುತ್ತದೆ. ಇದನ್ನು ಕರ್ತವ್ಯದ ಚಕ್ರ ಎಂದು ಕೂಡ ಕರೆಯಲಾಗುತ್ತದೆ.
  7. ಅಶೋಕನ ಹಲವಾರು ಶಾಸನಗಳಲ್ಲಿ ಕಂಡುಬರುವ ‘ತಿರುಗುವ ಚಕ್ರ’ವನ್ನು ಅಶೋಕ ಚಕ್ರ ಎಂದು ಕರೆಯಲಾಗುತ್ತದೆ, ಅವುಗಳಲ್ಲಿ ಪ್ರಮುಖವಾದ ಅಶೋಕನ ಸಿಂಹ ಭಾರತದ ರಾಷ್ಟ್ರ ಲಾಂಛನವಾಗಿದೆ.
  8. ಪ್ರತಿಯೊಂದು ಚಕ್ರವು ಜೀವನದ ಒಂದು ತತ್ವ ಮತ್ತು ದಿನದ 24 ಗಂಟೆಗಳನ್ನೂ ಸಂಕೇತಿಸುತ್ತದೆ. ಹೀಗಾಗಿ ಈ ಅಶೋಕ ಚಕ್ರಕ್ಕೆ ‘ಸಮಯದ ಚಕ್ರ’ ಎನ್ನುವ ಹೆಸರಿನಿಂದ ಕರೆಯುತ್ತಾರೆ.
  9. ಅಶೋಕ ಚಕ್ರವು ಹಿಂದೂ ಧರ್ಮ, ಜೈನ ಧರ್ಮ ಮತ್ತು ಬೌದ್ಧ ಧರ್ಮದ ಧಾರ್ಮಿಕ ಲಕ್ಷಣವಾದ ‘ಧರ್ಮದ ಚಕ್ರ’ದ ಮಾದರಿಯಲ್ಲಿದೆ.
  10. ಅಶೋಕ ಚಕ್ರದಲ್ಲಿರುವ ಗೆರೆಗಳು 24 ತತ್ವಗಳಾದ ಪರಿಶುದ್ಧತೆ, ಆರೋಗ್ಯ, ಶಾಂತಿ, ತ್ಯಾಗ, ನೈತಿಕತೆ, ಸೇವೆ, ಕ್ಷಮೆ, ಪ್ರೀತಿ, ಸ್ನೇಹ, ಭ್ರಾತೃತ್ವ, ಸಂಘಟನೆ, ಕಲ್ಯಾಣ, ಸಮೃದ್ಧಿ, ಕೈಗಾರಿಕೆ, ಸುರಕ್ಷತೆ, ಅರಿವು, ಸಮಾನತೆ, ಅರ್ಥ, ನೀತಿ, ನ್ಯಾಯ, ಸಹಕಾರ, ಕರ್ತವ್ಯಗಳು, ಹಕ್ಕುಗಳು ಹಾಗೂ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ.

ಸ್ವಾತಂತ್ರ್ಯ ದಿನದ ವಿಶೇಷ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ