ಆಗಸ್ಟ್ 15 ಭಾರತದ ಪಾಲಿಗೆ ಸಂಭ್ರಮದ ದಿನವಾಗಿದ್ದು, 78 ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಜ್ಜಾಗಿದೆ. ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆದ ಈ ದಿನವನ್ನು ದೇಶದಾದ್ಯಂತ ಹಬ್ಬದಂತೆ ಆಚರಿಸಲಾಗುತ್ತದೆ. ದೇಶದಲ್ಲೆಡೆ ತ್ರಿವರ್ಣ ಧ್ವಜ ಹಾರಡಲಿದ್ದು, ಪ್ರತಿ ಭಾರತೀಯನ ಹೆಮ್ಮೆಯ ಸಂಕೇತವೇ ಈ ನಮ್ಮ ರಾಷ್ಟ್ರಧ್ವಜ. ಈ ಬಾರಿ 78 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಈ ಅತ್ಯುತ್ತಮ ತ್ರಿವರ್ಣ ಧ್ವಜದ ಚಿತ್ರಗಳನ್ನು ವಾಟ್ಯಾಪ್ ಸ್ಟೇಟಸ್ ಹಾಗೂ ವಾಲ್ ಪೇಪರ್ ಆಗಿ ಹಾಕಿಕೊಳ್ಳಬಹುದಾಗಿದೆ.
1 / 5
ನಮ್ಮ ಧ್ವಜ ನಮ್ಮ ಹೆಮ್ಮೆ. ಭಾರತೀಯ ಧ್ವಜವು ಭಾರತೀಯ ಜನರಿಗೆ ಸ್ಫೂರ್ತಿಯ ಮೂಲವಾಗಿದೆ.
2 / 5
ತ್ರಿವರ್ಣ ಧ್ವಜವು ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯ ಸಂಕೇತವಾಗಿದ್ದು, ಭಾರತೀಯರು ಸ್ವಾತಂತ್ರ್ಯವನ್ನು ಪಡೆಯಲು ಮಾಡಿದ ತ್ಯಾಗವನ್ನು ನೆನಪಿಸುತ್ತದೆ.
3 / 5
ತ್ರಿವರ್ಣ ಧ್ವಜದ ಮೇಲ್ಭಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಕಡು ಹಸಿರು ಬಣ್ಣಗಳಿವೆ. ಮಧ್ಯ ಭಾಗದಲ್ಲಿ ಅಶೋಕ ಚಕ್ರವಿದ್ದು, 24 ಗೆರೆಗಳನ್ನು ಹೊಂದಿದೆ.
4 / 5
ಕೇಸರಿ ಬಣ್ಣವು ಧೈರ್ಯ, ತ್ಯಾಗ ಹಾಗೂ ಆತ್ಮವನ್ನು ಪ್ರತಿನಿಧಿಸಿದರೆ, ಬಿಳಿ ಬಣ್ಣವು ಶಾಂತಿ, ಸತ್ಯ ಮತ್ತು ಶುದ್ಧತೆಯ ಸಂಕೇತವಾಗಿದೆ. ಹಸಿರು ಬಣ್ಣವು ಸಮೃದ್ಧಿ, ಬೆಳವಣಿಗೆ ಮತ್ತು ಫಲವತ್ತತೆಯ ಪ್ರತೀಕವಾಗಿದೆ.
5 / 5
ಅಶೋಕ ಚಕ್ರದಲ್ಲಿರುವ 24 ಗೆರೆಗಳು ಮನುಷ್ಯನ 24 ಗುಣಗಳನ್ನು ಪ್ರತಿನಿಧಿಸುತ್ತದೆ.