ಸಿನಿಮಾ ಹೀರೋ, ಹೀರೋಯಿನ್ಗಳನ್ನು ಬಹಳ ಜನರು ಸುಖಜೀವಿಗಳೆಂದು ಭಾವಿಸುವುದುಂಟು. ಮೊದಲಿಗೆ, ನಟನೆ ಎಂಬುದು ಮೋಜು ಮಸ್ತಿ ಅಲ್ಲ, ಅದಕ್ಕೆ ಶ್ರಮ, ಬದ್ಧತೆ ಎಲ್ಲವೂ ಅಗತ್ಯ ಎಂಬುದನ್ನು ಅರಿಯಬೇಕು. ಹಾಗೆಯೇ, ನಟರಾದವರೆಲ್ಲರೂ ಸುಖ ಜೀವನದಲ್ಲಿ ಬೆಳೆದವರಲ್ಲ ಎಂಬುದು ಗೊತ್ತಿರಲಿ. ಕಷ್ಟಕರ ಹಿನ್ನೆಲೆ ಇರುವ ಅದೆಷ್ಟೋ ನಟರಿದ್ದಾರೆ. ಬಾಲಿವುಡ್ ಹೀರೋ ಜಾನ್ ಅಬ್ರಹಾಂ ಅಂಥವರಲ್ಲಿ ಒಬ್ಬರು. ಜಾನ್ ಬದುಕು ನಿಜಕ್ಕೂ ಸಾಕಷ್ಟು ಕುತೂಹಲಗಳನ್ನು ಒಳಗೊಂಡಿವೆ. ಹಣ ಉಳಿಸುವುದು, ಹೂಡಿಕೆ ಮಾಡುವುದು ಹೇಗೆಂದು ಇವರ ಜೀವನ ನೋಡಿ ಕಲಿಯಬಹುದು.